ಅಭಿಲಾಷೆ ಕಾದಂಬರಿ ಸಂಚಿಕೆ -41
ಆತ್ಮೀಯ ಓದುಗರಿಗೆ‌ ವಂದನೆಯನ್ನು ತಿಳಿಸುತ್ತಾ 🙏🙏

ಎನ್.ಮುರಳೀಧರ್, ವಕೀಲರು ಹಾಗೂ ಸಾಹಿತಿ ನೆಲಮಂಗಲ ಆದ ನನ್ನ 29 ನೇ ಕೃತಿಯಾದ ಅಭಿಲಾಷೆ ಕಾದಂಬರಿಯ 41 ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ.

  • ಹಿಂದಿನ ಸಂಚಿಕೆಯಲ್ಲಿ

ಆಸ್ಪತ್ರೆಗೆ ದಾಖಲಾಗಿದ್ಜ ತನ್ನಣ್ಣನನ್ನು ನೋಡಿ ಮರುಕಪಟ್ಟು ಅಣ್ಣನು ಆಸ್ಪತ್ರೆಗೆ ದಾಖಲಾದ ಬಗ್ಗೆ ಕಾರಣ ತಿಳಿಯಲು ವಿಕ್ರಮನು ತನ್ನ ತಂದೆ ಕುಳಿತಿದ್ದಲ್ಲಿಗೆ ಬರುತ್ತಾನೆ

  • ಕಥೆಯನ್ನು ಮುಂದುವರೆಸುತ್ತಾ

ವಿಕ್ರಮ್ ತನ್ನ ತಂದೆಯ ಬಳಿ ಬಂದಾಗ
ಅವನ ತಂದೆಯು ತನ್ನ ಮಗನಿಗೆ ಏನಾಗುತ್ತದೋ ಎಂದು ಆತಂಕದಿಂದ ಕುಳಿತಿರುವುದನ್ನು ನೋಡಿ
ಏನಪ್ಪಾ ಹೀಗಾಯ್ತು? ಅಣ್ಣ ಏನು ಮಾಡಿದ್ದಾನೆಂದು ಪೋಲೀಸ್ ರವರು ಹಿಡಿದಿದ್ದಾರೆಂದು ಪ್ರಶ್ನಿಸಿದಾಗ
ನಾನು ಏನೂಂತಾ ಹೇಳಲಪ್ಪಾ? ಎಲ್ಲವೂ ನನ್ನ ಕರ್ಮ ಅನುಭವಿಸಬೇಕಾಗಿದೆ ವಿಕ್ರಮ್ ಎಂದು ಅವನ ತಂದೆ ಅಳಲು ತೋಡಿಕೊಂಡಾಗ
ಅಪ್ಪಾ ಏನಾಗಿದೆ ಎಂದು ಸರಿಯಾಗಿ ಹೇಳಪ್ಪಾ ನಿನ್ನ ಒಗಟಿನ ಮಾತು ನನಗೆ ಅರ್ಥವಾಗುತ್ತಿಲ್ಲವೆಂಬ ವಿಕ್ರಮ್ ಮಾತಿಗೆ
ಎಲ್ಲವನ್ನೂ ಹೇಳುತ್ತೇನಪ್ಪಾ, ಆದರೆ ನೀನು ನಿಮ್ಮಣ್ಣನ ಮೇಲೆ ದ್ವೇಷ ಸಾಧಿಸದೆ, ಇದರಿಂದ ನಿಮ್ಮಣ್ಣನನ್ನು ಹೇಗೆ ಪಾರುಮಾಡಬೇಕೆಂದು ಯೋಚಿಸೆಂದು ಅವನ ಅಪ್ಪ ಹೇಳಲು
ಆಯ್ತಪ್ಪಾ ಮೊದಲು ನಡೆದಿರುವ ಘಟನೆ ಹೇಳು ಎಂದು ವಿಕ್ರಮ್ ಕೇಳುತ್ತಾನೆ.
ಅವನ ಅಪ್ಪ ಎಲ್ಲವನ್ನೂ ಸವಿವರವಾಗಿ ಹೇಳಿದಾಗ
ವಿಕ್ರಮ್ ಗೆ ಬೆಚ್ಚಿ ಬಿದ್ದಂತಾಗುತ್ತದೆ.
ಅಪ್ಪಾ ಅಣ್ಣನಾದವನು ತನ್ನ ತಮ್ಮನ ಪ್ರೇಮದ ಕಥೆಗೇ ಕೊಳ್ಳಿ ಇಟ್ಟಿದ್ದಾನಲ್ಲಪ್ಪಾ? ನಾನು ಹೇಗೆ ಆಶಾಗೆ ಮುಖ ತೋರಿಸಲಿ? ಅವಳಪ್ಪನ ಬಳಿ ಎರಡು ಕೋಟಿ ರೂಪಾಯಿ ಬಾಂಡ್ ಇದೆಯೆಂದು ಅಣ್ಣನಿಗೆ ಹೇಳಬಾರದಿತ್ತೆಂದು ಪಶ್ಚಾತ್ತಾಪ ಪಡುತ್ತಾ, ಛೇ ಇವನನ್ನು ಅಣ್ಣ ಎಂದು ಹೇಳಲು ನಾಚಿಕೆಯಾಗುತ್ತದೆ, ಇವನಲ್ಲದೆ ಬೇರೆಯವರು ಈ ರೀತಿ ಮಾಡಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು, ಈಗಲೂ ಅಣ್ಣ ಎನ್ನುವುದನ್ನು ನೋಡದೆ ಅವನಿಗೆ ತಕ್ಕ ಶಾಸ್ತಿ ಮಾಡಬೇಕೆನಿಸುತ್ತಿದೆ ಎಂದು ವಿಕ್ರಮ್ ರೋಶಾವೇಷದಿಂದ ನುಡಿಯಲು
ಯಾವುದೇ ಕಾರಣಕ್ಕೂ ಅಣ್ಣನ ಮೇಲೆ ದ್ವೇಷ ಸಾಧಿಸಬೇಡವೆಂದು ಅದಕ್ಕೇ ಕಣಪ್ಪಾ ನಾನು ಹೇಳಿದ್ದು ಎಂಬ ಅವರಪ್ಪನ ಮಾತಿಗೆ
ಅಪ್ಪಾ ಅಪ್ಪಾ ನನ್ನ ಜೀವನದಲ್ಲಿ ಆಟವಾಡಿದ್ದಾನೆ, ನಾನು ಪ್ರೀತಿಸುತ್ತಿದ್ದ ಹುಡುಗಿಯನ್ನೇ ಕಿಡ್ನಾಪ್ ಮಾಡಿ ಅವಳಪ್ಪನಿಗೆ ಹಣಕ್ಕೆ ಬೇಡಿಕೆ ಇಟ್ಟು ಈಗ ಪೋಲೀಸ್ ರವರ ಕೈಲಿ ಸಿಕ್ಕಿಕೊಂಡಿದ್ದಾನೆ, ಇವನನ್ನು ಹೇಗೆ ಬಿಡಿಸಬೇಕೆಂದು ತಿಳಿಯುತ್ತಿಲ್ಲವೆಂದು ವಿಕ್ರಮ್ ಹೇಳಲು
ಜಾಮೀನಿಗೆ ಅಪ್ಲಿಕೇಶನ್ ಹಾಕಿಸಬೇಕಪ್ಪಾ ಇನ್ನೇನು ಮಾಡುವುದಕ್ಕೆ ಆಗುವುದಿಲ್ಲ. ನಮ್ಮವರನ್ನು ನಾವು ಬಿಟ್ಚು‌ ಬಿಟ್ಟರೆ‌ ಅವರಿಗೆ ಬೇರೆ ಸಹಾಯ ಮಾಡುವವರು ಯಾರಿದ್ದಾರೆಂದು ವಿಕ್ರಮ್ ಅಪ್ಪ ನುಡಿಯಲು
ಅಪ್ಪಾ ನೀವೇನಾದರೂ ಮಾಡಿಕೊಳ್ಳಿ ನಾನು ಅವನ ಸುದ್ದಿಗೆ ಬರುವುದಿಲ್ಲವೆಂದು ವಿಕ್ರಮ್ ‌ನಿಷ್ಠೂರವಾಗಿ ಹೇಳಿದಾಗ
ಅವನು ನಿನ್ನ ಅಣ್ಣ ಕಣಪ್ಪಾ, ಇಬ್ಬರೂ ಸೇರಿ ಏನಾದರೂ ಮಾಡಿ ಅವನನ್ನು ಬಚಾವ್ ಮಾಡೋಣವೆಂದು ಅವನಪ್ಪನ ಮಾತಿಗೆ
ನೋಡೋಣವೆಂದಷ್ಟೇ ವಿಕ್ರಮ್ ಹೇಳಿ ತನ್ನಣ್ಣನಿದ್ದ ವಾರ್ಡಿಗೆ ಬಂದಾಗ
ಇನ್ಸ್ ಪೆಕ್ಟರ್ ರವರು ಅವನಣ್ಣನ ಹೇಳಿಕೆಯನ್ನು ಪಡೆಯುವುದು ಮುಗಿದಿದ್ದು, ವಿಕ್ರಮ್ ಬಂದಿದ್ದನ್ನು ನೋಡಿ ಈಗ ನಿನ್ನ ವಿಚಾರಣೆ ಮಾಡಬೇಕು ಎಂದ ತಕ್ಷಣ
ವಿಕ್ರಮ್ ಗೆ ಭಯವಾಗಿ ಸಾರ್ ನಾನೇನು ಮಾಡಿರುವೆನೆಂದು ವಿಚಾರಣೆ ಮಾಡುತ್ತೀರಾ ಎಂದು ಆತಂಕದಿಂದ ಕೇಳಿದಾಗ
ನಿಮ್ಮಣ್ಣನ ಜೊತೆ ನಿನ್ನದೂ ಪಾಲಿರಬೇಕು ಅದಕ್ಕೆ ವಿಚಾರಣೆ ಮಾಡುತ್ತೇವೆಂದು ಇನ್ಸ್ ಪೆಕ್ಟರ್ ಮಾತಿಗೆ
ಸಾರ್ ಸಾರ್ ನನಗೇನೂ ಗೊತ್ತಿಲ್ಲಾ ಸಾರ್ ದಯವಿಟ್ಟು ನನ್ನನ್ನು ನಂಬಿ ಎಂದು ದೈನ್ಯತೆಯಿಂದ ವಿಕ್ರಮ್ ಹೇಳಿದಾಗ
ಕೇಸ್‌ ವಿಚಾರಣೆಗೆ ಬರಲಿ ಆಗ‌ ಕರೆದಾಗ. ಹಾಜರಾಗಬೇಕೆಂದು ಇನ್ಸ್ ಪೆಕ್ಟರ್ ರವರು ಹೇಳುತ್ತಾ,
ಇವನು ಡಿಸ್ಚಾರ್ಜ್ ಆದ ನಂತರ ಎಫ್ ಐ ಆರ್ ದಾಖಲಿಸಿ ಕೋರ್ಟಿಗೆ ಪ್ರಡ್ಯೂಸ್ ಮಾಡೋಣವೆಂದು ಹೇಳಿ ಸ್ಟೇಷನ್ ಗೆ ಬಂದು ಕೋದಂಡರಾಂ ರವರಿಗೆ ಫೋನ್ ಮಾಡಿ, ಗುರುಗಳೇ ಕಿಡ್ನಾಪರ್ ಬೇರೆ ಯಾರೂ ಅಲ್ಲಾ, ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆಂದು ಹೇಳುತ್ತಿರುವ ಹುಡುಗನ ಅಣ್ಣನೇ ಆಗಿದ್ದಾನೆ. ಅವನ ಅಪ್ಪನ ಸಾಲ ತೀರಿಸಲು ಈ‌ ರೀತಿ ಮಾಡಿದನಂತೆ ಎಂದು ಇನ್ಸ್ ಪೆಕ್ಟರ್ ಹೇಳಿದಾಗ
ಏನು ಹೇಳುತ್ತಿದ್ದೀರಾ ಸಾರ್ ಈ ಮಾತು ನನಗೆ‌ ನಂಬುವುದಕ್ಕೆ ಆಗುತ್ತಿಲ್ಲವೆಂದು ಕೋದಂಡರಾಂ ಹೇಳಲು
ಗುರುಗಳೇ ಹಣ ಎನ್ನುವುದು ಎಂತಹವರ ಕೈಯ್ಯಲ್ಲಿ ಕೂಡಾ ಕೆಟ್ಟ ಕೆಲಸ ಮಾಡಿಸಿಬಿಡುತ್ತೆ. ಇದಕ್ಕೆ ಅವನು ಹೊರತಲ್ಲವೆಂದು ಇನ್ಸ್ ಪೆಕ್ಟರ್ ಹೇಳಿದಾಗ,
ನಿಮ್ಮ ಮಾತು ನಿಜ ಸಾರ್ ಆದರೆ ನಾಳೆ ಅವರ ಮನೆಯ ಬಂಧು ಗಳಾಗುವವರೆಂದು ತಿಳಿದೂ ಈ ರೀತಿಯಲ್ಲಿ ‌ಮಾಡುವುದು ಅಕ್ಷಮ್ಯ ಅಪರಾಧ ಸಾರ್ ಎನ್ನುತ್ತಾರೆ ಕೋದಂಡರಾಂ
ಓ ಹೋ ಹಾಗಾದರೆ ಈಗಲೂ ನಿಮ್ಮ ಮಗಳನ್ನು ಅವರ ಮಗನಿಗೆ ಕೊಟ್ಚು ವಿವಾಹ ಮಾಡುತ್ತೀರಾ ಎಂದಾಯಿತು ಅಲ್ಲವೇ ಎಂಬ ಇನ್ಸ್ ಪೆಕ್ಟರ್ ಮಾತಿಗೆ
ಅಯ್ಯೋ ಎಲ್ಲಾದರೂ ಉಂಟಾ ಸಾರ್, ನನ್ನ ಮಗಳೇನೋ ಪ್ರೀತಿ ಪ್ರೇಮವೆಂದು ಅವನನ್ನೇ ಮದುವೆಯಾಗುವುದಾಗಿ ಕುಣಿಯುತ್ತಿದ್ದಳು, ಈಗ ಅವಳ ಮನಸ್ಸನ್ನು ಬದಲಿಸಿ ದೂರ ಕರೆದುಕೊಂಡು ಬರಬೇಕೆಂಬ ಕೋದಂಡರಾಂ ಮಾತಿಗೆ
ಮೊದಲು ನಿಮ್ಮ ಮಗಳಿಗೆ ಅವನ ಸ್ನೇಹ ಬಿಡುವಂತೆ ಹೇಳಿ, ಇಲ್ಲದಿದ್ದರೆ ಕಿಡ್ನಾಪ್ ಕೇಸಲ್ಲಿ ವಿಚಾರಣೆ ‌ಮಾಡಬೇಕಾಗುತ್ತದೆ ಎಂದ‌ ತಕ್ಷಣ
ಕೋದಂಡರಾಂ ಗೆ ಭಯವಾಗಿ, ಅಯ್ಯೋ ನನ್ನ ಮಗಳು ಏನು ಮಾಡಿದ್ದಾಳೆಂದು ವಿಚಾರಣೆ ಮಾಡುತ್ತೀರಾ ಸಾರ್ ಎಂದು ಕೇಳಿದಾಗ
ಗುರುಗಳೇ ನಾವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಬೇಕು, ಕಿಡ್ನಾಪರ್ ಅವನ ತಮ್ಮ ಹಾಗೆಯೇ ನಿಮ್ಮ ಮಗಳು ನಿಮ್ಮಿಂದ ಹಣ ಪಡೆಯುವ ಸಲುವಾಗಿ ಈ ರೀತಿ ಕಿಡ್ನಾಪ್ ನಾಟಕವೇಕೆ ಆಡಿರಬಾರದು ಗುರುಗಳೇ? ಸತ್ಯ ಹೊರ ಬರಬೇಕಾದರೆ ಎಲ್ಲರನ್ನೂ ವಿಚಾರಣೆ ಮಾಡಬೇಕಾಗುತ್ತದೆಂದು ಇನ್ಸ್ ಪೆಕ್ಟರ್ ಹೇಳಿದಾಗ
ಬೇಡಾ ಸಾರ್ ನನ್ನ ಮಗಳು ಈ ಘಟನೆಯಿಂದ ತುಂಬಾ ಹೆದರಿದ್ದಾಳೆ, ಪುನಃ ಅವಳನ್ನು ಭಯಭೀತಳನ್ನಾಗಿ ಮಾಡುವುದು ಬೇಡಾ, ನಾನೇ ಅವಳನ್ನು ವಿಚಾರ‌ಮಾಡಿ ಅವಳ‌ಮನಸ್ಸಿನಲ್ಲಿ ಏನಿದೆಯೋ ತಿಳಿದುಕೊಂಡು ‌ನಿಮಗೆ ಹೇಳುತ್ತೇನೆ. ಆನಂತರ ನೀವು ನನ್ನ ಮಗಳನ್ನು ವಿಚಾರಣೆ ಮಾಡಿ ಎಂದು ಕೋದಂಡರಾಮ್ ಹೇಳಿದ ಮಾತಿಗೆ
ಆಗಬಹುದು ಗುರುಗಳೇ, ಆದರೆ ನಮಗೆ ಅನುಮಾನ ಬಂದರೆ ಮಾತ್ರ ವಿಚಾರಣೆ ಮಾಡಲೇಬೇಕಾಗುತ್ತದೆಂದು ಹೇಳಿ ಇನ್ಸ್ ಪೆಕ್ಟರ್ ರವರು ಫೋನ್ ಆಫ್ ಮಾಡುತ್ತಾರೆ.

ತಮ್ಮ ಮಗಳು ಕೂಡಾ ಇದರಲ್ಲಿ ಭಾಗಿಯಾಗಿರಬಹುದಾ? ನನಗಂತೂ ನಂಬಲು ಆಗುತ್ತಿಲ್ಲವೆಂದುಕೊಂಡು ಕೋದಂಡರಾಂ ರವರು ಮಗಳೇ ಇಲ್ಲಿ ಬಾ ನಿನ್ನ ಬಳಿ ಮಾತಾಡಬೇಕು ಎಂದು ಕರೆಯಲು
ಏನಂಥಾ ಅರ್ಜಂಟ್ ಕೆಲಸವಿದೆ, ಅವಳಿಂದ ಏನಾಗಬೇಕು? ಪಾಪ ತನ್ನನ್ನು ಕಿಡ್ನಾಪ್ ಮಾಡಿದ್ದಕ್ಕೆ ತುಂಬಾ ಹೆದರಿಕೊಂಡು ನಿದ್ದೆಯೇ ಮಾಡಿಲ್ಲ ಈಗ ರೆಸ್ಟ್ ತೆಗೆದುಕೊಳ್ಳುತ್ತೇನೆಂದು ಹೇಳಿ ಮಲಗಿದ್ದಾಳೆ, ಅವಳನ್ನು ಎಚ್ಚರ ಮಾಡುವುದು ಬೇಡ‌ಎಂದು ಅವರ ಪತ್ನಿ ನುಡಿದಾಗ
ಓ ಹೌದಾ ಈಗ ನನ್ನ ಅನುಮಾನ ಪರಿಹಾರವಾಯ್ತೆಂದು ಕೋದಂಡರಾಂ ನುಡಿಯಲು
ನಿಮ್ಮ ಅನುಮಾನವೇನೆಂದು ಹೇಳಬಾರದಾ‌ ಎಂಬ ಅವರ ಪತ್ನಿಯ ಮಾತಿಗೆ
ಕೋದಂಡರಾಂ ರವರು ಇನ್ಸ್ ಪೆಕ್ಟರ್ ಹೇಳಿದ್ದನ್ನು ತಿಳಿಸಿದಾಗ
ಇಲ್ಲಾ ರೀ ನಮ್ಮ ಮಗಳು ಅಂತಹವಳಲ್ಲಾ ರೀ, ಬಹಳ ಹೆದರಿದ್ದಾಳೆ, ಅಮ್ಮಾ ನಾನು ಬದುಕಿ ಬರುತ್ತೇನೆಂಬ ನಂಬಿಕೆಯೇ ಹೊರಟು ಹೋಗಿತ್ತಮ್ಮಾ ಎಂದು ಹೇಳಿದ್ದಾಳೆ.ಕಿಡ್ನಾಪರ್ ಗೆ ಸರಿಯಾದ ಶಿಕ್ಷೆ ಆಗಲು ಕೋರ್ಟಿನಲ್ಲಿ ಸಾಕ್ಷಿ ಹೇಳುತ್ತೇನೆ ಎಂದಿದ್ದಾಳೆ, ಅದೂ ಅಲ್ಲದೆ, ಮಲಗಿರುವಾಗಂತೂ ಘಟನೆ ನೆನಪಾಗುತ್ತೋ ಏನೋ ನಿದ್ದೆಗಣ್ಣಿನಲ್ಲಿ ಮಕ್ಕಳಂತೆ ಬೆಚ್ಚಿ ಬೆಚ್ಚಿ ಬೀಳುತ್ತಿದ್ದಾಳೆಂದು ಅವರ ಪತ್ನಿ ನುಡಿಯಲು
ನನಗೂ ನನ್ನ ಮಗಳ ಮೇಲೆ ನಂಬಿಕೆಯೇನೋ ಇದೆ, ಆದರೆ ಇನ್ಸ್ ಪೆಕ್ಟರ್ ರವರು ನನ್ನ ತಲೆಯಲ್ಲಿ ಅನುಮಾನದ‌ ಹುಳವನ್ನು ಬಿಟ್ಟಿದ್ದರು ಅದಕ್ಕೆ ಕೇಳಿದೆ ಎಂದು ಕೋದಂಡರಾಮ್ ‌ಹೇಳಲು
ನಮ್ಮ ಮಗಳು ಅಂತಹವಳಲ್ಲನೆಂದು ಇನ್ಸ್ ಪೆಕ್ಟರ್ ಗೆ ಹೇಳಿ ಎನ್ನುತ್ತಾರೆ ಅವರ ಪತ್ನಿ.
ಇಬ್ಬರೂ ಮಾತನಾಡುತ್ತಿರುವಾಗ
ಆಶಾಳಿಗೆ ಎಚ್ಚರವಾಗಿ, ಹೊರಗೆ ಬಂದು ಅಮ್ಮಾ ಊಟ‌ ಹಾಕಮ್ಮಾ ಎಂದು ಕೇಳಲು‌
ಬಂದೇ ಕಣಮ್ಮಾ ಎಂದು ಹೇಳಿ ಅವಳಮ್ಮ ಅಡಿಗೆ ಮನೆಗೆ ಹೋದಾಗ
ನನಗೂ ಹಸಿವಾಗುತ್ತಿದೆ ಊಟ ಹಾಕು ಎನ್ನುತ್ತಾ
ಕೋದಂಡರಾಂ ರವರು ಟೇಬಲ್ ಮುಂದೆ ಕುಳಿತುಕೊಳ್ಳುತ್ತಾರೆ

ಮುಂದುವರೆಯುತ್ತದೆ

ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶ ಏನೆಂದರೆ

ಒಂದು ಘಟನೆ ನಡೆದಾಗ, ಅದರ ಸನಿಹ ಇರುವವರೆಲ್ಲರನ್ನೂ ಅನುಮಾನದಿಂದ ನೋಡುವುದು ಸಾಮಾನ್ಯ ಸಂಗತಿಯಾಗಿದೆ. ತಮ್ಮದು ತಪ್ಪಿಲ್ಲವೆಂದು ಸಾಬೀತು ಪಡಿಸಿದರೂ ಅವರನ್ನು ನಂಬಲು ಹಿಂದೇಟು ಹಾಕುವವರೇ ಜಾಸ್ತಿ.
ಮಕ್ಕಳು ಎಷ್ಟೇ ತಪ್ಪು ಮಾಡಿದ್ದರೂ ಅವರ ಹಣೆಬರಹ ಏನಾದರೂ ಮಾಡಿಕೊಳ್ಳಲೆಂದು ಹೆತ್ತವರಿಗೆ ಬಿಡುವುದಕ್ಕೆ ಆಗುವುದಿಲ್ಲ. ಏಕೆಂದರೆ ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ್ದು ಹೆತ್ತವರ ಕರ್ತವ್ಯ. ತಮ್ಮ ಎದುರಿಗೆ ಮಕ್ಕಳು ಹಾಳಾಗಿ ಹೋಗುತ್ತಿದ್ದರೆ ಯಾರೂ ಕೂಡಾ ಸುಮ್ಮನಿರುವುದಿಲ್ಲ. ತಮ್ಮ ಕೈಲಾದ‌ ಮಟ್ಟಿಗೆ ಉಳಿಸಲು ಪ್ರಯತ್ನಿಸುವುದು ಸಹಜ.