ಬದುಕು ಎಂದರೆ?
ಎನ್ನುವುದೇ ಬೃಹದಾಕಾರದ ಪ್ರಶ್ನೆ!
ವ್ಯಾಖ್ಯೆ ನೀಡಲು ಹೋದರೆ!.. ಅವು ಅಪೂರ್ಣ

ಇಷ್ಟಾನಿಷ್ಟಗಳ ನಡುವೆಯೂ
ಸ್ಪಷ್ಟವಾಗಿ ಬಿಡಿಸಬೇಕಾದ
ಕ್ಲಿಷ್ಟಕರವಾದ ಚಿತ್ರವು!!.
ಪರಿಪೂರ್ಣ ಕಲೆಗಾರನಿಗೆ ಉತ್ತಮಾಂಕ,
ಸರಿಸುಮಾರಿಗೆ ಅವಮಾನಗಳ ಸುಂಕ!.
ಎಂದು ಹೇಳಿ ಸಮಾಧಾನ ಪಟ್ಟು ಕೊಳ್ಳಬೇಕು.

ಬದುಕಲ್ಲಿ ಕೆಲವು ವಿಷಯಗಳು
ನಮ್ಮ ಹಿಡಿತದಲ್ಲಿರುವಾಗ
ಜೀವನವೆಸುವುದು ಸರಳ!
ಆದರೆ..
ಎಲ್ಲರೂ ಸಲೀಸಾಗಿ ತೂರಿ ಹೋಗುವಷ್ಟು
ಸುಲಭವಲ್ಲವೀ ಬದುಕು!… ದೇವನೆನ್ನುವ ಆ ಮಾರ್ಗವ ಹುಡುಕು!.

ನಮ್ಮ ಅವಯವಗಳೇ ನಾವು ಹೇಳಿದಂತೆ ಕೇಳದಿರುವಾಗ,ಬದುಕು ನಮ್ಮ ಮಾತು ಕೇಳುವುದೇ?… ಅದು ಒಂಟಿ ಸಲಗದ ಪಥ!

ಆಮಿಶಗಳಿಂದ ಬದುಕು ಸಂಕೀರ್ಣ!
ಆಗುತ, ಅವೇಶಗಳು ಅವಘಡಕ್ಕೆ ಕಾರಣ.
ಬದುಕು ತಿಳಿಯದ ತಿರುವುಗಳ ತಾಣ
ಅದು ಕ್ಲಿಷ್ಟ ಎಣಿಸಲು ಇವುಗಳೇ ಕಾರಣ.
“ಇದು ಇಷ್ಟೇ” ಎನ್ನುವಷ್ಟು ಸುಲಭವಾಗಿದ್ದರೆ ಬದಕು..?!!
ಜೀವನದಿ ಎಲ್ಲರೂ ಹಸನ್ಮುಖಿಗಳಾಗೇ ಇರುತ್ತಿದ್ದರೇನೋ?!..

ಬರೆದಷ್ಟು ಬದುಕು!
ಅದಕಿಹವು ಬಹು ಸರಕು.
ನಿಲ್ಲಿಸಲೇ? ಅಲ್ಲಿಗೆ ಬರಲೆ?
ಎನ್ನುವ ಪ್ರಶ್ನೆಗೆ ದೇವರೊಬ್ಬನೇ
ಉತ್ತರಿಸಬಲ್ಲ!… ಇನ್ನು ಬರಲೆ?.
😊🙏
~ ಅ ದೇ ಉವಾಚ