ಮಲತಾಯಿಯ ಜೋಗುಳ
ಜೋಗುಳವ ಹಾಡಲಿಲ್ಲ
ತೊಟ್ಟಿಲವ ತೂಗಲಿಲ್ಲ
ಆದರೂ ನಿನ್ನ ಯಾವುದಕ್ಕೂ
ಕಡಿಮೆ ಇರದ ಹಾಗೆ ಬೆಳೆಸಿದೇನಲ್ಲ….
ಅರಮನೆ ಯಲ್ಲಿಬೆಳಿಸಲಿಲ್ಲ
ಜೋಪಡಿಯಲ್ಲಿ ಮಲಗಿಸಿದೆನಲ್ಲ
ಅಮ್ಮ ಎಂದಾಗಲೆಲ್ಲ ಓಡಿ ಬಂದೇನಲ್ಲ,
ಆದರೂ ನಿನ್ನ ಯಾವುದಕ್ಕೂ ಕಡಿಮೆ ಇರದ ಹಾಗೆಬೆಳೆಸಿದೆನಲ್ಲ……
ಎದೆ ಹಾಲು ಉಣಬಡಿಸಲಿಲ್ಲ
ಗಂಜಿ ಕುಡಿಸಿದೆನಲ್ಲ
ತೊಡೆಯ ಮೇಲೆ ಹಾರೈಕೆ ಮಾಡಲಿಲ್ಲ.
ಆದರೂ ನಿನ್ನ ಯಾವುದಕ್ಕೂ ಕಡಿಮೆ ಇರದ ಹಾಗೆ ಬೆಳೆಸಿದಿನಲ್ಲ….
ನಿನ್ನ ತಾಯಿ ನಿಮ್ಮಪ್ಪ ಯಾರೆಂದು ಹೇಳಲಿಲ್ಲ,
ಕೇಳಿದವರಿಗೆಲ್ಲ ನಾನೇ ನಿಮ್ಮ ಅಮ್ಮ ಅಂತ ಹೇಳಿದೆನಲ್ಲ,
ಅಮ್ಮ ಅಂದಾಗಲೆಲ್ಲ ಮುದ್ದಾಡಿ
ಊರು ತುಂಬಾ ಸಿಹಿ ಹಂಚಿದೆನಲ್ಲ….
ಆದರೂ ನಿನ್ನ ಯಾವುದಕ್ಕೂ ಕಡಿಮೆ ಇರದ ಹಾಗೆ ಬೆಳೆಸಿದೆನಲ್ಲ….
ದೇವರಲ್ಲಿ ಸಾಕಷ್ಟು ಹರಕೆ ಕಟ್ಟಿಕೊಂಡೆನಲ್ಲ…
ನನ್ನ ಮಗನ ಕಷ್ಟ ನನಗೆ ಬರಲಿ ಎಂದು ಬೇಡಿದೆನಲ್ಲ
ಕೊನೆಗೂ ಮಗನ ನಗುವ ಕುಸಿಯನ್ನು ಕಂಡು ತಾಯಿಯ ಕಣ್ಣೀರು ಸುರಿಸಿದಳಲ್ಲ…..
ಆದರೂ ನಿನ್ನ ಯಾವುದಕ್ಕೂ ಕಡಿಮೆ ಇರದ ಹಾಗೆ ಬೆಳೆಸಿದಳಲ್ಲ…….
-
-
ಕಾಮನಬಿಲ್ಲು ಸಾಹಿತಿ ಮೌನೇಶ್. ಜೆಕೆ, ಕಲಬುರ್ಗಿ
-