ಗಣಪತಿ
*****
ಸತಿಯ ಕಂದನೆ ಗತಿಯ ತೋರಿಸು
ಮತಿಯ ಬೆಳಗಿಸು ಗಣಪನೆ
ನುತಿಪೆ ನಿನ್ನನು ಕರವ ಮುಗಿಯುತ
ಭಯವ ನೀಗಿಸು ದೇವನೇ ll

ಅಭಯ ನೀಡುತ ಪೊರೆಯೊ ಎನ್ನನು
ಜಗವ ಬೆಳಗುವ ಗಣಪತಿ
ಕರುಣೆಯಿಂದಲಿ ಕರವ ಹಿಡಿಯುತ
ವಿಜಯ ಕರುಣಿಸು ಗುಣನಿಧಿ ll

ಪಾಪ ನಾಶಕ ಶಾಪ ಮೋಚನ
ಗಿರಿಜೆ ಸುತನೇ ನಮಿಸುವೆ
ವಿಘ್ನ ನೀಗಿಸು ಭಕ್ತಿಯಿಂದಲಿ
ಪೂಜೆ ವ್ರತವನು ಗೈಯುವೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ