Table of Contents

ಪ್ರೇಮ

ಪ್ರೇಮವೆಂದರೆ ””””’
ಕ್ಯಾಲೆಂಡರಿನೊಂದಿಗೆ
ದಿನಾಂಕ ಗುರುತಿಸಿ
ಗುಲಾಬಿ ಹೂ ಕಿತ್ತು
ಮಂಡಿಯೂರಿ ಕೇಳಿಕೊಳ್ಳುವ, ಬೇಡಿಕೊಳ್ಳುವ
ನಿವೇದನೆಯಲ್ಲ !
ಎಲ್ಲ ಕಾಲಕೂ
ಮಿಡಿದು ತುಡಿಯುವ ಸ್ವಚ್ಚದಿ ಕಂಗೊಳಿಸುವ ನಿನ್ನಯ
ನಿರ್ಮಲ ಭಾವ !

ಪ್ರೇಮವೆಂದರೆ ””””’
ಅರ್ಧರಾತ್ರಿಯಲಿ
ನಶೆ ಬೀಜ ತುಂಬಿಕೊಂಡು ನಿರ್ಮಲವೆಂಬ
ಸಭ್ಯತೆಯ ಗೆರೆ ದಾಟಿ ಅದ್ದು ಮೀರಿ
ಕುಣಿಯುವುದಲ್ಲ !
ತಂತಾನೇ ಸೃಜಿಸಿ
ಕಂಗಳೊಳಗೆ
ಸರಿದಾಡುವ, ಸರಿದೂಗುವ ನಿನ್ನ
ಅವ್ಯಕ್ತವಾದ, ಅಭಿವ್ಯಕ್ತವಾದ ಭಾಷೆ !

ಪ್ರೇಮವೆಂದರೆ ””””’
ನಿಗದಿಯಾದ ಬೆಲೆಗೆ
ತಕ್ಕಷ್ಟು ತೂಗುವ
ಸಂತೆಯೊಳಗಣ ವಸ್ತುವೆಂಬಂತೆ ಭಾವಿಸುವ
ಸಾಮಗ್ರಿಯಲ್ಲ !
ಫಲ ನಿರೀಕ್ಷಿಸದೆಯೆe
ಬಲವಾಗೊಳ್ಳುವ ನಿನ್ನಯ
ನಿರಾಕಾಂಕ್ಷ ನಿರಪೇಕ್ಷ ಕ್ರಿಯೆ

✍️ ರಾಘು ಎಚ್. ಹಳ್ಳಿ, ಕೊಪ್ಪಳ