Table of Contents

ರೈತನೆಟ್ಟ ಬೀಜ ಸಾಹಿತಿಯಿಟ್ಟ ಬಿಂದು
ಹುಸಿ-ಘಾಸಿಗೊಳಿಸಲಾರದು ಮತ್ತೊಂದು
ಇದ್ದಡೆ ಅವರ ನಡೆ-ನುಡಿ ಪ್ರಗತಿ ಕಡೆ
ಬಿರುಕು ಬಾರದಿರಲಿ ಹಲ-ಕುಲ-ನೆಲವೆಡೆ

ನೀರು ರೈತನಿಗೆ ರಕ್ತವಾದರೆ ಸಾಹಿತಿಗೆ ಅಕ್ಷರ
ಈ ಚೇತನಗಳೇ ಕಾರಣ ನಾವಾಗಲು ಸಾಕ್ಷರ
ರೈತನ ಜೀವನ ಸಾಹಿತಿಯ ಬದುಕು
ಧರ್ಮ-ದರ್ಶನ, ಸಂಸ್ಕೃತಿಗೆ ಸ್ಫೂರ್ತಿದಾಯಕ

ರೈತ ಬೆನ್ನೆಲುಬಾದರೆ ಅರಿವುಣಿಸುವ ಸಾಹಿತಿ
ಅವರುಗಳಿಲ್ಲದ ನಮ್ಮಿ ಬದುಕು ತಪ್ಪುವುದು ಗತಿ
ಅವರ ಸಾವು ನಿಸರ್ಗ-ದೇವತೆಗೆ ನೋವು
ಬಾರದಿರಲಿ ಸಾವು ಮರೆಯಾಗಲಿ ನೋವು

ಓ ಭಾರತ ಮಾತೇ…! ಉದ್ಧರಿಸು ನಿನ್ನೀ ಚೇತನಗಳನ್ನ
ದೇಹವಳಿದು ಮಣ್ಣು ಸೇರುವ ಮುನ್ನ
ಕೇಳಿಸಿಕೋ ನಮ್ಮಿ ಕರುಳ ಕುಡಿಯ ಕೂಗನ್ನ
ಈಡೇರಿಸು ಬಾ ಅವರವರ ಬಯಕೆಗಳನ್ನ

 – ಲಾಲಸಾಬ ಹುಸ್ಮಾನ ಪೆಂಡಾರಿ
 ಕಾವ್ಯನಾಮ:- ಕವಿತ್ತ ಕರ್ಮಮಣಿ
 ಸಾ:- ನಾಗರಮುನ್ನೋಳಿ