…ಶಿಕ್ಷಕರ ದಿನಾಚರಣೆ… …. …. … .
******************************
ತನಗಿಂತ ನನ್ನ ಶಿಷ್ಯ ಉನ್ನತ ಸ್ಥಾನದಲ್ಲಿರಲೆಂದು ಪ್ರೇರಿಸೋ ಶಿಕ್ಷಕರು,
********((((((($$$$)))))*******
ಬಂದಿತು ಶಿಕ್ಷಕರ ಸೇವೆ ಸ್ಮರಿಸೊದಿನ
ಇಂದು ಶಿಕ್ಷರದಿನವ ಆಚರಿಸೋಣ!!
ಸೇವೆಯ ಫಲ ಸೇವೆಯೆಂಬ ದ್ಯೆಯ.
ಗಾಂಧೀ ತತ್ವಾದರ್ಶವನ್ನು ಪಾಲಿಸುತ
ಶಿಕ್ಷಕರಾಗಿ,ದೇಶದರಾಷ್ಟ್ರಪತಿಗಳಾಗಿ
ಸೇವೆಗೈದ ಸರ್ವೆಪಲ್ಲಿ ರಾಧಾಕೃಷ್ಣರ
ಜನ್ಮದಿನದ ಆಚರಣೆಯ ಶಿಕ್ಷರಸೇವೆ
ಸ್ಮರಿಸೋ ದಿನವಾಗಲೆಂದ ನಿಸ್ವಾರ್ಥಿ
ಶಿಕ್ಷಕರಸೇವೆ ಮಹತ್ವವರಿತ ಮಹಾಶಿಕ್ಷಕ
ಅವರ ಸ್ಮರಣೆ ಜೊತೆಗೆ ಸರ್ವ ಶಿಕ್ಷಕರ.
ಸೇವೆ ಸ್ಮರಿಸೋ ಸುದಿನವೊ ಇಂದು!
ಸನ್ಮಾನ,ಪ್ರಶಸ್ತಿ ಹೊಗಳಿಕೆಗಿಂತಲೂ,
ಶಿಷ್ಯರ ಮೆಚ್ಚುಗೆಯೆ ದೊಡ್ಡ ಗೌರವ!
ಶಿಷ್ಯರೇಳ್ಗೆಯನ್ನೆ ಸದಾಬಯ್ಸುವಂತ, ತನ್ನ ಸ್ಥಾನಕ್ಕಿಂತಲುತನ್ನ ಶಿಷ್ಯರೆಲ್ಲರು ಅತ್ಯುನ್ನತಸ್ಥಾನದಲ್ಲಿಸಲು ಪ್ರೇಪಿಸುತ,
ಶಿಷ್ಯರ ಔನ್ಯತ್ಯದದ್ಯೇಯೋದ್ದೇಶದಲ್ಲಿ
ಸೇವೆಗೈದು ಜೀವಗಳೆವ ಶಿಕ್ಷಕರನ್ನಿಂದು,
ಸೇವೆಸ್ಮರಿಸಿ-ನಮಿಸಿ ಕೃತಾರ್ಥರಾಗೊ ಸುದಿನ!
‘ಹರ ಮುನಿದರು- ಗುರು ಕಾಯ್ವನು’
ಹಿರಿಯರ ಅನುಭವದ ನುಡಿಸತ್ಯವು
ಬಾಲಬಾಲೆಯರಿಗೆ ಅಕ್ಷರ ಜ್ಞಾನವಿಕ್ಕಿ
ಓದುಬರಹ ಜೊತೆ ಪ್ರಪಂಚಪರಿಚಿಸಿ
ಭವ್ಯ ಬಾಳಿಗೆ ಸನ್ಮಾರ್ಗ ತೋರಿಸುತ
ನೆಮ್ಮದಿ ಸ್ವತಂತ್ರ ಬಾಳನು ಹಿಡಿಸಿದ.
ತಂದೆತಾಯಿ ಸೇವೆಯೆ,ದೇವ್ರ ಪೂಜೆ.
ಗುರುಹಿರಿಯರ,ಅತಿಥಿಗಳ ಗೌರವಸಿ
ದೀನದಲಿತ ಬಡವರಿಗೆ ಸಹಾಯಗೈದು
ಸಾರ್ಥಕ ಬಾಳಿನ ಗುರಿ ತೋರಿಸಿದ
ಮಹಾ ಮಹಿಮ ಶಿಕ್ಷಕರ ಸ್ಮರಿಸೋಣ!
*********05.09.2024*********
ಶ್ರೀ ನಟರಾಜ್ ದೊಡ್ಡಮನಿ.
ಶಿಕ್ಷಕರು,ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ. ಕ್ಯಾಸಿನಕೆರೆ. ಹೊನ್ನಾಳಿ. ತಾ.