ಕನ್ನಡ ಕನ್ನಡಿ

ಕನ್ನಡ ಕನ್ನಡಿ ಸುಸ್ಪಷ್ಟ
ಮೊಗದಲಿ ಲಕ್ಷಣ ಅದೃಷ್ಟ
ಸೌಂದರ್ಯ ತೋರಿಕೆ ಬಹು ಶ್ರೇಷ್ಟ

ಹಸಿರಿನ ಸಾಲು ಹಸುವಿನ ಹಾಲು
ದೃಷ್ಟಿಗೆ ಸೃಷ್ಟಿಗೆ ಪೌಷ್ಟಿಕ ಪಾಲು
ಮೈಮರೆಸುತ ಕುಣಿಸುವ ಮಾಲು

ಕನ್ನಡಿಯಂತೆ ಹೊಳೆಯುವ ನೀರು
ಬಾಯಾರಿಕೆಗಿಲ್ಲಿ ಅಮೃತವು ನೀರು
ಜೀವದ ಹಿಡಿತಕೆ ಅಗತ್ಯವು ನೀರು

ಜಾನಪದ ಆಟ ನೃತ್ಯವು ಕೂಟ
ಕನ್ನಡಿ ಮುಂದೆ ವೇಷದ ನೋಟ
ವಿಧವಿಧ ಸೊಗಡಿನ ಹಳ್ಳಿಯ ಊಟ

ಕನ್ನಡ ಕನ್ನಡಿ ಭಾವವು ಲಯಕರ
ಕಾಂತಿಯು ಪ್ರಖರ ಶಾಂತಿಗೆ ಆಕರ
ಮುಖಾರವಿಂದದಿ ಸಖ್ಯವು ಸುಖವು ಅಮರ

– ಕಲ್ಪನಾಅರುಣ