ಶ್ರೀಕೃಷ್ಣನ ಬಾಲಲೀಲೆಗಳು
ಪುಟ್ಟ ತುಂಟ ಕಾನ್ಹಾ
ಅಮ್ಮಾ ನಾನು ಬೆಣ್ಣೆ ಕದ್ದಿಲ್ಲಮ್ಮಾ
ನನ್ನನ್ನು ಕಂಬಕ್ಕೆ ಕಟ್ಟ ಬೇಡಮ್ಮಾ
ದಮ್ಮಯ್ಯಾ ಸುಳ್ಳು ಹೇಳುವದಿಲ್ಲಮ್ಮಾ
ಕಾನ್ಹಾ ನಿನ್ನೆ ಮೊನ್ನೆಯದಲ್ಲಾ
ದಿನ ನಿತ್ಯ ಕೇಳುತಿರುವೆನಲ್ಲಾ
ತಕ್ರಾರು ಮಾಡುತಿಹರು ಗೋಪಿಯರೆಲ್ಲಾ
ಓ ಅಂದದ ಚೆಂದದ ನನ್ನ ಕಂದಾ
ನಾರಿಯರೆಲ್ಲ ಕಾನ್ಹಾ ಬೆಣ್ಣೆ ತಿಂದಾ
ಕದ್ದೊಯ್ಯಲು ಗೆಳೆಯರೊಂದಿಗೆ ಬಂದಾ
ಸತ್ಯ ನುಡಿವರು ನನ್ನ ಗೆಳತಿಯರು
ನಿಜನುಡಿ ಮಗು ಗೋಗರೆಯುತಿಹಳು
ಯಶೋದೆ ಕೃಷ್ಣಗೆ ಬಾಯಿ ತೋರಿಸೆಂದಳು
ತಾಯಿ ಮಾತಿಗೆ ನಗುತ ಗೋವಿಂದ
ಬಾಯಿ ತೆರೆದು ತೋರಿಸಿದ ಬ್ರಹ್ಮಾಂಡ
ಬಾಯಿ ಮುಚ್ಚಲಿಲ್ಲ ಯಶೋದೆ ಅದಕಂಡು
ಬ್ರಹ್ಮಾಂಡವೇ ಪಿಂಡಾಂಡಮಯವೆಂದು
ಅರಿತ ಧನ್ಯಳಾದ ಯಶೋದೆ ಕೈಮುಗಿದು
ದೇವಶಿಶು ನನ್ನಮಗು ಸಾರ್ಥಕಬಾಳೆಂದಳು
ಬಾಲಲೀಲೆಯಾದರೂ ಬಂಧನದ
ನಂಟುಗಳಿಗೆ ಅಂಟಲಾರದ ಜೀವನ
ಪಾಠ ಕಲಿಸಿದ ಕೇಶವನಿಗೆ ನಮನಗಳು
ಅನ್ನಪೂರ್ಣ ಸಕ್ರೋಜಿ, ಪುಣೆ