ಜೀವನದ ಪರಿ
ಬದುಕು ಒಮ್ಮೆ ವಜ್ರದಂತೆ ಕಠಿಣ- ನಿಷ್ಠುರ ಅನಿಸುವುದು ..ಮತ್ತೊಮ್ಮೆ ಸುಮದಂತೆ ಮೃದು! ..
ಅದಕ್ಕೆ ಯಾರ ಹಂಗೂ ಇಲ್ಲ..ತಡವರಿಕೆಗೂ ಕಾಯದೇ, ಬಿಡದೆ ಬೆಂಡೆತ್ತುವುದು!…
ವ್ಯಾವಹಾರಿಕ ಕಲೆಯ ಸೆಲೆ ತಿಳಿಯದೆಲೆ, ಜೀವನದ ಸುಳಿ,ಸೆಳೆಯುವುದು ಬಳಿ!,
ಎಂಟೆದೆಯ ಬಂಟನಾದರೂ
ಒಮ್ಮೆ ಕುಂಟುವ!,ತಾನು ಭರದ ಜೀವನದಿ ನಡೆ ಹಾಕುವಾಗ!…
ಬಲವಂತರೂ ಸೋತಿಹರು!,ಜೀವನ ಪರೀಕ್ಷೆ ಯಲ್ಲಿ,..ಅದು ಕೇಳುವ ತಟ್ಟನೆ ಯ ಪ್ರಶ್ನೆಗೆ!….
ಹೊಳೆದಾಗ ಉತ್ತರ!
ನೀನಿರಬಹುದು ಕೊನೆಯ ಹತ್ತಿರ!.
ಉರುಳಿಹೋಯಿತಾಕಾಲ!.. ಇತ್ತು ಬಲ,
ಗಟ್ಟಿಯಾಗಿದ್ದವು ಕಾಲುಗಳು, ಭದ್ರ ನೆಲ!
ಸರಿದಂತೆ ಸಮಯ ಸರಿಗಳೆಲ್ಲ ಸರಿದು ಹೋದವು
ಬರಿದಾಗುತಿವೆ ಚೇತನಗಳು,ಸಪ್ಪೆಸಪ್ಪೆ ಸ್ವಾದವು.
ಯೌವ್ವನದಿ ಬೀಗೀ,ಮಾಗುತ ಸಾಗಿ ಬಂದಿತು ಮುಪ್ಪು
ಜೀವನ ಪಯಣದ ಅನಿವಾರ್ಯ ವಾಸ್ತವದ ಕಪ್ಪು.
ಬಂದವ ನಾನು ಇಲ್ಲಿ ಆದರೆ ಶಾಶ್ವತ!
ಕಾಲ ವು ಸುಮ್ಮನಿರಬೇಕೆ? ಹೇಳುತ್ತ ಸ್ವಗತ!
ಚಕ್ರನೇಮೀಚಕ್ರವಿಹುದು ಬದಲಾವಣೆ ನಿತ್ಯ
ಇದನರಿತು ಸಂತಸದಿಂದಿರೆ ಅದುವೇ ಜೀವನಸತ್ಯ
ನನ್ನ ತನ್ನವರು, ನನ್ನ ಅರಿತವರು, ನನ್ನ ಬಣ್ಣಿಸುವವರು..ಇವುಗಳ ತಿಳಿಯದೇ ಮನವ ಅಳೆದಾಗ,ಕಳೆಗುಂದಿದಾಗ ಬಳಿ ಬರುವವರ ಮನಾತ್ಮಗಳ ತಿಳಿ..
ಮನದ ವಿಚಿತ್ರ ಸತ್ಯ..
ಈಗ ತಣಿದು ದಣಿದು ನಿಲ್ಲುವುದೊಂದೆ ಬಾಕಿ, ಸರತಿಯಲ್ಲಿ, ಕೊನೆಯವನಾಗಿರಲಿ ಎಂಬ ಇನ್ನೂ ತೀರದ *ಆ* ಆಸೆಯಿಂದ!!! ನಿರಂತರ ಜೀವನ!!!!!
ಅ ದೇ ಪ್ರಲ್ಹಾದಸುತ ಕಲಬುರಗಿ