ಅರಳಿದ ಹೂಗಳು
************
ಬೆಳೆದು ನಿಂತ ಹಸಿರ ಗಿಡದಿ
ಅರಳಿ ಚೆಂದ ಹೂವ ದಳವ
ಕಂಡ ಒಡನೆ ಕಿತ್ತು ತಲೆಯ ಮೇಲೆ ಮುಡಿಯಲು ll

ಹೆಚ್ಚು ದಿನವು ಉಳಿಯಲಾರೆ
ಎಂಬ ಚಿಂತೆ ಹೂವಿಗಿಲ್ಲ
ಚಂದದಿಂದ ಶೋಭೆ ತಂದು ಮುದವ ನೀಡಿದೆ ll

ಹಸಿರು ಗಿಡವ ನೋಡಲೆಷ್ಟು
ಚಂದ ಕಂಡು ಮನವ ಸೆಳೆದು
ಹರ್ಷ ಹಿಗ್ಗಿ ಮೂಡಿ ನಲಿವು ಗೆಲುವು ಹೆಚ್ಚಿದೆ ll

ನೆಡಲು ಬೇಕು ಹೂವ ಸಸಿಯ
ಮನೆಯ ಪಕ್ಕ ಅಲ್ಲಿ ಇಲ್ಲಿ
ಪಚ್ಚೆ ಬಣ್ಣ ಹಚ್ಚಿದಂತೆ ಸೊಗಸ ಚೆಲ್ಲಿದೆ ll

ಭೇದ ಭಾವ ತೋರ ಬೇಡ
ಬಾಧೆ ಕೊಡದೆ ಇರುತಲೆಂದು
ಹೂವಿನಂತೆ ಮನಸು ಬಿಚ್ಚಿ ಬೆರೆತು ಬಾಳುವ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ