ಬಾಲಕನ ಸ್ನೇಹ
***********
ಬಾಳೆ ಹಣ್ಣ ಕೊಡುವೆ ನಿನಗೆ
ಕೋತಿ ಬಳಿಯೆ ಹೇಳಿದೆ
ಅಂದ ನಗುವ ಬೀರುವಂತ
ಹನುಮ ನೀನ ಕೇಳಿದೆ ll

ಬಾಲ ನಗುತ ಸ್ನೇಹ ಕೊಡುವ
ಮುದ್ದು ಮುಖದ ಕಂದನೆ
ಚಂದದಿಂದ ಬಳಿಯೆ ಕುಳಿತ
ಕೋತಿಯನ್ನೆ ನೋಡಿರೆ ll

ಸಾಧು ಪ್ರಾಣಿ ಕಾಡಿನಲ್ಲಿ
ಸಿಗುವ ಹಣ್ಣು ತಿನ್ನುತ
ಮಗುವ ಪ್ರೀತಿ ನೋಡಿ ಮನಸು
ತುಂಬಿ ಬಂತು ಎನ್ನುತ ll

ತಾಯಿಯನ್ನು ಹುಡುಕಿ ಹೋಗಿ
ಸಿಗದೆ ಏನೊ ಕುಳಿತಿದೆ
ಅವನ ಹೃದಯದಲ್ಲಿ ಅರಳಿ
ನಿಂತ ಪ್ರೀತಿ ನಲಿದಿದೆ ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ