ಗೆಳತಿಗೊಂದು ಅಹವಾಲು

ತೆರೆದ ತುಟಿಗಳ ನಡುವೆ
ತುಂಟ ತಿಳಿನಗೆ……
ಹೇಳಬಾರದೆ ವಿಷಯವ ?
ಬಿಟ್ಟು ಹಾರುವ ತೆರನಲಿ ಮನವ ಕುಣಿಸಿಹೆ ಮೆಲ್ಲಗೆ
ತೆರೆಯ ಬಾರದೆ ಮನಸನು…
ಮನಸು ಹೃದಯದ ಕಳವಳವ ನೀ ಹೇಳದೇ…
ನಾನೇನು ಬಲ್ಲೇನು ನಿನ್ನಂತರಂಗವ…

ಕಣ್ಣು ಕನಸುಗಳಗಲ ..
ಮನಸು ಭುವಿಯಗಲ..
ಯಾರ ಕೇಳಲಿ ನಿನ್ನಂತರಂಗದಗಲ….
ಮುಂದೆ ಮುಗುಳ್ನಗೆ ಹಿಂದೆ ತಿಳಿಮೌನ..
ಸುಪ್ತ ಸಾಮ್ರಾಜ್ಯವೆನೆ ನಿನ್ನದು…
ಕೃಷ್ಣ ಮೂಜಗವ ತೆರೆದ ತೆರನಲಿ….
ತೋರೆ ನೀರೆ ನಿನ್ನಂತರಂಗವ…

ತನ್ಮಯತೆ ನಡೆಯಲ್ಲಿ..
ಚಿನ್ಮಯತೆ ನುಡಿಯಲ್ಲಿ…..
ಉತ್ಸಾಹವದು ಬದುಕಿನಲಿ…
ಚೈತನ್ಯವದು ಹೃದಯದಲಿ…
ಹೇಳಲಾರೆಯ ವಿಷಯವ…
ನಕ್ಕಾಗ ಬೆಳ್ಳಿ ಚಂದ್ರಮ..
ಮುನಿಸಿನಲಿ ಕೆಂಪು ಸೂರ್ಯ..
ಎನಿತೆಲ್ಲವು ಸ್ಫೂರ್ತಿಯನಗೆ..
ತೋರೆ ನೀರೆ ನಿನ್ನಂತರಂಗವ..

ತನ್ಮಯತೆ ನಡೆಯಲ್ಲಿ ….
ಚಿನ್ಮಯತೆ ನುಡಿಯಲ್ಲಿ….
ಉತ್ಸಾಹವದು ಬದುಕಿನಲಿ…
ಚೈತನ್ಯವದು ಹೃದಯದಲಿ…
ಹೇಳಬಾರದೆ ವಿಷಯವ ?
ನಕ್ಕಾಗ ಬೆಳ್ಳಿ ಚಂದ್ರಮ…
ಮುನಿಸಿನಲಿ ಕೆಂಪು ಸೂರ್ಯ..
ಬಾರೆ ನೀರೆ ತೆರೆಯೆ ನಿನ್ನಂತರಂಗವ…

– ರೂಪರಾಣಿ ಪಟಗಾರ