🌹” ಮತ್ತೆರಿಸುವ ಕಣ್ಣೋಟ “🌹
==========================
ನಿನ್ನ ಆ ನೋಟ ನನ್ನೆದೆಯಲ್ಲಿ ಮತ್ತೆರಿಸುವ ಪ್ರೀತಿಗೆ ಆಹ್ವಾನ ನೀಡುವಂತಿತ್ತು ಗೆಳತಿ ಆದರೆ ನಿನ್ನ ನೆತ್ತಿಯಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನೆ ನಿನ್ನೆಗಲಿಗೆ ಹಾಕಿಕೊಂಡು ದೂರಾದೆ ಆ ನಿನ್ನ ನೋಟವೊಂದೆ ಸಾಕು ಈ ನಮ್ಮಿಬ್ಬರ ನಿಸ್ಸಂದೇಹ ನಿಸ್ವಾರ್ಥದ ಪ್ರೀತಿಗೆ !!
ಸುಮ್ಮನೆ ನನ್ನಿಷ್ಟದಂತೆ ನಾನು ಆಯಾಗಿ ಜೀವನ ದೂಡುತಿದ್ದೆ ಆ ನಿನ್ನ ಕೋಮಲ ಕಣ್ಣುಗಳಲ್ಲೇಕೆ ಪ್ರೀತಿ ಹೊರಸೂಸಿ ನಿನ್ನೆಡೆಗೆ ಬರಸೆಳೆದು ಇಂದೇಕೆ ಕಾರಣವಿಲ್ಲದೆ ಕೈ ಕೊಸರಿ ದೂರಾದೆ ಹೇಳಿಬಿಡು ಇಲ್ಲ ಸುಮ್ಮನೆ ಬಂದುಬಿಡು ಗರಿಯಿಂದ ಕಟ್ಟಿದ ನನ್ನ ಗುಬ್ಬಚ್ಚಿ ಗೂಡಿಗೆ !!..
””””””””””””””””””””'””””””””””””””'”””””””””””””'”””
✍️ರಾಘವೇಂದ್ರ ಎಚ್ ಹಳ್ಳಿ ಕೊಪ್ಪಳ, (ತಾಳಕೇರಿ)