ಬಾಲ್ಯ ಕಾಲ
*******
ಎಷ್ಟು ಸುಂದರ ಬಾಲ್ಯ ಕಾಲವು
ಇಷ್ಟು ಬೇಗನೆ ಕಳೆಯಿತೆ
ಮತ್ತೆ ಮತ್ತೆಯು ಬರುವ ನೆನಪಲಿ
ಕಳೆವೆ ಈಗಿನ ಕಾಲದೆ ll

ಕಲಿವ ಸಮಯದಿ ಕಲಿಯಲಾರದೆ
ಈಗ ಕಲಿಯ ಬೇಕಿದೆ
ಸುರಿವ ಮಳೆಯಲಿ ನೆನೆಯಲಂದೂ
ಗೋಲಿ ಆಟವ ಆಡಿದೆ ll

ತುoಟ ತನವೂ ಮಕ್ಕಳಾಟವು
ಈಗ ನೆನಪಲಿ ಸಾಗಿದೆ
ಸ್ನೇಹ ತೋರುವ ಗೆಳೆಯ ಗೆಳತಿಯ
ನೆನಪು ಇಂದೂ ಕಾಡಿದೆ ll

ಸವಿಯ ನೆನಪಿದು ಎಂದು ಮರೆಯದೆ
ನಗುವ ಅಳುವಿನ ಮುಖದಲಿ
ಎಲ್ಲ ಕಾಲದ ಮಹಿಮೆ ಯಾಗಿದೆ
ದೇವನೊಬ್ಬನ ಕೈಯಲಿ ll

✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ