ಮಸಣಕ್ಕೆ ಹೋದರು ವ್ಯಸನಕ್ಕೆ ಕೊನೆಯಿಲ್ಲ

ಕುಡಿತದ ವ್ಯಸನಕ್ಕೆ ಬಲಿಯಾದ ಗುಂಡನ
ಶವವನ್ನು ಮಸಣಕ್ಕೆ ತೆಗೆದುಕೊಂಡು ಹೋದರು.
ಅಲ್ಲಿ ಸೇರಿದ ಹಿರಿಯರು ಇವನ ಕುಡಿತದ  ಚಟ
ಚಟ್ಟಕ್ಕೆ ದುಡಿತು. ಇಲ್ಲಿಗೆ ಇವನ ಕುಡಿತವು ಮುಗಿದಿತ್ತು, ಜೀವನವು ಮುಗಿದಿತ್ತು
ಎಂದು ನಿಟ್ಟಿಸಿರು ಬಿಟ್ಟರು.

ಮೂರನೇ ದಿನಕ್ಕೆ ಗುಂಡನ ಒಪ್ಪ ಒರಣಕ್ಕೆ
ಬಂದ ಹಿರಿಯರು ಚೂರು ಚೂರು ಹೊಟ್ಟೆಗೆ ಎಣ್ಣೆಯನ್ನು ಬಿಟ್ಟುಕೊಂಡು.

ಗುಂಡನ ಕೊನೆಯ ಆಶೆ ಅಂತ ಗುಂಡನ ಸಮಾಧಿ ಮೇಲೆ
ಹೆಂಡವನ್ನು ಚೆಲ್ಲಿ, ಸಿಗರೇಟ್ ಅನ್ನು ಹಚ್ಚಿ,
ಸಮಾದಿಯ ಮೇಲೆ ಇಟ್ಟು ಕೆಲವಷ್ಟು ಜನ ಮನೆಯತ್ತ ನಡೆದರೆ, ಕೆಲವಷ್ಟು ಜನ ಹೆಂಡದ ಅಂಗಡಿಯ ಬಾಗಿಲಿನತ್ತ ಓಡಿದರು…..

ಮಸಣಕ್ಕೆ ಹೋದರು
ವ್ಯಸನಕ್ಕೆ ಕೊನೆಯಿಲ್ಲ.

(ಚಟ ಮತ್ತು ಚಟ್ಟ)

– ರಾಘವೇಂದ್ರ ಸಿಂತ್ರೆ
ರಾಜಕಮಲ್, ಶಿರಸಿ