ಅವಳೆಂದರೆ…..

ಅವಳೆಂದರೆ ಅವಳೇ ಬಲ್ಲೆಯೇನು
ಅಮೃತ ಸುಧೆ ಹರಿಸುವ ಕಾಮಧೇನು
ಸೃಷ್ಠಿಯ ಅದ್ಭುತ ಸಿಂಚನ ವಲ್ಲವೇನು
ಮಾತೃತ್ವದ ಖನಿ ಅಮ್ಮನು ತಾನು

ಸದಾ ಒಲವ ಮಳೆ ಸುರಿಸುವ
ನಲ್ಮೆಯ ಅಮೃತಧಾರೆಯು ನೀನು
ಧೃತಿಗೆಡದ ಆತ್ಮವಿಶ್ವಾಸದ ಬಲವೇ
ನಿನ್ನ ಬದುಕ ಬೆಳಗಿಸುವ ಸಿಹಿ ಜೇನು

ಮೇಣದಂತೆ ಕರಗುತೆಲ್ಲರ ಬದುಕಲಿ ಬೆಳಕನಿತ್ತ ಜ್ಯೋತಿ ತಾನು
ನಗುನಗುತ ಬದುಕುವಳು
ನೋವೆಲ್ಲಾ ನುಂಗುವಳು ತನ್ನೊಳಗೆ ತಾನು

ಒಂದೊಂದೇ ಹೂವುಗಳ ಹೆಕ್ಕುತ
ಕಟ್ಟಿಹಳು ಹೂವು ಮಾಲೆಯನು
ಆ ಮಾಲೆಯ ಹೂವುಗಳು
ನಾವೇ ಅಲ್ಲವೇನು

ತನಗಾಗಿ ಎಂದಾದರೂ
ಇನಿತನಾದರೂ ಬಯಸುವಳೇನು
ತನದೆಲ್ಲವ ಧಾರೆಯೆರೆದಿಹ
ತ್ಯಾಗ ಮಯಿ ಹೆಣ್ಣಲ್ಲವೇನು

✍️ ನಾಡಿಗ್ ವಿಜಯಲಕ್ಷ್ಮಿ ಮಂಜುನಾಥ್, ಕಡೂರು