ಮೌನ ಯಾಕೆ
*********
ಏನು ಚಿಂತೆ ನಿನಗೆ ಬಂತು
ಏಕೆ ಹೀಗೆ ಕುಳಿತಿಹೆ
ಯಾರೊ ಏನು ಹೇಳಿದಂತೆ
ಈಗ ನಿನಗೆ ತೋರಿತೆ ll

ಪ್ರೀತಿ ಮಾಡಿ ಸೋತೆ ನಾನು
ದಿನವು ಹೀಗೆ ಇರುವೆನೆ
ತೋಷ ಕಂಡು ದಿನವೆ ಆಯ್ತು
ಮನದ ದುಃಖ ಸರಿವುದೆ ll

ಬರುವೆ ನೆಂದು ಹೇಳಿ ಬರದ
ಅವನ ನೆನಪು ಕಾಡಿದೆ
ಇವನಿಗಾಗಿ ಕಾದು ಕುಳಿತು
ಕಾಲವನ್ನು ಕಳೆಯಲೆ ll

ಮನದ ಆಸೆಯನ್ನು ಯಾರ
ಬಳಿಯು ಹೇಳಲಾರದೆ
ನೋವ ನುಂಗಿ ಬದುಕಲಾರೆ
ಎಂಬ ಚಿಂತೆ ಮೂಡಿದೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ