ಪುಟ್ಟರಾಜ ಶರಣರು

ದೇವಗಿರಿಯ ದೇವ ಧರೆಗಿಳಿದು
ಜನರ ಉದ್ಧರಿಸಲು ಬಂದರು
ಮೂರು ಭಾಷೆಗಳಲಿ ಸಾಹಿತ್ಯ
ರಚಿಸಿ ಪ್ರಶಸ್ತಿ ಪುರಸ್ಕೃತರಾದರು

ವಾದ್ಯಗಳು ನಾಟ್ಯವಾಡಿದವು
ಶಾರದೆ ನಗುತ ನಲಿದಾಡಿದಳು
ಸಪ್ತಸ್ವರಗಳು ಕುಣಿದಾಡಿದವು
ಎಲ್ಲ ಸಂಗೀತಮಯವಾದವು

ನಾದಬ್ರಹ್ಮರಾಗಿ ಅಂತರಂಗದಲಿ
ಗುರು ಸ್ಮರಣೆಯ ಮಾಡುತಲಿ
ವೀಣೆಯ ಝೇಂಕಾರನಾದದಲಿ
ಒಂದಾದಿರಿ ಓಂಕಾರಗೈಯ್ಯುತಲಿ

ಸಾವಿರಾರು ವಚನಗಳ ಶರಣರು
ಇಷ್ಟಲಿಂಗ ಮಹಿಮೆ ಸಾರಿದಿರಿ
ಕಣ್ಣಿದ್ದವರ ಬಾಳು ಬೆಳಗಿದಿರಿ
ನಿನ್ನ ನೀ ಅರಿತೊಕೊ ಹೇಳಿದಿರಿ

ತಮ್ಮ ವಚನಗಳ ವಿಶ್ಲೇಷಣೆಯ
ಪ್ರಸಾದ ನಮಗೆಲ್ಲ ಮಹಾಪ್ರಸಾದ
ತಾವೇ ಕೈ ಹಿಡಿದು ಹರಸಿ ಬರೆಸಿರಿ
ಇದುವೇ ನಮ್ಮೆಲ್ಲರ ಪ್ರಾರ್ಥನೆ

    • ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ, ಪುಣೆ