✍️ದೇವಿದಾಸ ಬಿ. ನಾಯಕ, ಅಗಸೂರು
ಶಿಕ್ಷಕರು: ರಂಗಾಪುರ, ಶಿರಸಿ, ಉತ್ತರ ಕನ್ನಡ

ಪ್ರಾರಬ್ಧ

ಯಾವ ಜನ್ಮದ ಕರ್ಮವೋ
ಯಾವ ಜನ್ಮದ ಪಾಪವೋ
ತಡೆಯಲಾಗದ ಕಷ್ಟವೋ
ಅಳಿಸಲಾಗದ ದುಃಖವೋ

ಇಂದು ಕಾಣುವ‌ ನೋವಲಿ
ಜೀವ ಇರದ ಕಾಲಲಿ
ವ್ಯಥೆ ಯಾರಿಗೆ ಹೇಳಲಿ?
ದಿನವು ಹೇಗೆ ನೂಕಲಿ?

ನಿತ್ಯ ಸಾಯುತ ಬದುಕಲು
ಒಂದೇ ಸಮನೆ ನರಳಲು
ಕಾಣದು ಹಿಂಸೆಯ ಅಳಲು
ಬಿಡದು ವಿಧಿಯ ಕಾವಲು

ಹಣೆಬರಹ ತಿಳಿಯದು
ಇರಲು ಸಾವು ಬಾರದು
ತಪ್ಪಿಗೆ ಶಿಕ್ಷೆಯು ತಪ್ಪದು
ಉಸಿರು ಶಾಶ್ವತವಲ್ಲದು