ನಮ್ಮ ಹೆಮ್ಮೆಯ ಪ್ರಾಚೀನ ಸಾಹಿತಿಗಳು
ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ/ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ, ಹಾಡು, ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವವರನ್ನು ಕವಿಗಳು ಎಂದು ಕರೆಯಲಾಗಿದೆ. ಕನ್ನಡ ಸಾಹಿತ್ಯದ ? ಹುಟ್ಟಿನಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಈ ಬರಹದ್ದು.
- ಪಂಪ (ಕ್ರಿ.ಶ 902 – 950) ಕನ್ನಡದ ಆದಿಕವಿ ಎಂದು ಪ್ರಸಿದ್ಧನಾದವನು. ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನೂ ರಚಿಸಿದ್ದಾನೆ. ಕನ್ನಡದ ರತ್ನತ್ರಯರಲ್ಲಿ ಈತನು ಒಬ್ಬ, ಪಂಪನನ್ನು ಯುಗ ಪ್ರವರ್ತಕ’ನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ‘ ಎಂದು ಕರೆದಿದ್ದಾರೆ. ‘ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ‘ ಇವೆರಡೂ ಪಂಪನ ಎರಡು ಮೇರುಕೃತಿಗಳು.
- ರನ್ನನು( 949 – 1020) ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿರತ್ನ ‘ಅಜಿತ ತೀರ್ಥಂಕರ ಪುರಾಣ ತಿಲಕಂ‘, ಸಾಹಸಭೀಮವಿಜಯ (ಗದಾಯುದ್ಧ) ಈತನ ಪ್ರಮುಖ ಕೃತಿಗಳು .ಈತನಿಗೆ ಕವಿಚಕ್ರವರ್ತಿ, ಕವಿರತ್ನ ಕವಿತಿಲಕ ಮುಂತಾದ ಬಿರುದುಗಳಿವೆ. ರನ್ನನು ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವ ಮಲ್ಲ ಹಾಗು ಅವನ ಮಗ ಸತ್ಯಾಶ್ರಯ ಇರುವ ಬೆಡಂಗರ ಆಸ್ಥಾನ ಕವಿಯಾಗಿದ್ದ.
- ರನ್ನನಿಗೆ ರಾಯ ಮತ್ತು ಅತ್ತಿಮಬ್ಬೆ ಎಂಬ ಇಬ್ಬರು ಮಕ್ಕಳಿದ್ದರು, ತನ್ನ ಮಕ್ಕಳಿಗೆ ಚಾವುಂಡರಾಯ ಮತ್ತು ಅತ್ತಿಮಬ್ಬೆಯರ ಹೆಸರನ್ನು ಇಡುವುದರ ಮೂಲಕ ಕವಿ ಅವರ ಉಪಕಾರಕ್ಕೆ ಗೌರವವನ್ನು ತೋರಿದ್ದಾನೆ.
- ಪೊನ್ನನ ಕಾಲ ಕ್ರಿ.ಶ. 950 ಈತ ರಾಷ್ಟ್ರಕೂಟ ಚಕ್ರವರ್ತಿ ಮೂರನೇ ಕೃಷ್ಣನ ಆಸ್ಥಾನದಲ್ಲಿ ಅಸ್ಥಾನ ಕವಿಯಾಗಿದ್ದನು. ಕನ್ನಡ ಹಾಗೂ ಸಂಸ್ಕೃತಗಳಲ್ಲಿ ಇವರನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ ‘ಉಭಯ ಕವಿ ಚಕ್ರವರ್ತಿ’ ಎಂದು ಕರೆಯಲಾಗುತ್ತಿತ್ತು. ಪೊನ್ನನು ನಾಲ್ಕು ಕಾವ್ಯಗಳನ್ನು ರಚಿಸಿದ್ದಾನೆ.
- 1) ಶಾಂತಿ ಪುರಾಣ (ಪುರಾಣ ನಾಮ ಚೂಡಾಮಣಿ)
2) ಜಿನಾಕ್ಷರಮಾಲೆ
3) ಭುವನೈಕ ರಾಮಾಭ್ಯದಯ
4) ಗತಪ್ರತ್ಯಾಗತ.
‘ಛಂದೋಂಬುದಿ‘ ಕನ್ನಡದಲ್ಲಿ ಉಪಲಬ್ಧವಿರುವ ಪ್ರಥಮ ಛಂದಶ್ಯಾಸ್ತ್ರ ಕೃತಿ. ಕಾಲದ ದೃಷ್ಟಿಯಿಂದ ಮಾತ್ರವಲ್ಲ ಮಹತ್ವದ ದೃಷ್ಟಿಯಿಂದಲೂ ಇದು ಆದಿಗ್ರಂಥ . - ನಮಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಕಾವ್ಯರಚನೆ ಮಾಡಿದ ಮೊದಮೊದಲ ಬ್ರಾಹ್ಮಣ ಕವಿಗಳು ನಾಲ್ವರು, ಮೊದಲನೆಯ ನಾಗವರ್ಮ, ದುರ್ಗಸಿಂಹ, ರುದ್ರಭಟ್ಟ ಮತ್ತು ದೇವಕವಿ. ಅವರ ಕಾವ್ಯಗಳು ಕಕರ್ನಾಟಕ ಕಾದಂಬರಿಕಿ, ಕಪಂಚತಂತ್ರಕಿ,ಕಜನ್ನಾಥ ವಿಜಯಕಿ ಮತ್ತು ಕಕುಸುಮಾವಳಿಕಿ.
- ಮೊದಲನೆಯ ನಾಗವರ್ಮನು ಕನ್ನಡದ ಮೊತ್ತಮೊದಲ ಬ್ರಾಹ್ಮಣ ಕವಿ ಎಂಬ ಹೆಸರಿನ ಕವಿಗಳು ಕನ್ನಡದಲ್ಲಿ ಎಷ್ಟು ಮಂದಿ ಯಿದ್ದಾರೆ ಎಂಬುದೂ ವಿದ್ವಾಂಸರಲ್ಲಿ ಚರ್ಚೆಯ ವಿಷಯವಾಗಿದೆ. ವತ್ಸರಾಜ ಚರಿತದ ನಾಗವರ್ಮ, ಛಂದೋಂಬುಧಿಯ ನಾಗವರ್ಮ, ಕಾವ್ಯವಲೋಕನ ವಿವರ್ಧಮಾನ ಪುರಾಣ ಮೊದಲಾದ ಕೃತಿಗಳ ನಾಗವರ್ಮ ಅಭಿಧಾನ ರತ್ನಮಾಲಾ ಟೀಕೆಯ ನಾಗವರ್ಮ ಹೀಗೆ ಹಲವರು ಇಷ್ಟರಲ್ಲಿ ನಮಗೆ ಪ್ರಸ್ತುತ ನಾದವನು ಮೊದಲನೆಯ ನಾಗವರ್ಮ. ಅವನ ಕೃತಿ ಸೃಜನಶೀಲ ಕಾವ್ಯವಾದ “ಕರ್ನಾಟಕ ಕಾದಂಬರಿ.” ಇವನ ಆಶ್ರಯದಾತ ನಾಗಿದ್ದವನು ಚಾಳುಕ್ಯ ಚಕ್ರವರ್ತಿಗಳ ಸಾಮಂತನಾಗಿದ್ದ ಕೊಲ್ಲಾಪುರ ಕರ್ಹಾಡ ಪ್ರಾಂತ್ಯವನ್ನು ಆಳುತ್ತಿದ್ದ ಚಂದ್ರ ನೆಂಬುವನು. ನಾಗವರ್ಮ ತನ್ನನ್ನು ತಾನು ಬುಧಾಬ್ಜವನ ಕಳಹಂಸ ಎಂದು ಕರೆದುಕೊಳ್ಳುತ್ತಾನೆ. ಪ್ರಾಯಶಃ ಇವನ ಬಿರುದು ಜೊತೆಗೆ ಕವಿರಾಜಹಂಸ ಎಂಬುದು ಇವನ ಬಿರುದಾಗಿದ್ದಿರಬಹುದು.
- ಹೊಯ್ಸಳ ಆಡಳಿತ ಕಾಲದಲ್ಲಿ ಸಂಸ್ಕೃತ ಸಾಹಿತ್ಯ ಜನಪ್ರಿಯವಾಗಿದ್ದರೂ ಕನ್ನಡ ವಿದ್ವಾಂಸರಿಗೆ ರಾಜಾಶ್ರಯ ಹೆಚ್ಚಾಯಿತು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂದಿಗೂ ಹಸಿರಾಗಿರುವ ಜನ್ನ,ರುದ್ರಭಟ್ಟ,ನಾಗಚಂದ್ರ, ಹರಿಹರ ಮತ್ತು ಅವನ ಸೋದರಸಂಬಂಧಿ ರಾಘವಾಂಕ ಇವರೆಲ್ಲರಿಗೂ ಹೊಯ್ಸಳ ರಾಜಸ್ಥಾನವು ಆಶ್ರಯವನ್ನು ಕೊಟಿತ್ತು. 1209ರಲ್ಲಿ ಜೈನಕವಿ ಜನ್ನನು ‘ಯಶೋಧರ ಚರಿತೆ‘ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದನು. ರುದ್ರಭಟ್ಟನು ಬ್ರಾಹ್ಮಣ ಕವಿಗಳಲ್ಲಿ ಮೊದಲನೆಯವನು ಆತನ ಪ್ರಸಿದ್ಧ ಚಂಪು ಶೈಲಿಯ ಜಗನ್ನಾಥ ವಿಜಯ ಕೃತಿಯು ಅತ್ಯಂತ ಮಹತ್ವದ್ದಾಗಿದೆ. ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದ ಕವಿ ಹರಿಹರ ಹಳೆಯ ಜೈನ ಚಂಪೂ ಶೈಲಿಯಲ್ಲಿ ಗಿರಿಜಾಕಲ್ಯಾಣ ಕೃತಿಯನ್ನು ರಚಿಸಿದನು. ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದ ಮೂಲಕ ಷಟ್ಟದಿಯ ಬಳಕೆಯನ್ನು ಮೊಟ್ಟಮೊದಲಿಗೆ ಮಾಡಿದ. ಇದು ಕನ್ನಡ ಸಾಹಿತ್ಯದ ಅತಿಶ್ರೇಷ್ಟ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
- ಕೇಶಿರಾಜನ ಶಬ್ದಮಣಿದರ್ಪಣದ ಹೆಸರನ್ನು ಕೇಳದ ಕನ್ನಡಿಗನಿರಲು ಸಾಧ್ಯವಿಲ್ಲ ಕಂದಪದ್ಯಗಳಲ್ಲಿ ರಚಿತವಾದ ವ್ಯಾಕರಣ ಗ್ರಂಥ ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆ. ಇದರಲ್ಲಿ ಕನ್ನಡಕ್ಕಿರುವ ವಿಶೇಷ ಸಂಗತಿಗಳ ಕುರಿತು ಹೇಳಲಾಗಿದೆ ಕೇಶಿರಾಜನ ಕಾಲ ಸುಮಾರು ಕ್ರಿ.ಶ 1260. ಈತ ಜನ್ನನ ಸೋದರಳಿಯ ಪ್ರಸಿದ್ಧ ಕವಿ ಹಾಗೂ ವಿದ್ವಾಂಸರ ಮನೆತನಕ್ಕೆ ಸೇರಿದವನು. ಈತನ ತಂದೆ ಯೋಗಿ ಪ್ರವರ ಚಿದಾನಂದ ಮಲ್ಲಿಕಾರ್ಜುನ ಹಳಗನ್ನಡ ಕಾವ್ಯ ಸಂಕಲನ ಗ್ರಂಥವಾದ ಸೂಕ್ತಿ ಸುಧಾರ್ಣವದ ಕರ್ತೃ. ಈತನ ಮಾವ ಕವಿಯೂ ಯಾದವ ಕಟಕಾಚಾರ್ಯನೂ ಆಗಿದ್ದ ಸುಮನೋಬಾಣ. ಯೋಗಿ ಪ್ರವರ ಚಿದಾನಂದ ಮಲ್ಲಿಕಾರ್ಜುನ ಭಾವ ನಮ್ಮ ಕವಿಚಕ್ರವರ್ತಿ ಜನ ಕುಟುಂಬವೇ ಉದ್ದಾಮ ಕವಿಗಳಾಗಿದ್ದ .ಈ ಕಾಲ ಕನ್ನಡ ಸಾಹಿತ್ಯದ ಸುವರ್ಣ ಯುಗ ಎಂದರೆ ತಪ್ಪಾಗಲಾರದು.
- ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ 12 ಮತ್ತು 13ನೇ ಶತಮಾನಗಳ ಸಾಹಿತ್ಯ-ಸಂದರ್ಭ ತುಂಬಾ ಪ್ರಮುಖ ಮತ್ತು ವಿಶಿಷ್ಟ 12ನೇ ಶತಮಾನದ ವಚನಕಾರರು ಅಂದಿನ ಕಾಲದ ಶೋಷಣೆ ಅನ್ಯಾಯ, ಮೌಢ್ಯ, ಕಂದಾಚಾರ, ಅಸಮಾನತೆ, ಅನಾಚಾರ ಸರ್ವಾಧಿಕಾರಿ ಮನೋಭಾವ ಪ್ರಭುತ್ವದ ದುರಾಡಳಿತ ಧಾರ್ಮಿಕ ಡಂಭಾಚಾರ ಮುಂತಾದ ಮಾನವ ವಿರೋಧಿ, ಜೀವವಿರೋಧಿ ನಿಲುವು ಆಚರಣೆಗಳನ್ನು ವಿಡಂಬಿಸಿ ಅವುಗಳನ್ನು ಬೇರು ಸಹಿತ ಕಿತ್ತೊಗೆಯಲು ನಡೆಸಿದ ಚಳುವಳಿಯ ಪ್ರತಿಫಲವಾಗಿ ಸೃಷ್ಟಿಯಾದ ವಚನ ಸಾಹಿತ್ಯದ ಮತ್ತು ವಚನಕಾರರ ಪ್ರಭಾವವು ನಂತರದ ಹದಿಮೂರನೆಯ ಶತಮಾನದ ಹರಿಹರ, ರಾಘವಾಂಕ, ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪಾಲ್ಕುರಿಕೆ ಸೋಮನಾಥ ಉದ್ಧಟ ದೇವ, ಆಚಣ್ಣ ಅಗ್ಗಳ, ಪಾರ್ಶ್ವ ಪಂಡಿತ ರಟ್ಟ ಕವಿ ಮುಂತಾದ ಕವಿಗಳ ಮೇಲೆ ಬೀರಿದೆ. ಹಾಗಾಗಿ 13ನೇ ಶತಮಾನದಲ್ಲಿ ರಚನೆಗೊಂಡ ಸಾಹಿತ್ಯವು ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ಮುಖ್ಯ ಘಟ್ಟವಾಗಿ ನಿಂತುಕೊಳ್ಳುತ್ತದೆ.
- ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ವಚನ ಸಾಹಿತ್ಯದ ಪ್ರಮುಖ ವಚನಕಾರರೆಂದರೆ ದೇವರ ದಾಸಿಮಯ್ಯ, ಅಕ್ಕಮಹಾದೇವಿ ಬಸವಣ್ಣ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ ಆಯ್ದಕ್ಕಿ ಲಕ್ಕಮ್ಮ ಮುಂತಾದವರು.
– ವಿಶ್ವಾಸ ಡಿ. ಗೌಡ, ಸಕಲೇಶಪುರ