ಶಬರಿಗಿರೀಶ
********
ಸ್ವಾಮಿಯೇ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ ll

ಹರಿಹರ ಸುತನೆ ಪಾವನ ಮೂರುತಿ
ಶಬರಿಗಿರೀಶನೆ ಅಯ್ಯಪ್ಪ
ಮೋಹನ ರೂಪನೆ ಶ್ರೀಮಣಿಕಂಠ
ಸ್ವಾಮಿಯೇ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ ll

ಗಿರಿಯನೇರುತ ಬರುವ ಭಕ್ತರ
ಹರಸಲು ನೆಲೆಸಿಹೆ ಅಯ್ಯಪ್ಪ
ಮಹಿಷಿ ಮರ್ದನ ಸುರಜನ ವಂದಿತ
ದೇವಮುನೀಪ್ರಿಯ ಅಯ್ಯಪ್ಪ
ಸ್ವಾಮಿಯೇ ಶರಣಂ ಅಯ್ಯಪ್ಪ ll

ಕರುಣೆಯ ತೋರಿಸಿ ಭಕ್ತರ ಪೊರೆಯುವ
ಪಂದಳ ಕುವರನೆ ಅಯ್ಯಪ್ಪ
ಮಾಲೆಯ ಧರಿಸಿ ವ್ರತವನು ಮಾಡುತ
ಭಜನೆಯ ಮಾಡಿದೆ ಅಯ್ಯಪ್ಪ
ಸ್ವಾಮಿಯೇ ಶರಣಂ ಅಯ್ಯಪ್ಪ ll

ಇರುಮುಡಿ ಹೊತ್ತು ಬರುವೆನು ನಿನ್ನನು
ಕಾಣುವ ತವಕದಿ ಅಯ್ಯಪ್ಪ
ಭಕ್ತಿಯ ಅರ್ಪಿಸಿ ಪ್ರಸಾದ ಸೇವಿಸಿ
ಧನ್ಯತೆ ಪಡೆಯುವೆ ಅಯ್ಯಪ್ಪ
ಸ್ವಾಮಿಯೇ ಶರಣಂ ಅಯ್ಯಪ್ಪ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ