ಬೇಕು ಜೊತೆಗಾರ
ಬೇಕು ಜೊತೆಗಾರ ಬಾಳಿಗಾಧಾರ
ಬದುಕಿನ ಬಂಡಿಯು ಚಲಿಸಲು
ಸುಖ ದುಃಖ ಹಂಚಿಕೊಳ್ಳಲು
ಸುಂದರ ಜೀವನದ ಸಾಹುಕಾರ
ಎಲ್ಲೆಲ್ಲಿಯೂ ಶಿವಶಕ್ತಿಯ ಸಂಚಾರ
ಹೆಣ್ಣು ಗಂಡು ಬಂಧನದ ಮಮಕಾರ
ಅದಕೆಂದೇ ಶಿವ ಅರ್ಧನಾರೀಶ್ವರ
ಜೊತೆಗಾರನಿಲ್ಲದ ಬಾಳು ಬೇಸರ
ಪ್ರೇಮಗೀತೆ ಹಾಡಲು ಜೋಡಿದಾರ
ಜಗವನ್ನೇ ಗೆಲ್ಲಿಸುವ ಮೋಡಿಗಾರ
ನಕ್ಕು ನಗಿಸಿ ನಲಿಯುವ ಕಲೆಗಾರ
ಒಲವ ಶಾಂತಿ ನೆಮ್ಮದಿಯ ಆಗರ
ಸಾಹಿತ್ಯ ಸಿರಿಯನರಿತ ಬರಹಗಾರ
ಆತ್ಮಾನಂದವರಿತ ಕುಶಲಗಾರ
ಹೃದಯವಂತ ನನ್ನ ಜೊತೆಗಾರ
ಹಣೆಯ ಶೃಂಗಾರ ಬಾಳಬಂಗಾರ
– ಅನ್ನಪೂರ್ಣ ಸಕ್ರೋಜಿ ಪುಣೆ