ಕೃಷಿಕನ ಬಾಳುವೆ
ಮಣ್ಣಲಿ ಬೆಳೆಯುವ ಉಣ್ಣುವ ಚಂದದಿ
ತಣ್ಣನೆ ಆಗುವ ಹೊಟ್ಟೆಯಿದು
ಕಣ್ಣಲಿ ಕಾಯುವ ಬೆಣ್ಣೆಯ ತರದಲಿ
ಬಣ್ಣಿಸಲಾಗದ ಇಷ್ಟವಿದು
ಹೊಲದಲಿ ಕೃಷಿಕಗೆ ಛಲವನು ಕೊಡುವನು
ಸಲಹುವ ದೇವರು ತಾಬಂದು
ಕೆಲಸವ ಮಾಡಲು ಒಲಿಯುವ ತಾಯಿಯು
ಬಲವನು ಸೇರಿಸಿ ತಾನಿಂದು
ಸುಮ್ಮನೆ ಕುಳಿತರೆ ಘಮ್ಮನೆ ಬರುವುದ
ಬ್ರಹ್ಮನು ಮಾಡಿದ ಸೃಷ್ಟಿಯಲಿ
ಸಮ್ಮತಿ ಇರುವುದು ನಲ್ಮೆಯ ಬಯಸಲು
ಸಮ್ಮತವೊಂದೇ ಬಾಳಿನಲಿ
ದುಡಿದರೆ ಸಿಗುವುದು ದುಡಿಮೆಯ ಫಲವದು
ಬಿಡದೆಯೆ ದೇವನ ಪೂಜಿಸಲು
ಪಡೆಯಲಿ ಹೊನ್ನನು ನುಡಿಯಲಿ ಮುತ್ತನು
ನಡೆಯುವ ಸತ್ಯದಾ ದಾರಿಯಲು
✍️ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ