ಅಭಿಲಾಷೆ ಕಾದಂಬರಿ ಸಂಚಿಕೆ -33
ಹಿಂದಿನ ಸಂಚಿಕೆಯಲ್ಲಿ
ಆಶಾ ಕಿಡ್ನಾಪ್ ಆಗಿರುವುದರಿಂದ ವಿಕ್ರಮ್ ಮೇಲೆ ಅನುಮಾನವಿದೆಯೆಂದು ಕೋದಂಡರಾಂ ಹೇಳಿದಾಗ
ಇನ್ಸ್‌ಪೆಕ್ಟರ್ ರವರು ವಿಕ್ರಮ್ ನನ್ನು ವಿಚಾರಣೆ ಮಾಡುತ್ತಾ, ನಿನ್ನ ಮೊಬೈಲ್ ಕೊಡೆಂದು ವಿಕ್ರಮ್ ಗೆ ಕೇಳಿದಾಗ
ವಿಕ್ರಮ್ ತನ್ನ ಜೇಬಿನಿಂದ ಮೊಬೈಲ್ ತೆಗೆದು ಟೇಬಲ್ ಮೇಲಿಡುತ್ತಾನೆ.
ಕಥೆಯನ್ನು ಮುಂದುವರೆಸುತ್ತಾ
ವಿಕ್ರಮ್ ಮೊಬೈಲ್ ತೆಗೆದು ಟೇಬಲ್ ಮೇಲಿಟ್ಚು ದೂರ ನಿಲ್ಲುತ್ಕಾನೆ.
ಕಾಲಿಂಗ್ ಲಿಸ್ಟ್ ಓಪನ್ ಮಾಡೆಂದು ಇನ್ಸ್‌ಪೆಕ್ಟರ್ ಹೇಳಿದಾಗ
ವಿಕ್ರಮ್ ತನ್ನ ಪಾಸ್ ವರ್ಡ್ ನಮೂದಿಸಿ, ಕಾಲ್ ಲಿಸ್ಟ್ ಓಪನ್ ಮಾಡಿದ ನಂತರ ಇನ್ಸ್ ಪೆಕ್ಟರ್ ರವರು ಪರಿಶೀಲಿಸುತ್ತಿರುವಾಗ
ಮೊದಲನೇ ಕರೆಯೇ ಆಶಾಗೆ ಹೋಗಿರುವ ಕರೆಯಾಗಿರುವುದನ್ನು ನೋಡಿದ ಇನ್ಸ್‌ಪೆಕ್ಟರ್ ರವರು, ಈ ಆಶಾ ಯಾರೆಂದು ಕೇಳಲು
ಸಾರ್ ಇವರು ನಾನು ಪ್ರೀತಿಸುತ್ತಿದ್ದೇವೆಂದು ವಿಕ್ರಮ್ ಹೇಳಿದಾಗ
ಈ ಮಾಸ್ಟರ್ ಮಗಳೇ ತಾನೇ ಕಿಡ್ನಾಪ್ ಆಗಿರುವುದೆಂದು ಇನ್ಸ್ ಪೆಕ್ಟರ್ ಪ್ರಶ್ನಿಸುತ್ತಾರೆ
ವಿಕ್ರಮ್ ನನಗೆ ಗೊತ್ತಿಲ್ಲ ಸಾರ್ ಎನ್ನುತ್ತಾನೆ
ನೀನು ಸುಳ್ಳು ಹೇಳಬೇಡಾ, ನೀನು ಮಾಸ್ಟರ್ ಮಗಳಿಗೆ ಫೋನ್ ಮಾಡಿ ಕರೆಸಿಕೊಂಡು ಅವರನ್ನು ಕಿಡ್ನಾಪ್ ಮಾಡಿ, ಒಂದು ಕೋಟಿ ರೂಪಾಯಿಗಳಿಗೆ ಡಿಮ್ಯಾಂಡ್ ಇಟ್ಟಿದ್ದೀಯಾ ಅಲ್ಲವಾ ಎಂದು ಇನ್ಲ್ ಪೆಕ್ಟರ್ ರವರು ಗಡಸು ಧ್ವನಿಯಿಂದ ಕೇಳಲು
ಇಲ್ಲಾ ಸಾರ್ ನಾನು ಖಂಡಿತಾ ನಮ್ಮ ತಾಯಾಣೆಗೂ ಕಿಡ್ನಾಪ್ ಮಾಡಿಲ್ಲವೆನ್ನುತ್ತಾನೆ.
ಲೇಯ್ ಸುಳ್ಳು ಹೇಳಬೇಡಾ, ನೀನೇತಕ್ಕೆ ಮಾಸ್ಟರ್ ಮಗಳಿಗೆ ಫೋನ್ ಮಾಡಿದೆ ಎಂದು ಇನ್ಸ್‌ಪೆಕ್ಟರ್ ಪ್ರಶ್ನಿಸಿದಾಗ
ನಾನು ಮಾಸ್ಟರ್ ಮಗಳ ಬಳಿ ಮಾತನಾಡಬೇಕಿತ್ತೆಂದು ಅವರಿಗೆ ಫೋನ್ ಮಾಡಿ ಕರೆಸಿಕೊಂಡು ಹೋಟೆಲ್ ನಲ್ಲಿ ಮೀಟ್ ಮಾಡಿ ನನ್ನ ಕಷ್ಟ ಹೇಳಿದ್ದೂ ನಿಜಾ ಸಾರ್,
ಅವರೂ ಕೂಡಾ ಪಶ್ಚಾತ್ತಾಪ ಪಟ್ಟು ನನಗೆ ಆದಷ್ಟೂ ಬೇಗ ಹಣ ನೀಡುವುದಾಗಿ ಹೇಳಿದ್ದರು. ನಂತರ ಮನೆಗೆ ಹೋಗುತ್ತೇನೆಂದು ಹೋದರು, ನಾನು ಕಿಡ್ನಾಪ್ ಮಾಡಿಲ್ಲ ಸಾರ್,ದಯವಿಟ್ಚು ನನ್ನನ್ನು ನಂಬೀ ಸಾರ್ ಎಂದು ದೈನ್ಯತೆಯಿಂದ ವಿಕ್ರಮ್ ಕೇಳುತ್ತಾನೆ.
ನೀನೇ ಆಶಾರವರಿಗೆ ಫೋನ್ ಮಾಡಿ ಕರೆಸಿಕೊಂಡು ಅವರನ್ನು ಕಿಡ್ನಾಪ್ ಮಾಡಿ, ಈಗ ನಾನು ಕಿಡ್ನಾಪ್ ಮಾಡಿಲ್ಲವೆಂದು ಸುಳ್ಳು ಹೇಳುತ್ತಿದ್ದೀಯಾ? ನೋಡು ನಿಜ ಒಪ್ಪಿಕೊಂಡು ಅವರನ್ನು ಎಲ್ಲಿಟ್ಚಿರುವೆಯೋ ಹೇಳು ಇಲ್ಲದಿದ್ದರೆ, ಗೊತ್ತಲ್ಲಾ ಎಂದು ಗಡಸಿನ ಮಾತಿನಿಂದ ಏರುಧ್ವನಿಯಲ್ಲಿ ಇನ್ಸ್‌ಪೆಕ್ಟರ್ ಹೇಳಿದಾಗ
ಸಾರ್ ನಾನು ಫೋನ್ ಮಾಡಿ ಕರೆದು, ಹೋಟೆಲ್ ನಲ್ಲಿ ತಿಂಡಿತಿಂದು ಕಾಫಿ ಕುಡಿದು, ಹಣದ ವಿಚಾರ ಮಾತನಾಡಿದ ನಂತರ ಆಶಾರವರು ಆಟೋದಲ್ಲಿ ಹೋದರು ಸಾರ್ ನನ್ನ ಪಾಡಿಗೆ ನಾನು ಸಹಾ ಆಟೋದಲ್ಲಿಯೇ ಮನೆಗೆ ಬಂದೆ ಸಾರ್ ನಾನೂ ಕೂಡಾ ಅವರನ್ನು ಕಿಡ್ನಾಪರ್ ನಿಂದ ಬಚಾವ್ ಮಾಡಲು ಹೆಲ್ಪ್ ಮಾಡುತ್ತೇನೆ ಎಂದು ವಿಕ್ರಮ್ ಹೇಳಿದಾಗ
ಹೋಗಲೀ ಆಶಾ ಮನೆಗೆ ಹೋದ ಆಟೋ ನಂಬರ್ ಏನಾದರೂ ಗೊತ್ತಾ ಎಂದು ಇನ್ಸ್ ಪೆಕ್ಟರ್ ರವರು ವಿಕ್ಪಮ್ ನನ್ನು ಪ್ರಶ್ನಿಸಿದಾಗ.
ಸರಿಯಾಗಿ ನೋಡಲಿಲ್ಲ ಸಾರ್ ಎಂದು ಹೇಳಿ ಅರೆ ಕ್ಷಣ ಮೌನವಾಗಿ ಸಾರ್ ಆಶಾ ಮನೆಗೆ ಹೋದ ಆಟೋ ನಂಬರ್ ಪ್ಲೇಟ್ ನ ಕಡೆಯ ಭಾಗ ಕತ್ತರಿಸಿದ್ದು, ಸ್ವಲ್ಪ ಕೆಳಗೆ ಜಾರಿತ್ತು ಸಾರ್, ಕತ್ತಲು ಇದ್ದುದ್ದರಿಂದ ಮೊದಲ ನಾಲ್ಕು ಅಕ್ಷರ ನೋಡಿದೆ ಎಂದು ಅದರ ವಿವರವನ್ನು ಹೇಳುತ್ತಾನೆ.
ಓ ಕೆ ನೀನೀಗ ಹೋಗಬಹುದು ಆದರೆ ಕರೆದಾಗ ಬರಬೇಕೆಂದು ಇನ್ಸ್ ಪೆಕ್ಟರ್ ರವರು ವಿಕ್ರಮ್ ಗೆ ಹೇಳಿ ಕಳುಹಿಸುತ್ತಾರೆ.
ಇನ್ಸ್‌ಪೆಕ್ಟರ್ ರವರು ವಿಕ್ರಮ್ ಹೇಳಿದ ಆಟೋವನ್ನು ಹುಡುಕುವಂತೆ ತನ್ನ ಸಿಬ್ಬಂದಿಗೆ ಹೇಳಿ, ನಂತರ ಎಲ್ಲಾ ಕಂಟ್ರೋಲ್ ರೂಂಗೆ ಫೋನ್ ಮಾಡಿ ಆಟೋರಿಕ್ಷಾವನ್ನು ಪತ್ತೆಹಚ್ಚಲು ಹೇಳಿರುತ್ತಾರೆ.
ಆದರೆ ಆ ರೀತಿಯ ಆಟೋರಿಕ್ಷಾ ಎಲ್ಲೂ ಸಿಗುವುದಿಲ್ಲ.
ರಾತ್ರಿಯೆಲ್ಲಾ ಆಶಾಳನ್ನು ಯಾವುದೋ ಒಂದು ಹಳೆಯ ಕಟ್ಟಡದಲ್ಲಿ ಕಿಡ್ನಾಪರ್ ಗಳು ಕೂಡಿ ಹಾಕಿರುತ್ತಾರೆ.
ಅವರಿಂದ ಬಿಡಿಸಿಕೊಂಡು ಹೋಗಲು ಆಶಾ ಶತ ಪ್ರಯತ್ನಪಟ್ಟರೂ ಆಗುತ್ತಿರುವುದಿಲ್ಲ.
ಆ ರೌಡಿಗಳು ಹೆಂಡ ಕುಡಿಯುತ್ತಾ, ಜೋರಾಗಿ ಕೇಕೆ ಹಾಕುತ್ತಿರುವುದನ್ನು ನೋಡಿದ ಆಶಾಳು ತುಂಬಾ ಭಯಬೀತಳಾಗುತ್ತಾಳೆ.
ಆ ಪುಂಡರು ಒಂದು ಸಲ ಹೆಂಡ ಕುಡಿಯುವುದು ನಂತರ ಇವಳ ಮುಖವನ್ನು ಕೆಕ್ಕರಿಸಿ ನೋಡುವುದು ಮಾಡುತ್ತಿದ್ದು,
ಅಯ್ಯೋ ನನ್ನ ಕಥೆ ಇವತ್ತು ಮುಗಿದಂತಯೇ ಎಂದುಕೊಂಡು ಹೆದರಿದ ಹುಲ್ಲೆಯಂತಾಗಿ ಮೂಲೆಯಲ್ಲಿ ಕುಳಿತಿರುತ್ತಾಳೆ.
ಆಗ ಅವಳ ಬಳಿ ಒಬ್ಬ ರೌಡಿ ಬಂದು ಏಯ್ ನಿಮ್ಮಪ್ಪನಿಗೆ ಫೋನ್ ಮಾಡಿ ಈಗಲೇ ಒಂದು ಕೋಟಿ ರೂಪಾಯಿಗಳನ್ನು ತರುವಂತೆ ಹೇಳು ಇಲ್ಲದಿದ್ದರೆ ಎನ್ನುತ್ತಾ, ತೂರಾಡುತ್ತಾ ಪಕ್ಕಕ್ಕೆ ಹೋಗುತ್ತಾನೆ.
ಅಲ್ಲಿದ್ದ ಇನ್ನೊಬ್ಬ ನಿಮ್ಮಪ್ಪ ಹಣ ಕೊಡದಿದ್ದರೆ ನಿನ್ನನ್ನು ಇಲ್ಲೇ ಮಟಾಶ್ ಮಾಡಿ ಬಿಡುತ್ತೇವೆಂದಾಗ
ಆಶಾಳಿಗೆ ಭಯವಾಗಿ ದಿಕ್ಕೇ ತೋಚದಂತಾಗಿರುತ್ತದೆ. ನಮ್ಮಪ್ಪ ಶಾಲೆಯ ಮಾಸ್ಟರ್ ಅವರ ಬಳಿ ಅಷ್ಟೊಂದು ಹಣ ಎಲ್ಲಿರುತ್ತದೆಂದು ಆಶಾ ಕೇಳಲು
ಲೇಯ್ ನಿಮ್ಮಪ್ಪನ ಬಳಿ ಹಣ ಇರುವುದು ನಮಗೆಲ್ಲಾ ಗೊತ್ತಿದೆ.ನೀನು ಸುಳ್ಳು ಹೇಳಬೇಡವೊಂದು ಇನ್ನೊಬ್ಬ ರೌಡಿ ಹೇಳುತ್ತಾನೆ
ನಿಮಗೆ ಹೇಗೆ ಗೊತ್ತೆಂದು ಆಶಾ ಧೈರ್ಯ ಮಾಡಿ ಕೇಳಲು
ಅಂದು ನಿಮ್ಮಪ್ಪ ಬ್ಯಾಂಕಿನಲ್ಲಿ, ಎರಡು ಕೋಟಿ ರೂಪಾಯಿಗಳ ಎಫ್ ಡಿಯನ್ನು ರಿನ್ಯೂ ಮಾಡಿಸುತ್ತಿರುವುದನ್ನು ನಮ್ಮ ಬಾಸ್ ನೋಡಿದ್ದಾರಂತೆ ಎಂದಾಗ
ಎಲ್ಲವೂ ಸುಳ್ಳೆಂದು ಆಶಾ ನುಡಿಯಲು,
ಓ,,,,,ಪರವಾಗಿಲ್ಲವೇ? ಗಿಳಿಗೆ ಮಾತನಾಡುವಷ್ಟು ಧೈರ್ಯ ಬಂದಿದೆ ಎನ್ನುತ್ತಾ,ಅದಕ್ಕೆಲ್ಲಾ ನಿನಗೆ ಉತ್ತರ ಬೇಕಾ? ಎನ್ನುತ್ತಾನೆ
ಅವರು ನಮ್ಮಪ್ಪನೇ ಅಲ್ಲಾ ಯಾರನ್ನೋ ನೋಡಿ ನೀವು ಎಫ್ ಡಿ ರಿನ್ಯೂ ಮಾಡಿಸಿರುವುದು ನಮ್ಮಪ್ಪನೆಂದು ತಪ್ಪಾಗಿ ತಿಳಿದು ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದು ಹಿಂಸೆ ಮಾಡುತ್ತಿದ್ದೀರಿ ದಯವಿಟ್ಚು ಬಿಟ್ಟುಬಿಡಿರೆಂದು ಆಶಾ ಗೋಗರೆಯುತ್ತಾಳೆ.
ನಿನ್ನನ್ನು ಬಿಟ್ಟರೆ ನಮಗೆ ಒಂದು ಕೋಟಿ ರೂಪಾಯಿ ಕೊಡುವವರಾರೆಂದು ಮತ್ತೊಬ್ಬ ರೌಡಿ ಪ್ರಶ್ನಿಸಲು
ನಮ್ಮ ಬಳಿ ಅಷ್ಟೊಂದು ಹಣ ಎಲ್ಲಿದೆ ನಿಮಗೆ ಕೊಡಲು ಎಂದು ಆಶಾ ಪ್ರಶ್ನಿಸಲು.
ನಿಮ್ಮ ಬಳಿ ಹಣ ಇದೆಯೆಂದು ನಮಗೆಲ್ಲಾ ಗೊತ್ತಿದೆ ನಿಮ್ಮ ನಾಟಕ ನಡೆಯುವುದಿಲ್ಲವೆಂದು ರೌಡಿ ಹೇಳುತ್ತಾನೆ
ಆ ವೇಳೆಗೆ ಇನ್ನೊಬ್ಬ ರೌಡಿ ಬಂದು ಇವಳಪ್ಪನಿಗೆ ಫೋನ್ ಮಾಡಿ ನಾಳೆ ಸಂಜೆಯೊಳಗೆ ಒಂದು ಕೋಟಿ ರೂಪಾಯಿ ತೆಗೆದುಕೊಂಡು ನೆಲಮಂಗಲದ ಆಚೆ ಇರುವ ಮಂಟಪದ ಬಳಿ ಬಂದು ಹಣವನ್ನಿಟ್ಟು ಹಿಂತಿರುಗಿ ನೋಡದೆ ಹೋಗಬೇಕು. ನೀನು ಮನೆಯೊಳಗೆ ಹೋಗುವುದರೊಳಗೆ ನಿನ್ನ ಮಗಳು ಮನೆಗೆ ಬರುತ್ತಾಳೆ. ಏನಾದರೂ ಪೋಲೀಸ್ ಗೆ ಹೇಳಿ ಯಡವಟ್ಟು ಮಾಡಿದೆಯೋ ಜೀವಂತವಾಗಿರುವ ನಿನ್ನ ಮಗಳ ಮುಖ ನೀನು ನೋಡುವುದಿಲ್ಲವೆಂದು ಹೇಳಿದಾಗ
ನಿನ್ನ ದುಡ್ಡು ಎಲ್ಲೂ ಹೋಗಲ್ಲಾ, ನಾಳೆಯೇ ತಂದು ಕೊಡುತ್ತೇನೆ. ನಾನು ಮಾಸ್ಟರ್ ಕಣಪ್ಪಾ ನಾಲ್ಕು ಮಕ್ಕಳಿಗೆ ಪಾಠ ಹೇಳಿಕೊಡುವವನು ಸ್ವಲ್ಪ ಮರ್ಯಾದೆ ಕೊಟ್ಟು ಮಾತಾಡಪ್ಪಾ ಎಂದು ದೈನ್ಯತೆಯಿಂದ ಕೇಳಿದಾಗ
ನಮಗೆ ಮರ್ಯಾದೆ ಕೊಟ್ಟು ರೂಢಿ ಇಲ್ಲ ,ನಾವೇನಿದ್ದರೂ ಮರ್ಯಾದೆ ತೆಗೆದುಕೊಳ್ಳುವವರು ಅಷ್ಟೇ ಎಂದು ಹೇಳಿದಾಗ
ಆಯ್ತು ಬಿಡಪ್ಪಾ ನಿಮ್ಮಂತಹವರ ಬಳಿ ಮರ್ಯಾದೆ ಮಾತು ಆಡುತ್ತಿದ್ದೇನಲ್ಲಾ ನನಗೆ ಬುದ್ದಿ ಇಲ್ಲವೆಂದು ಹೇಳಿದಾಗ
ಏಯ್ ಮುದುಕಾ ಸುಮ್ಮನೆ ಮಾತನಾಡುತ್ತಿರುವೆಯೋ? ಅಥವಾ ದುಡ್ಡು ತೆಗೆದುಕೊಂಡು ನಾನು ಹೇಳಿದ ಜಾಗಕ್ಕೆ ಬರುತ್ತೀಯೋ ಎಂದು ರೌಡಿ ಏರುಧ್ವನಿಯಲ್ಲಿ ಕೇಳಿದಾಗ
ಆಯ್ತಪ್ಪಾ ನಾಳೆ ಸಂಜೆಯೊಳಗೆ ಹಣ ಅರೇಂಜ್ ಮಾಡಿ ನೀನು ಹೇಳಿದ ಜಾಗಕ್ಕೆ ಬರುತ್ತೇನೆಂದು ಹೇಳಿದ ತಕ್ಷಣ
ರೌಡಿಯು ಪುೋನ್ ಆಫ್ ಮಾಡಿದ
ನಂತರ ಕೋದಂಡರಾಂರವರು ಪೋಲೀಸ್ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ವಿಷಯ ತಿಳಿಸಿದಾಗ
ಇಂದೇ ಅವನಿಗೆ ಫೋನ್ ಮಾಡಿ ಈಗಲೇ ಹಣ ತರುತ್ತಿರುವೆನೆಂದು ಹೇಳಿ ಅವನು ಮಾತನಾಡಿದಾಗ ಅವನಿರುವ ಲೊಕೇಶನ್ ಕಂಡು ಹಿಡಿಯಲು ಅನುಕೂಲವಾಗುತ್ತದೆಂದು ಇನ್ಲ್ ಪೆಕ್ಟರ್ ಹೇಳುತ್ತಾರೆ
ಮುಂದುವರೆಯುತ್ತದೆ
-
ಈ ಸಂಚಿಕೆಯಲ್ಲಿ ಕಂಡು ಬರುವ ಮುಖ್ಯ ವಾದ ಅಂಶವೇನೆಂದರೆ
-
ಮನುಷ್ಯ ತನ್ನ ದೊಡ್ಡ ದೊಡ್ಡ ವ್ಯವಹಾರಗಳ ಬಗ್ಗೆ ತಮ್ಮವರು ಏನೂ ಮಾಡುವುದಿಲ್ಲವೆಂದು ತಿಳಿದು ತಮ್ಮ ದೊಡ್ಡತನ ತೋರಿಸಿಕೊಳ್ಳಲು ಯಾರಿಗಾದರೂ ಹೇಳಿದರೆ, ಅವರು ಏನೂ ಮಾಡದೇ ಇರಬಹುದು, ಆದರೆ ಅವರ ಬಾಯಿ ಸುಮ್ಮನಿರದೆ ನೋಡಪ್ಪಾ ನಮ್ಮ ಸ್ನೇಹಿತರು ಬಹಳ ಶ್ರೀಮಂತರೆಂದು ಹೊಗಳುವ ಭರದಲ್ಲಿ ಅವರ ವ್ಯವಹಾರಗಳನ್ನು ಬೇರೆಯವರ ಬಳಿ ಹೇಳಿದರೆ , ಅದು ಊರೆಲ್ಲಾ ಹರಡುತ್ತದೆ. ಎಲ್ಲರೂ ಒಳ್ಳೆಯವರಾಗಿರುವುದಿಲ್ಲ, ದುರಾಸೆ ಮನುಷ್ಯರು ತೊಂದರೆ ಮಾಡಬಹುದು, ಇದರಿಂದ ಸಂಕಟಕ್ಕೆ ಸಿಲುಕಬಹುದು, ಆದ್ದರಿಂದ ಎಷ್ಚು ಬೇಕೋ ಅಷ್ಚನ್ನು ಹೇಳಿ ಮಾತು ಮುಗಿದರೆ ಒಳ್ಳೆಯದು, ಪೂರ್ತಿ ವ್ಯವಹಾರ ಯಾರಿಗೂ ಹೇಳಬಾರದು,
ಇನ್ನೊಂದು ವಿಷಯ
ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳುವುದು ಒಂದು ರೀತಿಯ ಸಂಸ್ಕಾರ ವೆಂದರೆ ತಪ್ಪಾಗಲಾರದು, ದುರಹಂಕಾರದಿಂದ ಯಾರಿಗೂ ಮರ್ಯಾದೆ ಕೊಡದೆ ಮಾತನಾಡಿದರೆ, ಅದು ವ್ಯಕ್ತಿತ್ವಕ್ಕೇ ಶೋಭೆಯಲ್ಲಾ. ಯಾರಾದರೂ ದೊಡ್ಡ ಹುದ್ದೆಯಲ್ಲಿದ್ದವರಾಗಲೀ ಅಥವಾ ಶ್ರೀಮಂತ ರೇ ಆಗಲೀ ಅವರ ಅಹಂಕಾರ ತೋರದೆ ಸಾಮಾನ್ಯ ಮನುಷ್ಯರಿಗೂ ಮರ್ಯಾದೆ ನೀಡಿ ಮಾತನಾಡಿದರೆ ಅವರ ವ್ಯಕ್ತಿತ್ವ ಹಾಗೂ ಗೌರವ ಹೆಚ್ಚುತ್ತದೆಯಲ್ಲವೇ?