ಸುರ ಸುಂದರಿ
**********
ಕಪ್ಪು ಸೀರೆ ರವಿಕೆ ತೊಟ್ಟು
ನಿಂತೆ ನೀನು ಸುಂದರಿ
ಕಣ್ಣ ನೋಟದಲ್ಲಿ ಎನ್ನ
ಮನವ ಸೆಳೆದೆ ಮೋಹದಿ ll

ದುಂಡು ಮುಖವು ಚಂದದಿಂದ
ನಗುವೆ ನೀನು ರೂಪಸಿ
ನೋಡಿ ನಿಂತೆ ಅಲ್ಲೆ ಉಳಿದೆ
ನೀನು ನನ್ನ ಪ್ರೇಯಸಿ ll

ಅರಳಿ ನಿಂತ ಹೂವಿನಂತೆ
ನುಡಿಯೆ ನೀನು ಮಲ್ಲಿಗೆ
ಅಂದದಿಂದ ಬಳಿಗೆ ಸೆಳೆವೆ
ನಗುವ ತೋರಿ ಮೆಲ್ಲಗೆ ll

ರಂಭೆಯಂತೆ ಶೋಭೆ ನಿನಗೆ
ಹೇಳು ನೀನು ಚೆಲುವೆಯೆ
ಯಾರ ನೋಡಿ ನಿಂತೆ ನೀನು
ಗಮನ ಸೆಳೆದ ಹುಡುಗಿಯೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ