ಈ ದಿನದ ಪ್ರಶ್ನೆಗಳು | ವಿಷಯ: ಅಕ್ಕಮಹಾದೇವಿ
1- ಅಕ್ಕಮಹಾದೇವಿಯವರ ಅಂಕಿತನಾಮ ಯಾವುದು?
2- ಇವರ ಜನ್ಮಸ್ಥಳವನ್ನು ತಿಳಿಸಿರಿ?
3- ಹಸಿವಾದರೆ ಭಿಕ್ಷಾನ್ನಗಳುಂಟು……… ಉಂಟು. (ಈ ವಚನದಲ್ಲಿ ಬಿಟ್ಟ ಪದ ಬರೆಯಿರಿ)
4- ಅಕ್ಕಮಹಾದೇವಿಯವರು ಐಕ್ಯವಾದ ಸ್ಥಳ ಯಾವುದು?
5- ಅಕ್ಕಮಹಾದೇವಿ ಅವರ ತಂದೆ ತಾಯಿ ಯಾರು?
6- ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
7- ಅಕ್ಕಮಹಾದೇವಿಯವರನ್ನು ಮದುವೆಯಾಗಲು ಬಯಸಿದ ವ್ಯಕ್ತಿ ಯಾರು?
8- ನಾಳೆ ಬರುವುದು ನಮಗಿಂದೇ ಬರಲಿ…….. ನಮಗೀಗಲೇ ಬರಲಿ. (ಈ ವಚನದಲ್ಲಿ ಬಿಟ್ಟ ಪದ ಬರೆಯಿರಿ)
9- ಉಸುರಿನ ಪರಿಮಳವಿರಲು……. ಹಂಗೇಕಯ್ಯ (ಈ ವಚನದಲ್ಲಿ ಬಿಟ್ಟ ಪದ ಬರೆಯಿರಿ)
10- ಅಕ್ಕಮಹಾದೇವಿಯವರ ಪ್ರಮುಖ ಕೃತಿ ಯಾವುದು?
ಈ ದಿನದ ಉತ್ತರಗಳು…
1- ಶ್ರೀ ಚನ್ನಮಲ್ಲಿಕಾರ್ಜುನ
2- ಉಡುತಡಿ
3- ತ್ರಷೆಯಾದರೆ ಕೆರೆ ಹಳ್ಳಗಳುಂಟು
4- ಶ್ರೀಶೈಲದ ಕದಳಿವನ
5- ನಿರ್ಮಲಶೆಟ್ಟಿ ಮತ್ತು ಸುಮತಿ
6- ವಿಜಯಪುರ
7- ಕೌಶಿಕ ರಾಜ
8- ಇಂದು ಬರುವುದು
9- ಕುಸುಮದ
10- ಯೋಗಾಂಗ ತ್ರಿವಿಧಿ
ಇನ್ನು ಹೆಚ್ಚೆಚ್ಚು ತಿಳಿಯಲು ವಿಶ್ವಜ್ಞಾನ ದರ್ಶನ ವೆಬ್ಸೈಟ್ ಅಲ್ಲಿ ಜ್ಞಾನಜ್ಯೋತಿ ದಿನಂಪ್ರತಿ ಟ್ಯಾಗ್ಲೈನ್ ಅನ್ನು & ಸಾಮಾನ್ಯ ಜ್ಞಾನ, ಅಸಾಮಾನ್ಯ ಜೀವನ ಟ್ಯಾಗ್ಲೈನ್ ಅನ್ನು ಹಿಂಬಾಲಿಸಿರಿ. ಅಥವಾ ಗೂಗಲ್ ಅಲ್ಲಿ ಹುಡುಕಿರಿ.