ಅಂಗಾರ ಬಂಗಾರ
ತೃಪ್ತಿ ಇಲ್ಲದ ಜೀವನ
ಶಾಂತಿ ನೆಮ್ಮದಿ ಇಲ್ಲದ ಬದುಕು
ಕಣ್ಣು ತುಂಬಾ ನಿದ್ದೆ ಇಲ್ಲದ ರಾತ್ರಿ
ರಾಶಿ ರಾಶಿ ಹಣ ಇದ್ದರು ಕೂಡ
ಬೇಕಾದ ಆಹಾರ ತಿನ್ನಲು
ಹಲ್ಲು ಇಲ್ಲದ ಬಾಯಿ.

ರೋಗ ರುಜಿನದ ದೇಹ
ಹದಗೆಟ್ಟ ಆರೋಗ್ಯ
ಮನೆತುಂಬ ಬಂಗಾರ
ಮನಸಲ್ಲಿ ಅಂಗಾರ
ಇದ್ದರೇನು ಫಲ.

ತೃಪ್ತಿ ಇಲ್ಲದ ಬದುಕು
ಜೀವಂತ ಶವದಂತೆ.
ಬೆಂಕಿ ಶವವನ್ನು ಸುಟ್ಟರೆ.
ಅತೃಪ್ತಿ ಮನಸ್ಸನ್ನು ಸುಟ್ಟಿತು.

ಲೇಖಕರು: ಶ್ರೀ ರಾಘವೇಂದ್ರ ಸಿಂತ್ರೆ, ರಾಜ್ ಕಮಲ್, ಶಿರಸಿ