ಬಿರಿದ ನೆಲ ನಕ್ಕಿತು…..

ಜನಕನ ಹೊಲದಲ್ಲಿ ನೇಗಿಲ ಹತ್ತಿ
ಪೆಟ್ಟಿಗೆಯ ಕೂಸು ಅವ್ವಾ ಎಂದಿತು
ನತದೃಷ್ಟ ಹಸುಗೂಸು ಅತ್ತಿತು
ಕಾಲಕೇಳಗಿನ ಬಿರಿದ ನೆಲ ನಕ್ಕಿತು

ಬೆಳೇದ ಮಗಳ ಮದುವೆ ಸ್ವಯಂವರ
ಧನುಷ್ಯ ಎತ್ತಲು ರಾಜರ ಆಗಮನ
ಲಂಕೇಶನ ಯತ್ನಕ್ಕೆ ಮಿಸುಗಲಿಲ್ಲ
ರಾಮ ಎತ್ತಿದಾ ಮುರಿದು ಹಾಕಿದಾ

ಅಯೋಧ್ಯೆಯಲಿ ಸಂಭ್ರಮ ಸಮಾರಂಭ
ಸಮಯ ಸಾಧಿಸಿ ಕೈಕೇಯಿಯ ವರ
ಭರತನಿಗೆ ಪಟ್ಟ, ರಾಮನಿಗೆ ವನವಾಸ
ದಶರಥನ ವ್ಯಥೆಗೆ ಬಿರಿದ ನೆಲ ನಕ್ಕಿತು

ಹಸಿದು ಬಂದ ಸಾಧುಗೆ ಭಿಕ್ಷೆ ನೀಡಲು
ಲಕ್ಷ್ಮಣರೇಷೇ ದಾಟಿದಳು ಸೀತೆ
ಮಾಯಾ ಜಿಂಕೆಯ ಬೆನ್ನು ಹತ್ತಿ
ಪಂಚವಟಿಯ ಬಿರಿದ ನೆಲ ನಕ್ಕಿತು

ಪುಷ್ಪಕ ವಿಮಾನ ಅಶೋಕ ವನದಲ್ಲಿಳಿಯಿತು
ಸುತ್ತಲೂ ರಾಕ್ಷಸಿಯರ ಕಾವಲು
ವೇಳೆ ವೇಳೆಗೆ ತ್ರಿಜಟಾ ಸ್ನೇಹ ಸಂದೇಶದಿಂದ
ಅಶೋಕವನ ಅ-ಶೋಕವನ ಆಗಿತ್ತು ಸೀತೆಗೆ

ಹನುಮ ಲಂಕೇಗೆ ಹಾರಿ, ಮುದ್ರಾ ತೋರಿದಾ
ಲಂಕಾ ಸುಟ್ಟು, ರಾಮಸೇತುವೇ ಕಟ್ಟಿದಾ
ಯುದ್ಧದಲಿ ರಾವಣ ಅಸುನೀಗಿದಾ
ದಶಾನನನ ಬಿರಿದ ನೆಲ ನಕ್ಕಿತು

ರಾಮನ ಪಟ್ಟ, ಸೀತೆಯ ಗೃಹಪ್ರವೇಶ
ಅಗಸನ ಮಾತು ಅಡ್ಡ ಬಂತು ರಾಜಗೆ
ಗರ್ಭಿಣಿ ಸೀತೆಯನು ಅಡವಿಗಟ್ಟಿದಾ
ಪ್ರಜಾಪಾಲನ ಬಿರಿದ ನೆಲ ನಕ್ಕಿತು

ಅವಳಿ ಮಕ್ಕಳು ಆಶ್ರಮದಲಿ ಬೆಳೆದರು
ಅಶ್ವಮೇಧ ಯಜ್ಞ ಕುದುರೆ ಕಟ್ಟಿ ಹಾಕಿದರು
ತಂದೆ ಮಕ್ಕಳ ಯುದ್ಧ ಎಂದು ಅರಿಯರು
ವಾಲ್ಮೀಕಿ ಹೇಳಿದರು ಯುದ್ಧ ಮುಗಿಯದು ಎಂದು

ಜೀವನವಿಡಿ ಅಗ್ನಿಪರೀಕ್ಷೆಯ ಸೀತೆ
ಭೂದೇವಿಗೆ ಮೊರೆ ಹೊಕ್ಕಳು ಭೂಕಂಪವಾಯಿತು
ಲವ-ಕುಶರು ದಂಡೇಗೆ ನಿಂತು ನೋಡುತ್ತಿದ್ದಂತೆ
ಜಾನಕಿ ಭೂಗತವಾದಳು, ಬಿರಿದ ನೆಲ ನಕ್ಕಿತು….

ಸುಭಾಶ್ಚಂದ್ರ ಸಕ್ರೋಜಿ. ಪುಣೆ