ಅರಳಿದ ಪ್ರೀತಿ
**********
ಅರಳಿ ನಿಂತ ಸುಮದ ಹಾಗೆ
ಹರುಷದಿಂದ ನಗುವೆಯ
ನುಡಿದ ಹಾಗೆ ನಡೆದು ಬಂದು
ಒಲವ ತೋರಿ ನಿಂದೆಯ ll

ಚಂದದಿಂದ ನಗುವ ತೋರಿ
ಎನ್ನ ಮುಂದೆ ಬಂದೆಯ
ನಿನ್ನ ನೋಡಲೆಂದು ಕಾದೆ
ನಿನ್ನ ಹೆಸರು ಹೇಳೆಯ ll

ಅಂದ ಉಡುಪು ತೊಟ್ಟ ನೀನು
ಎನ್ನ ಮನಸು ಸೆಳೆದೆಯ
ಒಲವ ಸ್ನೇಹ ಪ್ರೀತಿಯಿಂದ
ಗೆಲಿದೆ ನೀನು ಹೃದಯವ ll

ಗೆಳೆಯ ಗೆಳತಿ ಭೇಟಿಯಾದ
ತೋಷವನ್ನು ಕಾಣುವ
ಮನದ ಭಾವ ಹೃದಯ ರಾಗ
ಜೊತೆಗೆ ಸೇರಿ ಹಾಡುವ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ