ಮಾತೆಗೆ ನಮನ
***********
ಮಗುವಿನ ಏಳಿಗೆ ಕಾಣುಲು ತಾಯಿಯು
ಹೊರುವಳು ಭಾರದ ಕಾಯಕವ
ಕಂಕುಳದಲ್ಲಿಯೆ ಮಗುವನು ಇರಿಸುತ
ದುಡಿಯುವ ಮಾತೆಗೆ ವಂದಿಸುವ ll

ನಾಡಿನ ಸಂಸ್ಕೃತಿ ಬೆಳೆಸುವ ತಾಯಿಯು
ಬಾಳಿನ ದಾರಿಗೆ ಬೆಳಕಾಗಿ
ಕಂದಗೆ ಮಮತೆಯ ಪ್ರೀತಿಯ ನೀಡುವ
ತಾಯಿಗೆ ವಂದನೆ ಮೊದಲಾಗಿ ll

ತನ್ನಯ ನೋವನು ಮರೆಯಿಸಿ ಮಾತೆಯು
ಮಗುವಿನ ಏಳಿಗೆ ಕಾಣುವಳು
ಮನದಲಿ ತೋಷವ ಬೆಳೆಸುವ ಮಗುವಲಿ
ಸ್ಫೂರ್ತಿಯ ತುಂಬುವ ದೇವತೆಯು ll

ಅವಳನು ಕಂಡರೆ ಸಾಕದು ದಿನವಿಡಿ
ಮನಸನು ತೆರೆಯುತ ಹೇಳುವೆನು
ಮಡಿಲನು ನೀಡುತ ವಿದ್ಯೆಯ ಕಲಿಸಿದ
ತಾಯಿಗೆ ನಿತ್ಯವು ನಮಿಸುವೆನು ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ