…ಶಿಕ್ಷಕರ ದಿನಾಚರಣೆ. … … … … .
ಜೀವನೋಪಾಯದ ವೃತ್ತಿ ಕೌಶಲ್ಯ ಕಲಿಸಿದಾತರೆಲ್ಲರು ಶಿಕ್ಷಕರಲ್ವೆ!
*********(((((($$$$$))))))*****
ಜೀವನಾಧಾರಕ್ಕಾಗಿ ಶಿಕ್ಷಣವೆ ಮೂಲ
ಜೀವನೋಪಾಯಕ್ಬೇಕು ವೃತ್ತಿಕೌಶಲ್ಯ
ಜ್ಞಾನವಿಕ್ಕಿ ದುಡಿದು ಹಣಗಳಿಸೋದ
ಜೀವಿಸುತ ತನ್ನಾಶ್ರಿತರ ಸಲಹೊ ಸಾರ್ಥಕ
ಜೀವನದ ಜಾಣ ಕಲೆ ಕಲಿಸಿದಾತ ತಾ ಗುರುವಲ್ಲವೆ!
ಜೀವನಸಾಗಲು ಗಳಿಕೆ ಅನಿವಾರ್ಯ
ಜೀವ್ನೋಪಾಯಕೆ ಬೇಕುಉದ್ಯೋಗ ಮಾರ್ಗ.
ಜೀವನೋಪಾಯದ ಗಳಿಕೆ ಇಲ್ಲವಾದ.
ಜಡವಾದ ಜೀವನಕೆ ಕೆಲಸ ಕಲಿಸುತ್ತ
ಜತನದಿ ದುಡಿಮೆಗಚ್ಚಿದವ ಶಿಕ್ಷಕನಲ್ಲವೆ!
ಗ್ಯಾರೇಜಲ್ಲಿ ರಿಪೇರಿ ಕಲಿಸಿದ ಮೆಕ್ಯಾನಿಕ್.
ಗಾರಿಕೆಲಸದ ಕುಶಲ ಕಲಿಸಿದ ಮೇಸ್ತ್ರಿ.
ಬಟ್ಟೆಹೊಲಿವುದ ಕಲಿಸ್ಕೊಟ್ಟ ಟೈಲರ್.
ಬಡಗಿ,ಕಮ್ಮಾರಿಕೆ,ಚಮ್ಮಾರಿಕೆ ಕುಂಬಾರಿಕೆ ವೃತ್ತಿ.
ಕಲಿಸಿದಾತನು ಸಹ ಗುರು, ಶಿಕ್ಷಕನಲ್ವೆ!!
ಹೊಲವ ಉತ್ತಿ ಬಿತ್ತಿ ಬೆಳೆವ ಬೇಸಾಯ.
ಹೋರಿ-ಎತ್ತು,ದನ-ಕರು,ಕುರಿ-ಮೇಕೆ
ಹೈನುಗಾರಿಕೆ ಸಂಪಾದನ್ಗೆ ಸರಳದಾರಿ
ಹಣ್ಣು ತರಕಾರಿ, ತೋಟಗಾರಿಕೆ ಕೃಷಿ
ಹಳ್ಳಿ ಹೈಕಳಿಗೆ ಸಾಂಪ್ರದಾಯಿಕ ವೃತ್ತಿ
ಹಗುರ ಸಂಪಾದನೆ ಕಲಿಸಿದಾತ ತಾ ಶಿಕ್ಷಕನಲ್ಲವೆ!!
ಸ್ವಂತ ಬುದ್ದಿವಂತಿಕೆಯಿಂದ ದುಡಿಮೆ
ಸ್ವತಂತ್ರ ಬದುಕಿಗೆ ಬೇಕೊಂದು ವೃತ್ತಿ.
ಸರಳವಾಗಿ ಗಳಿಸುವ ಬುದ್ಧಿವಂತಿಕೆ..
ಸಂಪಾದನೆ ಜೀವ್ನ, ಸಂಸಾರಕೆ ಸೌಖ್ಯ
ಸ್ವ-ಉದ್ಯೋಗ ಕಲಿಸಿದವರೆಲ್ಲರು ಶಿಕ್ಷಕರಲ್ಲವೇ!!
*********05.09.2024*********
ಶ್ರೀ ನಟರಾಜ್ ದೊಡ್ಡಮನಿ