ಕನ್ನಡ ಕವನ ಮತ್ತು ಲೇಖನಗಳು

1. ಶ್ರಾವಣ ಸಂಭ್ರಮ ಹಿಂದೂ ಮಾಸಗಳ ರಾಜ ಬಂದಿತು ಶ್ರಾವಣ. ಬಹು ಹಬ್ಬಗಳ ಆಗರ ತಂದಿತು ಶ್ರಾವಣ. ಪ್ರಕೃತಿಯ ಮುಡಿಗೆ ಹಸಿರು ತೋರಣ. ಬಗೆ ಬಗೆಯ ಹೂಗಳ ಚೆಲುವಾದ ಬಣ್ಣ. ಸದ್ಭಾವ ಶಾಂತಿಯ ವಾತಾವರಣ. ಭಕ್ತಿಯ ಭಾವನೆಗಳ ಭಕ್ತರ ಜಾಗರಣ. ಇಷ್ಟದೇವರ…

Read more

ಬದುಕು-ಜೀವನ-ಸಾಧನ

ಬದುಕು-ಜೀವನ-ಸಾಧನ ಬದುಕು ಬಹು ಆಯಾಮಿ ಪದ ನಾವು ಬಂದು ಹೋಗುವ ನಡುವಿನ ಕಣ್ಣು ಮುಚ್ಚಾಲೆಯಾಟ. ಆ ಚಾಲಾಕಿ/ಮಾಯಾವಿ ಆಡಿಸುವ ಸೋಲು ಗೆಲುವುಗಳ ಚದುರಂಗದಾಟ.. ದೊಂಬರಾಟ. ಏರು ಇಳಿತದ ಜೋಕಾಲಿಯಾಟ. ಅಂತೆಕಂತೆಗಳ ಸಂತೆಯ ಸುಖ-ದುಃಖಗಳ ತೂಕದಾಟ. ಒಮ್ಮೆ ಸಿಕ್ಕು,ಒಮ್ಮೆ ಬಿಕ್ಕುವಂತೆ ಮಾಡುವ ಜೂಜಾಟ.…

Read more

ಸಿಗದ ಶಾಂತಿಯ ಬೆನ್ನು ಹತ್ತಿ

ಸಿಗದ ಶಾಂತಿಯ ಬೆನ್ನು ಹತ್ತಿ ಹೌದು ದುಬಾರಿ ಈ ಶಾಂತಿ ಎಂಬೋ ಸರಕು!.ಸಿಗದೇ ಹೋಗುವುದು ಅರ್ಥಕ್ಕೂ!. ತೂರಿ ಹೋದರೆ ಶಾಂತಿಯ ಪಟ್ಟಕದಿ ಮುಂದೆ ಕಾಣುವವು ಸಂತಸ, ಸಮೃದ್ಧಿ,ತೃಪ್ತಿಗಳ ವಿವಿಧ ವರ್ಣಗಳು. ನಿಸ್ವಾರ್ಥ ಸೇವೆಯ ದಿನ! ನಮ್ಮನ್ನರಿತ ಜನ! ಗೆಲುವಿನ ಮನ! ದೈವದ…

Read more

ಪ್ರಾಕೃತಿಕ ಅಸಮತೋಲನ

ಪ್ರಾಕೃತಿಕ ಅಸಮತೋಲನ “”””””””””””””” ಭುವಿಯ ಮೇಲಿಷ್ಟು ವ್ಯಗ್ರವೇಕೆ ವರುಣ ಅನುರುಣಿಸುತ್ತಿದೆ ಅಷ್ಟ ದಿಕ್ಕುಗಳಲ್ಲೂ ಆಕ್ರಂದನ ಮುಗಿಬಿದ್ದ ಮುಗಿಲ ಮಾರಿಯ ಮಾಯೆ ಎತ್ತ ನೋಡಿದರತ್ತ ಆತಂಕದ ಛಾಯೆ ಭೋರ್ಗರೆವ ಜಲಪ್ರಳಯದಿ ರೈತನ ಕನಸು ಕಮರಿ ರುದ್ರ ಶಿವತಾಂಡವ ನರ್ತನದ ಮೊರೆತ ಬೆಟ್ಟಗುಡ್ಡ ಪರ್ವತವೇ…

Read more

ಕಾಪಿಡುವ ನಾರಿ ಸಂಕುಲವ

ಕಾಪಿಡುವ ನಾರಿ ಸಂಕುಲವ ಜಗದ ಅತಿ ದೊಡ್ಡ ಸಂಭ್ರಮದ ಸೃಷ್ಟಿ ಹೆಣ್ಣು ಕರುಣಾ ಸಿಂಧು ಬಾಂಧವ್ಯದ ಬಿಂದು ಈ ಹೆಣ್ಣು ಪತ್ನಿ ಮಗಳು ತಾಗಿಯಾಗಿಹಳು ಜಗದ ಕಣ್ಣು ಅವಳೆಂದು ಆಗದಿಹಳು ಮಾನವ ಜನ್ಮಕ್ಕೆ ಹುಣ್ಣು ಸದಾಚಾರ ಸಚ್ಚಾರಿತ್ರ್ಯ ಉಳ್ಳವಳು ನಾರಿ ತಿರುಗಬೇಡ…

Read more

ಮಾನಸ ಪೂಜಿತ ಲೋಕಾಭಿರಾಮ

ಮಾನಸ ಪೂಜಿತ ಲೋಕಾಭಿರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಜಗವನ್ನ ಉದ್ದರಿಸು ನೀ ಕೋದಂಡರಾಮ ಭವ ಬಂಧ ಬಿಡಿಸೆನ್ನ ಜಾನಕಿ ರಾಮ ನನ್ನ ಜೀವನ ಹಸನಾಗಿಸೊ ಲೋಕಾಭಿರಾಮ ಪುಷ್ಯ ನಕ್ಷತ್ರದಂದು ರಘುವಂಶದಿ ಜನಿಸಿದ ದಶರಥ ರಾಮ ತ್ರೇತಾಯುಗದ ಹರಿಕಾರ ನಮ್ಮ ನೆಚ್ಚಿನ…

Read more

ಅಬಕಾರಿ ಕಥೆಗಳು – 1. ಸಂಗವ್ವ

ಅಬಕಾರಿ ಕಥೆಗಳು – 1. ಸಂಗವ್ವ ಅತ್ತಿಕಾಲ ಹೋಗಿ ಸೊಸಿಕಾಲ ಬಂದ ಬಳಿಕ ಸಂಗವ್ವನ ಬಾಳೇವು ಬ್ಯಾಡಬ್ಯಾಡ. ಇದ್ದೊಬ್ಬ ಮಗಳನ್ನ ಕೊಟ್ಟ ಮ್ಯಾಲೆ ಗೂಗೆಂಥ ಬೀಗರ ಮನಿಕಡೆ ಕಾಲಾಕಾಕ ಮನ್ಸು ಬರ್ತಿದ್ದಿಲ್ಲ. ಹಬ್ಬಕ ಕರಿಯಾಕೋದ್ರ ಮಗುಳು ಅನ್ನಾಕಿ ಗಂಡನ ಕಡೆ ಮಕ…

Read more

ಕಲ್ಯಾಣ ಕಾರುಣ್ಯ ಒಂದು ಅವಲೋಕನ…….

ಕಲ್ಯಾಣ ಕಾರುಣ್ಯ ಒಂದು ಅವಲೋಕನ……. ಹೈದ್ರಾಬಾದ ಕರ್ನಾಟಕದ ಲೇಖಕರೂ ಹಾಗೂ ಉಪನ್ಯಾಸಕಿ ಡಾ. ಶೀಲಾದೇವಿ ಬಿರಾದಾರ ಯವರು ಬಂಡಾಯ ಸಾಹಿತ್ಯ ದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಇವರು ನಾಲ್ಕಾರು ಕೃತಿರಚನೆ ಮಾಡಿದ್ದಾರೆ. ಅನ್ಯಾಯ ಮೋಸ ಅನಾಚಾರ ಅತ್ಯಾಚಾರ ಹೀಗೆ ಹಲವಾರು ಸಮಸ್ಯೆಗಳನ್ನು…

Read more

ಡಾ. ಬಂಡಳ್ಳಿ ರಮೇಶ್ ಅವರ ಕವನಗಳು

ಡಾ. ಬಂಡಳ್ಳಿ ರಮೇಶ್ ಅವರ ಕವನಗಳು 1. ಬದುಕಿದರೆ ಬದುಕಬೇಕು ಬದುಕಿದರೆ ಬದುಕಬೇಕು ಬದುಕಿದರೆ ಬದುಕಬೇಕು ಆತ್ಮ ಸಾಕ್ಷಿಗೆ ಮೋಸ ಮಾಡದಂತೆ ಬದುಕಿದರೆ ಬದುಕಬೇಕು ನಿನ್ನ ಅಂತರಾಳ ಮೆಚ್ಚುವಂತೆ..! ಬದುಕಬೇಕು ನಿನ್ನ ಶತ್ರುಗಳು ತಲೆ ಎತ್ತಿ ನೋಡುವಂತೆ ಬದುಕಬೇಕು ನಿನ್ನ ವಿರೋಧಿಗಳು…

Read more

ಪತ್ರ ಪ್ರೀತಿ ಸಂಸ್ಕೃತಿ

ಪತ್ರ ಪ್ರೀತಿ ಸಂಸ್ಕೃತಿ “”””””””””””””””””””””””” ಪತ್ರ ಬರಹ ಸಂಸ್ಕೃತಿ ಸರಿದು ಓದು ಬರಹಕ್ಕೆ ಮೊಬೈಲ್ ಮಾಹಿತಿ ವಿಶ್ವಕೋಶ ತುಂಬಿದ ಬೇಕು ಬೇಡಗಳ ಮಗ್ನತೆ ಗ್ರಹಿಕಾ ನೀತಿಯಷ್ಟೇ ಅಡಗಿಹ ದುರ್ನೀತಿ ಕುಳಿತಲ್ಲೇ ಬೇಕಾದ್ದು ಕಣ್ಣಾಡಿಸಿ ಒತ್ತುತ ಕಾಸಿದ್ರೆ ಕೈಲಾಸ ಬಳಿಯಲ್ಲಿ ಬರುತ್ತಾ ಕೊರಿಯರ್…

Read more

ಸಾಹಿತಿ ಹಾಲೇಶ್ ಹಕ್ಕಂಡಿ ಅವರ ಕಿರು ಪರಿಚಯ

ಸಾಹಿತಿ ಹಾಲೇಶ್ ಹಕ್ಕಂಡಿ ಅವರ ಕಿರು ಪರಿಚಯ ಹೆಸರು :- ಹಾಲೇಶ್ ಹಕ್ಕಂಡಿ ಸ್ಥಳ :- ವರಕನಹಳ್ಳಿ ಜನನ :- 01- 06- 1985 ವಿಧ್ಯಾಭ್ಯಾಸ :- ಡಿ.ಇಡಿ.ಬಿಎ ಉದ್ಯೋಗ :- ಮುಖ್ಯೋಪಾಧ್ಯಾಯರು. ದಿವ್ಯ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಸೋಗಿ.…

Read more

Other Story