(ಕ) ಗುಣಿತಾಕ್ಷರ

ಕನವರಿಕೆಯಲ್ಲಿಯೇ ನಾ ಕಳೆದೆನು ಆ ದಿನಗಳನ್ನು.
ಕಾ ಕಾಪಾಡು ತಾಯೇ ಎಂದು ದಿನವೂ ನಾ ಸ್ಮರಿಸುತ್ತಿದ್ದೆನು.
ಕಿ ಕಿವುಡಿಯಾಗದೇ ಆಲಿಸು ತಾಯೇ ನನ್ನ ಆರ್ತನಾದವನ್ನು.
ಕೀ ಕೀರ್ತಿ ಕಿರೀಟ ಧನ ಕನಕ ಇತರೆ ನಾ ಬೇಡೆನು ಏನನ್ನು.
ಕು ಕುರುಹಾಗಿ ನಾಡಿನಲ್ಲಿ ನಾ ಉಳಿಯಲು ಇಚ್ಚಿಸಿಹೆನು.
ಕೂ ಕೂತುಣ್ಣಲು ಇಚ್ಚಿಸದೇ ಕಾರ್ಮಿಕನಾಗಲು ಬಯಸಿಹೆನು.
ಕೃ ಕೃಷಿಕನಾಗಿ ಸಾಹಿತ್ಯ ಕ್ಷೇತ್ರವ ಪ್ರವೇಶಿಸುವಂತೆ ಮಾಡೆನ್ನನು.
ಕೆ ಕೆಲಸ ಮಾಡಲು ನನ್ನಲಿ ಚೈತನ್ಯವ ನೀಡಿ ಕರುಣಿಸೆನ್ನನು.
ಕೇ ಕೇಳಿಸಿ ಕೊಂಡಳು ಆ ಸರಸ್ಪತಿ ಮಾತೆ ನನ್ನ ಅಂತರಾಳದ ಕೂಗನ್ನು.
ಕೌ ಕೌಟುಂಬಿಕ ಸಾಗರದಲ್ಲಿ ಮುಳುಗಿಸದೇ ತೇಲಿಸಿದಳು ನನ್ನನು.
ಕಂ ಕಂಡು ಕರೆಸಿ ಕೊಳ್ಳುವಂತಹ ಕವಿಯಾಗಿ ಬೆಳೆಸಿಹಳು ನನ್ನನು.
ಕಃ ಕರುನಾಡಿನಲ್ಲಿ ಉದಯೋನ್ಮುಖ ಕವಿಯಾಗಿ ನಾ ಬೆಳೆಸಿದೆನು.

ತಲೆ ಇದ್ದರೆ ಕಲೆ

ಆಟವಾಡುತ್ತಾ ಪಠ್ಯ ಪುಸ್ತಕ ಓದುತ್ತಾ ಈ ಕಲೆ ನನಗೆ ಸ್ಪೂರ್ತಿ ನೀಡಿತು ನನ್ನ ಬಾಲ್ಯದಲ್ಲೇ. ನಾ ಸಾಕಷ್ಟು ಬಿಡದೇ ಶ್ರಮವಹಿಸಿ ನಿರ್ಮಿಸಿದೆ ಈ ಮನೆಯ ತುಂಡಾದ ಹಲಿಗೆ ಚೂರಿನಲ್ಲೇ . ನಾ ಕಟ್ಟಿದ ಮನೆ ನಾ ಮೆಚ್ಚಿದ ಮನೆ ಸೀಮಿತ ನನ್ನ ಸ್ನೇಹಿತರ ಮನ ಮೆಚ್ಚಿಸುವುದರಲ್ಲೇ. ಅಂದು ನನ್ನ ಕಲೆಗೆ ನಾಂದಿಯಾಯಿತು ಚಿಕ್ಕ ಚೊಕ್ಕದಾದ ಮನೆಯ ಕಟ್ಟಿದ ಹೆಗ್ಗಳಿಕೆಯಲ್ಲೇ. ಸಾರ್ಥಕ ಪಡಿಸಿತು ನನ್ನ ಬಾಲ್ಯ ಜೀವನವ ಸರ್ವರ ಮೆಚ್ಚುಗೆಗೆ ಪಾತ್ರವಾದ ಈ ನನ್ನ ಅದ್ಭುತ ಕಲೆ.

ಕೃತಕ ಲೋಕ

ಓ ದೇವಾ ತೊಲಗಿಸೋ ಇಂದು ಸೃಷ್ಟಿಯಾದ ಮಾನವನ ಕೃತಕ ಲೋಕವ. ಉತ್ಕೃಷ್ಟ ವಾಗುತಿದೆ ಇಲ್ಲ ಸಲ್ಲದ ಮೂಢನಂಬಿಕೆ ಸಂಪ್ರದಾಯಗಳ ಪ್ರಭಾವ. ಎಲ್ಲಿ ಇಣಿಕಿ ನೋಡಿದರೂ ದಂಧೆ ದೊಂಬರಾಟದ ಸಂಭ್ರಮದ ವೈಭವ. ವೃದ್ಧಿಸುತ್ತಿದೆ ಮಾಟ ಮಂತ್ರ ತಂತ್ರ ಕುತಂತ್ರ ಮಾಡುವ ಮಂತ್ರವಾದಿ ಮಾನವರ ಸಮೂಹ. ಸರಳ ಸಜ್ಜನರ ಮುಗ್ದರ ಮನವ ತಮ್ಮ ಮಂತ್ರ ಶಕ್ತಿಯ ಪ್ರಭಾವದಿಂದ ತನ್ನೆಡೆಗೆ ಸೆಳೆದು ಕೊಳ್ಳುವ ಮಂತ್ರವಾದಿ ಮಾನವ. ಮೋಸ ವಂಚನೆ ಹಿಂಸೆ ಅತ್ಯಾಚಾರ ಇಂಥ಼ಃ ಹಲವು ಕ್ರೂರ ಕೃತ್ಯಗಳ ವೆಸಗುವ ಮುಖೇನ ಸೃಷ್ಟಿಸುತ್ತಿದ್ದಾರೆ ದೈತ್ಯ ಅಸುರರಂಥಹ ಲೋಕವ. ಅಲ್ಲೋಲ ಕಲ್ಲೋಲ ಮಾಡುತ್ತಿದ್ದಾರೆ ಆ ಪರಮಾತ್ಮ ಸೃಷ್ಟಿಸಿದ ಈ ಪವಿತ್ರ ಲೋಕವ ಹೇಳುವ ಕೇಳುವವರಿಲ್ಲಾ ಈ ನಾಡಿನ ಕಲರವ.

ನಲ್ಲ

ನಲ್ಲಾ ಇಂದೇಕೋ ನನ್ನ ಸುತ್ತ ಮುತ್ತಲೂ ನಿನ್ನ ಛಾಯೆಯೇ ಸುತ್ತುತ್ತಿದೆಯಲ್ಲಾ. ನಲ್ಲಾ ನನ್ನ ಮನವ ಕದ್ದವ ನೀನೇ ಆಗಿರಬಹುದೇ ಅಂದು ಕೊಳ ದಾರಿನೂದುತ ರಾಧೆಯ ಮನವ ಕದ್ದ ಆ ಗೊಲ್ಲ.

ನೀರ ಬಿಟ್ಟು ನೆಲದ ಮೇಲೆ ದೋಣಿ
ಸಾಗುವುದಿಲ್ಲ ನೆಲವ ನೀರ ಮೇಲೆ
ಬಂಡಿ ಸಾಗಿಸಲು ಆಗೊಲ್ಲಾ .

ಹಾಗೆಯೇ ನೀನಿಲ್ಲದಿದ್ದರೆ ನಮ್ಮ ಮನೆಯಲ್ಲಿ ನಾ ಮಾಡುವೆ ನನ್ನ ಕೈಂಕರ್ಯಗಳು ಸಾಗುವುದೇ ಇಲ್ಲ. ನಲ್ಲಾ ನೀ ನನಗೆಷ್ಷೇ ಅಂದರೂ ಆಡಿದರೂ ನೋಯಿಸದರೂ ಕೂಡಾ ನಾನೆತ್ತುವುದೇ ಇಲ್ಲಾ ನನ್ನ ತವರು ಮನೆಯ ಸೊಲ್ಲಾ.

ಜೀವನದಿ

ಓ ಎನ್ನ ಒಲವೇ ಎಲ್ಲೋ ಇದ್ದು ಹೀಗೇಕೆ ನನ್ನ ನೋಯಿಸುತ್ತಿರುವೆ. ಹೀಗೆ ನೀ ನನ್ನ ನೋಯಿಸುವುದು ಸರಿಯೇ. ನಿನಗೆ ನಾನು ಅಷ್ಟು ಇಷ್ಟವಾಗಿದ್ದಲ್ಲಿ ಬೆಳೆಸು ನನ್ನ ಸ್ನೇಹ ಪ್ರೇಮಾನುಬಂಧವನ್ನ. ಬೆಳದಿಂಗಳ ಬಾಲೆಯಂತೆ ಗೌಪ್ಯವಾಗಿದ್ದು ನನ್ನ ಹೃದಯವನ್ನ ಕದ್ದೆ. ಕದ್ದು ಈ ನನ್ನಯ ಹೃದಯದಂಗಳದಲ್ಲಿ ಸ್ನೇಹದ ಕೃಷಿ ಮಾಡಿ ನೀ ಬಿತ್ತಿ ಹೋದೆ ಪ್ರೀತಿ ಪ್ರೇಮವೆಂಬ ಬೀಜವನ್ನ. ಅಂದು ನೀ ಬಿತ್ತಿದ ಬೀಜವು ಮೊಳಕೆಯೊಡೆದು ಇಂದು ಚಿಗುರಿ ಬೆಳೆದಿದೆ ನನ್ನೊಳು. ಮುಂದೆ ನಿನಗೆ ಯಾವ ಕುಂದು ಕೊರತೆಗಳಿಲ್ಲದೇ ಕಾಯುವೆ ನಾನಿದ್ದು ನಿನ್ನ ಸನಿಹದೋಳು. ಸಮಯವ ವ್ಯಯಿಸದೆ ಶೀಘ್ರದಲ್ಲೇ ನಿನ್ನ ಕೊರಳಿಗೆ ನಾ ಹಾಕುವೆ ಮೂರು ಗಂಟು. ಬೆಳೆಸೋಣ ನಮ್ಮೀರ್ವರ ಬಂಧುಬಳಗದವರ ಸ್ನೇಹಿತರ ಪ್ರೀತಿ ಬಾಂಧವ್ಯದ ನಂಟು. ನಾವಿಬ್ಬರೂ ಹರ್ಷದಿಂದ ಜಂಟಿಯಾಗಿ ಸೌಖ್ಯವಾಗಿದ್ದು ಸಾಗಿಸೋಣ ಸಾಂಸಾರಿಕ ಜೀವನದ ಪಯಣ. ನಮ್ಮ ಜೀವನದಿ ಹರಿಯಲು ಬಿಟ್ಟು ನಾವು ಸಂತಸವೆಂಬ ಕಡಲಲ್ಲಿ ತೇಲಿ ಸಂಭ್ರಮಿಸೋಣ .

ರೈತನ ಚಿತ್ತ ಬಾನಿನತ್ತ

ರೈತ ನಾಡಿಗೆ ಬೆನ್ನೆಲುಬಾಗಿ ತನ್ನ ಜೀವನವನ್ನು ಸವೆಸಿ ಜಗತ್ತಿಗೆ ಅನ್ನಾ ನೀಡುವ ಅನ್ನದಾತ. ದಿನಂಪ್ರತಿ ನೇಗಿಲ ಹೊತ್ತ ರೈತ ತೆರಳುವ ಬೇಸಾಯ ಮಾಡಲು ತನ್ನ ತೋಟ ಹೊಲದತ್ತ. ಬಿಸಿಲಲ್ಲಿ ಬೆನ್ನು ಬಾಗಿ ಬೆವರು ಸುರಿಸಿ ಹೊಲ ಊಳುತಾ ಬೀಜ ಬಿತ್ತುತ್ತಾ ಶ್ರಮಿಸಿ ಇದನ್ನೇ ನಂಬಿ ಇದರಲ್ಲೇ ನಿರತನಾದ ಶ್ರಮಿಕನೀತ. ಬಿಸಿಲು ಚಳಿ ಮಳೆ ಗುಡುಗು ಯಾವುದಕ್ಕೂ ಜಗ್ಗದೇ ಕುಗ್ಗದೇ ಶ್ರಮಿಸುತಾ ತಾನು ತನ್ನನ್ನೇ ನಾಡಿಗೆ ಅರ್ಪಿಸಿದನೀತ. ಪ್ರಸ್ತುತ ದಿನಮಾನಗಳಲ್ಲಿ ವರುಣನ ಆಗಮನ ನಿಗದಿತ ವೇಳೆಯಲ್ಲಿ ಆಗದೇ ರೈತ ಪಟ್ಟ ಶ್ರಮವೆಲ್ಲಾ ವ್ಯರ್ಥವಾಗಿ ಚಿಂತಾ ಕ್ರಾಂತ. ಕೆಲವು ದಿನಗಳ ಹಿಂದೆ ವರುಣನು ಅಬ್ಬರಿಸಿ ಬಿಬ್ಬಿರಿದ ಬಂದು ತೋಟ ಹೊಲ ಗದ್ದೆ ಮನೆ ಮಠಗಳನ್ನು ಕೊಚ್ಚಿ ಕೊಂಡು ಹೋದನಾತ. ಬರುವ ದಿನದಲ್ಲಿ ಬಾರದೇ ಬಂದು ಬೆಳೆದ ಬೆಳೆಯೆಲ್ಲ ದ್ವಂಸ ಮಾಡಿ ಆತ್ಮಹತ್ಯೆಗೆ ದಾರಿ ತೋರಿ ಮೆರೆಯುತಿಹನೀತ. ಸಮಯಕ್ಕೆ ಸರಿಯಾಗಿ ತಾನು ಬೆವರ ಸುರಿಸಿ ಶ್ರಮಪಟ್ಟು ಬೆಳೆದ ದವಸ ಧಾನ್ಯಗಳ ಬೆಲೆ ಕುಸಿದು ಸಮಸ್ಯೆಗಳ ಹೊಡೆತ. ಇಷ್ಟೆಲ್ಲಾ ಶೋಷಣೆಗೆ ಸಿಲುಕಿ ನೊಂದು ಬೆಂದು ಪರಿತಪಿಸಿದರೂ ಕೂಡ ಇತ್ತ ಕಡೆ ಗಮನ ಹರಿಸದೆ ಎತ್ತಲೋ ಸಾಗಿದೆ ಸರ್ಕಾರದ ಚಿತ್ತ.

ಹನಿ ಹನಿ ಇಬ್ಬನಿ

ದಿನಂಪ್ರತಿ ಮುಂಜಾನೆ ನಾನೆದ್ದು ವಾಯು ವಿಹಾರಕ್ಕೆಂದು ಹೊರಡುತ್ತಿದ್ದೆ. ಈ ದಿನ ಹನಿ ಹನಿ ಇಬ್ಬನಿಯಲ್ಲಿ ವಿಜೃಂಬಿಸಿ ನಾನು ಆನಂದಿಸುತ್ತಿದ್ದೆ. ಸಂತಸದಿಂದ ತಂಪಾದ ಇಬ್ಬನಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದೆ. ಸಮಯಕ್ಕೆ ಸರಿಯಾಗಿ ಓಡೋಡಿ ಬಂದಳು ನನ್ನ ಗೆಳತಿ ನನ್ನ ಜೊತೆ ಆನಂದಿಸಲು. ಬಂದು ಹೀಗೆ ನುಡಿದಳು ಇದು ತಕ್ಕ ಸಮಯ ನಮ್ಮ ಮೈಮನ ತಣಿಸಿಕೊಳ್ಳಲು. ಮತ್ತೆ ನುಡಿದಳು ನಾನು ತುಂಬಾ ಇಷ್ಟ ಪಡುವೆ ಇಬ್ಬನಿಯಲ್ಲಿ ತೋಯ್ದು ವಿಹರಿಸಲು. ನನಗೂ ಕೂಡಾ ಆನಂದ ಕಡಲಲ್ಲಿ ತೇಲಿ ಬಂದಂತಾಯ್ತು ಅವಳ ಜೊತೆ ಸಮಯ ಕಳೆಯಲು. ಈ ವೇಳೆ ನಮ್ಮೀರ್ವರ ಸಂತಸಕ್ಕೆ ಪಾರವೇ ಇಲ್ಲದಂತಾಯ್ತು ಈ ಹನಿ ಹನಿ ಇಬ್ಬನಿಯಲ್ಲಿ ಮೈಮರೆಯಲು.

ರಚನೆ: ಕೆ.ಹೆಚ್. ಜಯಪ್ರಕಾಶ್, ಚಿತ್ರದುರ್ಗ