ಅವಳೇ…….

ಅವಳೇ ಅವಳು ಅವಳೆಂದರೆ ಅವಳು
ಮೋಹಕ ನಗೆಯವಳು
ಕೆಂದಾವರೆ ಕಣ್ಣವಳು
ನನ ಮನಸನು ಕದ್ದವಳು

ಬರಡು ಬಾಳಿಗೆ ಕಾರಂಜಿಯಾದವಳು
ನಾಗರ ಮುಡಿಯಲ್ಲಿ ಮಲ್ಲಿಗೆ ಮುಡಿದವಳು
ಬಾಳಪಯಣದಲ್ಲಿ ಜೊತೆಯಾಗಿರುವವಳು
ನಾ ಬರೊ ಹಾದಿಯನು ಕಾದುನಿಂದವಳು

ಚೆಂದ್ರನ ನಾಚಿಸುವ
ಬೆಳದಿಂಗಳ ಮನಸವಳು
ಹೃದಯವ ಮೀಟುತಲಿ
ಎನ್ನ ಮನದಲಿ ನಿಂದವಳು

ಕಡಲಿನ ಒಡಲವಳು
ಎನ್ನಾತ್ಮದ ಸಖಿಯವಳು
ಚಿಪ್ಪಲಿ ಅಡಗಿರುವ
ಮಾಣಿಕ್ಯದ ಮುತ್ತವಳು

ಸ್ನೇಹದ ಕಡಲವಳು
ಕೈ ಹಿಡಿದ ಸತಿಯವಳು
ಬಾಳು ಬೆಳಗಿದವಳು
ಬದುಕಿನ ಪ್ರತಿ ಹೆಜ್ಜೆ ಜೊತೆಯಾಗಿರುವವಳು
ಅವಳೇ….

✍️ ನಾಡಿಗ್ ವಿಜಯಲಕ್ಷ್ಮಿ ಮಂಜುನಾಥ್, ಕಡೂರು