ಒಲವಿನ ಬಣ್ಣದ ಗೆಜ್ಜೆ

ಇನಿಯಾ ನಿನ್ನಿಂದಾಗಿ ಪಾಳು ಮನೆಯೂ ಅರಮನೆಯಾಗಿದೆ
ಪ್ರೀತಿ ಪ್ರೇಮ ಸೌದದಿ ಮನವು ಮುದ ಗೊಂಡಿದೆ
ನಿನ್ನ ಕೈಯ ಅಕ್ಕರೆಯ ಆರೈಕೆಯಲ್ಲಿ ಮೀಂದಾಗಿದೆ
ನಮ್ಮಿಬ್ಬರ ಪ್ರೀತಿ ಬಾಂಧವ್ಯ ಜಗದಲಿ ಸ್ಥಿರಸ್ಥಾಯಿಯಾಗಿದೆ

ಬಡವನಾದರೂ ಕಾಲಿಗೆ ಬಣ್ಣದ ಗೆಜ್ಜೆ ಹಚ್ಚಿ ಸಂಭ್ರಮಿಸುವೆನು
ಆ ಕಾರಣಕ್ಕಾದರೂ ನಿನಗೆ ಸ್ವಲ್ಪ ವಿಶ್ರಾಂತಿಯನ್ನು ಕೊಡುವೆನು
ನಿನ್ನ ಕಣ್ ಮನಗಳಲ್ಲಿ ಕಾಣುವೆನು ಸಾವಿರ ಕನಸುಗಳನು
ಜನ್ಮ ಜನ್ಮಾಂತರಕ್ಕೂ ನಾನೇ ನಿನ್ನ ಸರದಾರ ನಾಗುವೆನು.

– ರವೀಂದ್ರ ಸಿ.ವಿ.
ವಕೀಲರು, ಮೈಸೂರು