ಅವಳೆಂದರೆ ನನ್ನ ಮನದರಸಿಯು

ಸದಾ ಒಲವ ಮಳೆ ಸುರಿಸುವ
ನಲ್ಮೆಯ ಅಮೃತಧಾರೆಯು ನೀನು
ಧೃತಿಗೆಡದ ಆತ್ಮವಿಶ್ವಾಸದ ಬಲವೇ ನೀನು
ನಿನ್ನ ಬದುಕ ಬೆಳಗಿಸುವ ಸಿಹಿ ಜೇನು

ನನ್ನ ಮನದರಸಿಯು ಅವಳು
ಮನದ ಭಾವ ವೀಣೆಯನ್ನು ಮೀಟಿದವಳು
ಒಲುಮೆಯ ಸಪ್ತಸ್ವರವ ಹರಿಸಿದವಳು
ನಲ್ಮೆಯ ನಲ್ಲನ ಸಂಗಾತಿ ಅವಳು

ನನ್ನ ಅರಮನೆಯ ನಂದಾದೀಪ ಅವಳು
ಅವಳಿದ್ದರೆ ಮನೆಯಲ್ಲಿ ಸುಖ ಸಂತೋಷವು
ಅವಿರತ ದುಡಿಮೆಯ ನಗು ಮೊಗದ ಕಾಯಕಿ ಅವಳು
ಅವಳ ಸಾಂಗತ್ಯವೇ ನನಗೆ ಸ್ವರ್ಗ ಸುಖವು

ತಾನು ಉರಿದು ಪರರಿಗೆ ಬೆಳಕಾಗಿ ನಿಂತಿಹಳು ಅವಳು
ನಮ್ಮೆಲ್ಲರಿಗೂ ಸ್ಪೂರ್ತಿಯ ಸೆಳೆಯು ಅವಳು
ಯಾವ ಹೋಲಿಕೆಗೂ ಸಿಲುಕದ ನಕ್ಷತ್ರ ಅವಳು
ಪದಗಳಲ್ಲಿ ಕಟ್ಟಿಹಾಕಲು ಸಿಗದ ದೇವತೆ ಅವಳು

ಭೂದೇವಿ ಪ್ರಕೃತಿ ಮಾತೆಗೆ ಸರಿ ಸಮಾನಳು ನೀನು
ನಿನ್ನ ಒಲವ ಧಾರೆಯೇ ಪ್ರಪಂಚಕ್ಕೆ ಸವಿ ಜೇನು
ಅಕ್ಕ ತಂಗಿ ಅಮ್ಮ ಅಜ್ಜಿ ಇದುವೇ ನಿನ್ನ ರೂಪವು
ಎಂದೆಂದಿಗೂ ಮಾಸದಿರಲಿ ನಿನ್ನ ನಗುವೆಂಬ ಸಿಹಿ ಜೇನು

– ರವೀಂದ್ರ ಸಿ.ವಿ.
ವಕೀಲರು, ಮೈಸೂರು