ಆತ್ಮೀಯರಿಗೆಲ್ಲಾ ಧನ್ಯವಾದಗಳನ್ನು 🙏🙏ಹೇಳುತ್ತಾ, ಎನ್. ಮುರಳೀಧರ್, ವಕೀಲರು ಸಾಹಿತಿ, ನೆಲಮಂಗಲ ಆದ ನಾನು ನನ್ನ 29 ನೇ ಕೃತಿ ಅಭಿಲಾಷೆ ಕಾದಂಬರಿಯ 34 ನೇ ಸಂಚಿಕೆಯನ್ನು ಇಂದು ಪ್ರಕಟಿಸುತ್ತಿದ್ದೇನೆ
ಅಭಿಲಾಷೆ ಕಾದಂಬರಿ ಸಂಚಿಕೆ -34
ಹಿಂದಿನ ಸಂಚಿಕೆಯಲ್ಲಿ
ಕಿಡ್ನಾಪರ್ ಜೊತೆ ಮಾತನಾಡಿದರೆ ಅವನ ಮೊಬೈಲ್ ಟವರ್ ಲೊಕೇಶನ್ ಕಂಡು ಹಿಡಿಯಬಹುದೆಂದು ಇನ್ಸ್ ಪೆಕ್ಟರ್ ಹೇಳಿರುತ್ತಾರೆ
ಕಥೆಯನ್ನು ಮುಂದುವರೆಸುತ್ತಾ
ಕಿಡ್ನಾಪರ್ ಜೊತೆ ಮಾತನಾಡಿದರೆ ಅವನ ಮೊಬೈಲ್ ಟವರ್ ಲೊಕೇಶನ್ ಕಂಡು ಹಿಡಿಯಬಹುದೆಂದು ಇನ್ಲ್ ಪೆಕ್ಟರ್ ರವರು ಕೋದಂಡರಾಂ ರವರಿಗೆ ಹೇಳಿದಾಗ
ಆಯ್ತು ಸಾರ್ ಪುನಃ ಅವನು ಫೋನ್ ಮಾಡಿದ ಕಕ್ಷಣ ನಿಮಗೆ ತಿಳಿಸುತ್ತೇನೆಂದು ಕೋದಂಡರಾಂ ರವರು ಹೇಳಲು.
ಬೇಡಾ ಗುರುಗಳೇ, ನಿಮ್ಮ ಮೊಬೈಲ್ ರಿಂಗ್ ಆದ ತಕ್ಷಣ ಮಾತಾಡಿದರೆ ಅನುಕೂಲವಾಗುತ್ತದೆ, ಅದಕ್ಕೆ ನಾವೇ ನಿಮ್ಮಲ್ಲಿಗೆ ಬರುತ್ತೇವೆಂದು ಹೇಳಿ,ಟವರ್ ಲೊಕೇಶನ್ ಎಕ್ಸ್ ಪರ್ಟ್ ಜೊತೆಗೆ ಇನ್ಸ್ ಪೆಕ್ಟರ್ ರವರು ಕೋದಂಡರಾಂ ರವರ ಮನೆಗೆ ಬರುತ್ತಾರೆ.
ಇನ್ಸ್ ಪೆಕ್ಟರ್ ಬಂದ ಸ್ವಲ್ಪ ಹೊತ್ತಿನ ನಂತರ
ಕಿಡ್ನಾಪರ್ ಪುನಃ ಕೋದಂಡರಾಂ ರವರಿಗೆ ಫೋನ್ ಮಾಡಿ, ಈಗಲೇ ಹನ್ನೊಂದು ಗಂಟೆಯಾಗುತ್ತಿದೆ, ಬೆಳಗಿನ ಜಾವ ನಾಲ್ಕು ಗಂಟೆಯ ವೇಳೆಗೆ ಹಣ ತೆಗೆದುಕೊಂಡು ನಾನು ಹೇಳಿದ ಜಾಗಕ್ಕೆ ಬರಬೇಕೆಂದು ಹೇಳಿದಾಗ
ಆಯ್ತಪ್ಪಾ , ನಿದ್ದೆ ಮಾಡದೆ ಬೆಳಗಿನ ಜಾವ ಆಗುವುದನ್ನು ಕಾಯುತ್ತಿದ್ದು, ಬೆಳಗಿನ ಜಾವ ಆದ ತಕ್ಷಣ ಬರುತ್ತೇನೆಂದು ಹೇಳಿದ ನಂತರ ಕಿಡ್ನಾಪರ್ ಫೋನ್ ಆಫ್ ಮಾಡುತ್ತಾನೆ
ನಂತರ ಇನ್ಸ್ ಪೆಕ್ಟರ್ ಮಾತನಾಡಿ, ಗುರುಗಳೇ ನೀವು ನಿಮ್ಮ ಎಫ್ಡಿಯನ್ನು ರಿನ್ಯೂ ಮಾಡಿಸುತ್ತಿರುವಾಗ, ನಿಮ್ಮ ಪಕ್ಕದಲ್ಲಿ ಯಾರಾದರೂ ಕುಳಿತು ಅಬ್ಸರ್ವ್ ಮಾಡುತ್ತಿದ್ರಾ? ನೀವು ಅವರನ್ನು ಎಲ್ಲಿಯಾದರೂ ನೋಡಿದ್ದು ಜ್ಞಾಪಕ ಇದೆಯಾ ಎಂದು ಕೇಳಲು
ಹೌದು ಸಾರ್ ನನ್ನ ಪಕ್ಕದಲ್ಲಿ ಒಬ್ಬ ಕುಳಿತಿದ್ದ, ಅವನನ್ನು ನಾನು ಮೊದಲು ಎಲ್ಲೂ ನೋಡಿದ ಜ್ಞಾಪಕವಿಲ್ಲವೆಂದು ಹೇಳುತ್ತಾರೆ.
ನೀವು ಎಫ್ ಡಿ ಬಗ್ಗೆ ನಿಮ್ಮ ಮಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಹೇಳಿಲ್ಲ, ನಿಮ್ಮ ಮಗಳು ಹೇಳಿದ್ದರೆ ವಿಕ್ರಮ್ ಗೆ ಹೇಳಿರಬಹುದು, ಅವನ ಮಾತಿನ ವೈಖರಿ ನೋಡಿದರೆ ಅವನು ಕಿಡ್ನಾಪ್ ಮಾಡಿರುವುದು ಸಾಧ್ಯವಿಲ್ಲವೆನಿಸುತ್ತದೆ. ಹಾಗಾದರೆ, ಈ ಕೆಲಸ ಬಹುಶಃ ಬ್ಯಾಂಕಿನಲ್ಲಿ ನಿಮ್ಮ ಪಕ್ಕ ಕುಳಿತಿದ್ದ ವ್ಯಕ್ತಿಯದ್ದೇ ಇರಬಹುದು. ಆ ವ್ಯಕ್ತಿಯನ್ನು ಕಂಡು ಹಿಡಿಯಬೇಕಾದರೆ ಬ್ಯಾಂಕಿನಲ್ಲಿರುವ ಸಿಸಿ ಕ್ಯಾಮರಾ ಪರಿಶೀಲಿಸಬೇಕೆಂದು, ತಮ್ಮ ಕೈಗಡಿಯಾರವನ್ನು ನೋಡುತ್ತಾ, ಆಗಲೇ ಹನ್ನೆರಡು ಗಂಟೆಯಾಗುತ್ತಿದೆ. ಬ್ಯಾಂಕಿನ ಸಿಸಿ ಕ್ಯಾಮರ ಪರಿಶೀಲಿಸಿ ಆ ವ್ಯಕ್ತಿಯನ್ನು ನೋಡಿ ಅವನು ಎಲ್ಲಿದ್ದಾನೆಂದು ಕಂಡು ಹಿಡಿಯಲು ಕಾಲಾವಕಾಶ ಬೇಕಾಗುತ್ತದೆ. ಆದರೆ ಬೆಳಗಿನ ಜಾವವೇ ಕಿಡ್ನಾಪರ್ ಬಳಿ ಹೋಗಬೇಕಾಗಿರುವುದರಿಂದ ಈ ಕೆಲಸವನ್ನೆಲ್ಲಾ ಮಾಡಲು ಸಾಧ್ಯವಿಲ್ಲವೆಂದುಕೊಂಡು, ದೆಫೇದಾರರಿಗೆ ಈ ವಿಷಯ ತಿಳಿಸಲು
ಸಾರ್ ಈಗಲೇ ಬ್ಯಾಂಕ್ ಮ್ಯಾನೇಜರ್ ಗೆ ಫೋನ್ ಮಾಡಿ ವಿಷಯ ತಿಳಿಸಿ, ಸಿಸಿ ಕ್ಯಾಮರಾ ಫುಟ್ ಔಟ್ ಕೊಡಲು ಹೇಳಿ ಅವರಿಂದ ಫುಟ್ ಔಟ್ ಪಡೆದರೆ, ಬ್ಯಾಂಕಿನಲ್ಲಿ ಮಾಸ್ಟರ್ ಪಕ್ಕದಲ್ಲಿ ಕುಳಿತಿದ್ದ ಮನುಷ್ಯನನ್ನು ನೋಡಿ, ತಕ್ಷಣ ಎಲ್ಲಾ ಕಡೆಗೂ ಇನ್ಫರ್ಮೇಷನ್ ಕಳುಹಿಸಿದರೆ ಆ ವ್ಯಕ್ತಿಯನ್ನು ಹಿಡಿಯಬಹುದೆಂದು ದೆಫೇದಾರ್ ಹೇಳಲು
ಅಲ್ಲಿಯವರೆಗೆ ಟೈಮ್ ಎಲ್ಲಿದೆ ದೆಫೇದಾರರೇ? ಬೆಳಗಿನ ಜಾವವೇ ಹಣ ಕೊಟ್ಟು ಗುರುಗಳ ಮಗಳನ್ನು ಬಿಡಿಸಿಕೊಂಡು ಬರಬೇಕು ಎಂಬ ಇನ್ಸ್ ಪೆಕ್ಟರ್ ಮಾತಿಗೆ
ಸಾರ್ ಅವನು ಯಾರಾದರೂ ಆಗಲೀ, ಅವನನ್ನು ಕಂಡು ಹಿಡಿಯುವುದು ನಿಮ್ಮ ಇಲಾಖೆಗೆ ಬಿಟ್ಟಿದ್ದು, ನಾಳೆ ಬೆಳಿಗ್ಗೆ ಬ್ಯಾಂಕ್ ತೆಗೆದ ನಂತರ ಸಿಸಿ ಟೀವಿ ಫುಟ್ ಟೇಜ್ ತೆಗೆದುಕೊಳ್ಳಬಹುದು, ಆದರೆ ಬೆಳಗಿನ ಜಾವದ ವೇಳೆಗೆ ಅವನಿಗೆ ಹಣ ಹೊಂದಿಸಿ ಕೊಡಬೇಕಲ್ಲಾ ಸಾರ್ ಎಂದು ಆತಂಕದಿಂದ ಕೋದಂಡರಾಂ ರವರು ಇನ್ಸ್ಪೆಕ್ಟರ್ ರವರನ್ನು ಕೇಳಲು
ಗುರುಗಳೇ ಒಂದು ಕೆಲಸ ಮಾಡಿ, ಕಿಡ್ನಾಪರ್ ಫೋನ್ ಮಾಡಿದ ತಕ್ಷಣ, ನಾಳೆ ಬ್ಯಾಂಕ್ ಬಾಗಿಲು ತೆಗೆದ ತಕ್ಷಣ ಕೊಡುತ್ತೇನೆಂದು ಹೇಳಿ ಎಂದು ಇನ್ಸ್ ಪೆಕ್ಟರ್ ಮಾತಿಗೆ
ಸಾರ್ ನಾಳೆವರೆಗೂ ನನ್ನ ಮಗಳು ಆ ದುಷ್ಟನ ವಶದಲ್ಲೇ ಇರಬೇಕಲ್ಲಾ ? ಹೇಗಿದ್ದರೂ ಅವನಿಗೆ ಹಣ ಕೊಡುವುದಿಲ್ಲವಲ್ಲಾ ಅದಕ್ಕೆ ಏನಾದರೂ ಮಾಡಿ ಬೆಳಗಿನ ಜಾವವೇ ಹೋಗಿ, ಅಲ್ಲೇ ಅವನನ್ನು ಹಿಡಿದು ಮಗಳನ್ನು ಬಿಡಿಸಿಕೊಂಡು ಬರೋಣವೆಂದು ಕೋದಂಡರಾಂ ರವರು ಹೇಳಿದಾಗ
ಗುರುಗಳೇ ನೀವು ಹೇಳುವುದೂ ಸರಿಯಾಗಿದೆ , ಈಗಲೇ ಕಿಡ್ನಾಪರ್ ನ ಹೇಗೆ ಅಟ್ಯಾಕ್ ಮಾಡಬೇಕು? ಅವನಿಂದ ಸೇಫಾಗಿ ನಿಮ್ಮ ಮಗಳನ್ನು ಕರೆದುಕೊಂಡು ಬರುವುದೆಂದು ಪ್ಲಾನ್ ಮಾಡುತ್ತೇವೆಂದು ಹೇಳಿ, ಇನ್ಸ್ಪೆಕ್ಟರ್ ರವರು ತಕ್ಷಣ ಪೋಲೀಸ್ ಅಧೀಕ್ಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ
ಅಧೀಕ್ಷಕರು ಮಾತನಾಡಿ, ನೀವು ಬೆಳಗಿನ ಜಾವಕ್ಕೆ ಮೊದಲೇ ನಿಮ್ಮ ಸಿಬ್ಬಂದಿಯೊಂದಿಗೆ ಕಿಡ್ನಾಪರ್ ಹೇಳಿರುವ ಜಾಗಕ್ಕೆ ಹೋಗಿ, ಕಿಡ್ನಾಪರ್ ಬರುವ ದಾರಿಯಲ್ಲಿ ಕಾಯುತ್ತಿರಿ, ಅವನು ಆ ಸ್ಥಳಕ್ಕೆ ಬಂದ ತಕ್ಷಣ ಅವನು ಪುನಃ ವಾಪಸ್ ಹೋಗದಂತೆ ಎಲ್ಲಾ ಕಡೆಯೂ ಕವರ್ ಮಾಡಿ, ನಾನು ಆ ವೇಳೆಗೆ ಬರುತ್ತೇನೆಂದು ಹೇಳಿದಾಗ
ಓಕೆ ಸಾರ್ ಎಂದು ಹೇಳಿ ಇನ್ಸ್ ಪೆಕ್ಟರ್ ರವರು ತಕ್ಷಣ ಸಹಾಯಕ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ,ಕಿಡ್ನಾಪರ್ ಬರುವ ಜಾಗಕ್ಕೆ ಮದ್ಯ ರಾತ್ರಿ ಮೂರುಗಂಟೆಗೆ ಹೋಗಿರಬೇಕೆಂದು ಸಹಾಯಕ ಇನ್ಸ್ ಪೆಕ್ಟರ್ ಗೆ ಹೇಳುತ್ತಾರೆ.
ಮದ್ಯರಾತ್ರಿ ಎರಡು ಗಂಟೆಗೆ, ಸಹಾಯಕ ಇನ್ಸ್ಪೆಕ್ಟರ್ ರವರು ಇಪ್ಪತ್ತು ಸಿಬ್ಬಂದಿಗಳನ್ನು ವಾಹನದಲ್ಲಿ ಅರೇಂಜ್ ಮಾಡಿ, ಮೂರುಗಂಟೆಯ ವೇಳೆಗೆ ಕಿಡ್ನಾಪರ್ ಹೇಳಿದ ಜಾಗಕ್ಕೆ ಬಂದು ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಸಶಸ್ತ್ರದೊಂದಿಗೆ ಆ ಏರಿಯಾವನ್ನು ಸುತ್ತುವರೆಯುತ್ತಾರೆ. ಸುತ್ತಲೂ ಕತ್ತಲು ಆವರಿಸಿದ್ದು, ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುತ್ತಿರುವುದಿಲ್ಲ. ಅವರುಗಳಿರುವ ಜಾಗದಲ್ಲಿ ಹುಳು ಹುಪ್ಪಟೆ ಇರಬಹುದೆಂದು, ತಮ್ಣ ತಮ್ಮ ಮೊಬೈಲಿನ ಲೈಟ್ ಆನ್ ಮಾಡಿ ಆಗಾಗ್ಗೆ ಬೆಳಕನ್ನು ಬಿಡುತ್ತಾ, ಕಾಯುತ್ತಿರುತ್ತಾರೆ.
ಈ ಕಡೆ ಕೋದಂಡರಾಂ ರವರು ಇನ್ಸ್ಪೆಕ್ಟರ್ ಹೇಳಿದಂತೆ ಒಂದು ಖಾಲಿ ಸೂಟ್ ಕೇಸನ್ನು ರಡಿಮಾಡಿ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ,
ಪುನಃ ಕಿಡ್ನಾಪರ್ ನಿಂದ ಫೋನ್ ಬರುತ್ತದೆ.
ಕೋದಂಡರಾಂ ರವರು ಗಾಬರಿಯಿಂದ ಹಲೋ ಎನ್ನಲು
ಏಯ್ ಮುದುಕಾ ನಾಲ್ಕು ಗಂಟೆ ವೇಳೆಗೆ ನಾನು ಹೇಳಿದ ಜಾಗಕ್ಕೆ ಹಣ ತರುತ್ತೀಯಾ? ಓ ನೀನು ಮಾಸ್ಟರ್ ಅಲ್ಲವಾ, ಮರ್ಯಾದೆ ಕೊಡಬೇಕೆಂದು ಹೇಳಿದ್ದೀಯಾ, ಸಾರಿ ಸಾರ್ ಎನ್ನುತ್ತಾ, ಹಣ ತರುತ್ತೀರಾ ಸಾರ್ ಎಂದು ಕಿಡ್ನಾಪರ್ ಕೇಳಲು
ಹ್ಞೂ ನಪ್ಪಾ ತರುತ್ತೇನೆ, ನೀನು ಹೇಳಿದ ಜಾಗಕ್ಕೆ ಬಂದು ಕೊಡುತ್ತೇನೆಂದು ಹೇಳಲು
ಸ್ವಲ್ಪ ತಡೀರೀ ಸಾರ್, ನಿಮ್ಮ ಮನೆಯಲ್ಲೇ ಒಂದು ಕೋಟಿ ರೂಪಾಯಿ ಇಟ್ಟುಕೊಂಡಿದ್ದೀರಾ? ಪರವಾಗಿಲ್ಲವೇ? ಈ ವಿಷಯ ನನಗೆ ಗೊತ್ತೇ ಇರಲಿಲ್ಲ, ಹಾಗಾದರೆ ಬ್ಯಾಂಕಿನಲ್ಲಿರುವ ಎರಡು ಕೋಟಿ ರೂಪಾಯಿಗಳನ್ನು ಡ್ರಾ ಮಾಡುವುದಿಲ್ಲ ಅಲ್ಲವಾ ಸಾರ್ ಎಂದು ಕಿಡ್ನಾಪರ್ ಕೇಳಲು
ಕಿಡ್ನಾಪರ್ ಮಾತಿಗೆ ಕೋದಂಡರಾಂ ರವರಿಗೆ ತಾಳ್ಮೆಗೆಡುತ್ತದೆ. ನಿನಗೆ ಒಂದು ಕೋಟಿ ರೂಪಾಯಿ ತಾನೇ ಬೇಕು? ಹೇಗೋ ಅಡ್ಜಸ್ಟ್ ಮಾಡಿದ್ದೇನೆಂದು ಹೇಳಿದಾಗ
ನನಗೆ ನಿಮ್ಮ ಮನೆಯಲ್ಲಿರುವ ಒಂದು ಕೋಟಿ ರೂಪಾಯಿಗಳ ಜೊತೆಗೆ ಬ್ಯಾಂಕ್ ನಲ್ಲಿರುವ ಎರಡು ಕೋಟಿ ರೂಪಾಯಿಗಳಲ್ಲಿ ಒಂದು ಕೋಟಿ ರೂಪಾಯಿಗಳನ್ನು ಸೇರಿಸಿ ಎರಡು ಕೋಟಿ ರೂಪಾಯಿಗಳನ್ನು ತಂದುಕೊಡಿ ಎಂದ ತಕ್ಷಣ
ನನ್ನ ಮಗಳ ಮದುವೆಗೆ ತೆಗೆದಿಟ್ಟಿದ್ದೇನೆ. ಅದನ್ನು ಕೊಡುವುದಿಲ್ಲವೆಂದು ಕೋದಂಡರಾಂರವರು ಹೇಳಲು
ನೀವು ಹಣ ಕೊಟ್ಚರೆ ತಾನೇ ? ನಿಮ್ಮ ಮಗಳು ಸೇಫಾಗಿ ಮನೆಗೆ ಬರುವುದೆಂಬ ಕಿಡ್ನಾಪರ್ ಮಾತಿಗೆ,
ಅಯ್ಯೋ ಬೇಡಪ್ಪಾ ನನ್ಮ ಮಗಳಿಗೆ ಏನೂ ಮಾಡ ಬೇಡಾ, ನಾಳೆ ಬ್ಯಾಂಕ್ ತೆಗೆಯುವುದು ಹತ್ತು ಗಂಟೆ ಮೇಲೆ, ಅಲ್ಲಿಯವರೆಗೂ ನನ್ನ ಮಗಳು ಕಷ್ಟದಲ್ಲಿರಬೇಕಾ? ಎಂದು ಕೋದಂಡರಾಮ್ ಕೇಳಲು
ನಿಮ್ಮ ಮಗಳಿಗೆ ಏನೂ ತೊಂದರೆಯಾಗದಂತೆ ನೋಡಿಕೊಂಡು ಸೇಫಾಗಿ ನಿಮ್ಮ ಮನೆಗೆ ಕಳುಹಿಸುತ್ತೇನೆ. ನಾಳೆ ಬೆಳಿಗ್ಗೆ ಬ್ಯಾಂಕ್ ತೆಗೆದ ತಕ್ಷಣ ಒಂದು ಕೋಟಿ ರೂಪಾಯಿ ಡ್ರಾ ಮಾಡಿ ನನಗೆ ಒಟ್ಟು ಎರಡು ಕೋಟಿ ರೂಪಾಯಿಗಳನ್ನು ನಾನು ಹೇಳಿದ ಜಾಗಕ್ಕೆ ತಂದಿಡು ಎನ್ನಲು
ಇದೇನಪ್ಪಾ ಹೀಗೆ ನನ್ನ ಹೊಟ್ಟೆ ಉರಿಸುತ್ತಿದ್ದೀಯಲ್ಲಾ? ನಾನು ಎರಡು ಕೋಟಿ ರೂಪಾಯಿಗಳನ್ನು ಎಲ್ಲಿಂದ ತಂದು ಕೊಡಲಿ ಎಂದು ಕೋದಂಡರಾಮ್ ಪ್ರಶ್ನಿಸಿದಾಗ
ವೆರಿ ಸಿಂಪಲ್ ಮಾಸ್ಟರ್, ಈಗ ನಿನ್ನಲ್ಲಿರುವ ಒಂದು ಕೋಟಿ ರೂಪಾಯಿಗಳ ಜೊತೆಗೆ ಬ್ಯಾಂಕಿನಲ್ಲಿರುವ ಒಂದು ಕೋಟಿ ಡ್ರಾ ಮಾಡಿ ಕೊಟ್ಟರಾಯಿತು ಎಂದು ಕಿಡ್ನಾಪರ್ ಹೇಳಲು
ಅದೂ,,,,, ಎಂದು ಕೋದಂಡರಾಮ್ ರವರುಮಾತನಾಡುವ ವೇಳೆಗೆ
ಇನ್ಸ್ ಪೆಕ್ಟರ್ ರವರು ಬೇರೆ ಏನೂ ಮಾತನಾಡದಂತೆ ಕೈಸನ್ನೆ ಮಾಡಿದಾಗ
ಆಯ್ತಪ್ಪಾ , ನಾಳೆ ಸಂಜೆ ನೀನು ಹೇಳಿದ ಜಾಗಕ್ಕೆ ಹಣವನ್ನು ತಂದುಕೊಡುತ್ತೇನೆಂದು ಕೋದಂಡರಾಂ ರವರು ಹೇಳುತ್ತಾರೆ.
ಮುಂದುವರೆಯುತ್ತದೆ
- ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯವಾದ ಅಂಶವೇನೆಂದರೆ
ಬೇರೆಯವರ ಹಣ ಲಪಟಾಯಿಸುವವರಿಗೆ ಹಣ ಕಳೆದುಕೊಂಡವರ ಕಷ್ಟ ದುಃಖ ಏನೆಂದು ತಿಳಿದಿರುವುದಿಲ್ಲ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಣವೇನಾದರೂ ಕಳೆದು ಹೋದರೆ, ಬಸ್ ಗಳಲ್ಲಿ , ಜನ ಸಂದಣಿ ಇದ್ದ ಕಡೆ ಪಿಕ್ ಪಾಕೆಟ್ ಆದಾಗ ನೊಂದುಕೊಳ್ಳುವವರು ಹಣ ಕಳೆದುಕೊಳ್ಳುವವರು ಮಾತ್ರ. ಹಣ ಕಳ್ಳತನ ಮಾಡಿದವನು ಪಡೆದ ಹಣದಲ್ಲಿ ಮೋಜು ಮಸ್ತಿಗೆ ಉಪಯೋಗಿಸುತ್ತಾನೆ. ಆದರೆ ಹಣ ಕಳೆದುಕೊಂಡವರು ಯಾವ ಉದ್ದೇಶ ಕ್ಕೆ ಇಟ್ಟುಕೊಂಡಿರುತ್ತಾರೋ? ಹಣ ಕಳೆದುಹೋದರೆ ಅವರ ದುಃಖ ಮುಗಿಲು ಮುಟ್ಟಿರುತ್ತದೆ. ಹಣ ಕಳೆದುಕೊಂಡು ಅದನ್ನು ಹೊಂದಿಸಲಾಗದೆ ಕಷ್ಟ ಪಡುವವರು ಅನೇಕ ಮಂದಿ ಇದ್ದಾರೆ. ಹಣ ಕಳೆದ ವಿಷಯವನ್ನು ಕಡೇವರೆಗೂ ಮರೆಯುವುದೇ ಇಲ್ಲ.