ಪ್ರಕೃತಿಯ ಅವನತಿ
“”‘”””””””””””””””
ಪ್ರಕೃತಿಯೇ ನಮ್ಮೆಲ್ಲರ ಆಸ್ತಿ
ಪರಿಸರ ನೈರ್ಮಲ್ಯವೇ ಆರೋಗ್ಯ ಶಕ್ತಿ
ಸೂರ್ಯನ ಉರಿಮಂಡಲ ಬೇಗೆ
ಭುಗಿಲೆದ್ದ ಕಾರ್ಖಾನೆಯ ಆವೃತ ಹೊಗೆ

ಹಸಿರ ಚಾಚಿನಿಂದ ವೃಕ್ಷಗಳೇ ಜೀವದುಸಿರಾಗಿ
ಪರಿಸರ ವೈಭವಕ್ಕೆ ಸಾಕ್ಷಿಯಾಗಿ
ಮುಗಿಲಧಾರೆಗೆ ವರದಾನವಾಗಿ
ತಲಾತಲಾಂತರದಿ ಬೆಳೆದು ಹೆಮ್ಮರವಾಗಿ
ನನ್ನಿ ಬಹುಪಯೋಗ ಅರಿಯದ ನಾಗರೀಕರು
ಕಡಿದುರುಳಿಸಿ ತಳಗರ್ಭವನಗೆದು

ನನ್ನ ನೆಲೆಯನ್ನಾಕ್ರಮಿಸಿದ ನಿರ್ಧಯಿಗಳು
ಮುಗಿಲೆತ್ತರ ಚಾಚಿನಿಂದ ಮಹಲುಗಳು
ಭೂಮಾತೆಯ ಅತಿಕ್ರಮಣದ ರೂಪುರೇಖೆಗಳು
ಮಾನವ ವಿಸ್ಮಯ ತಂತ್ರಜ್ಞಾನಗಳಲ್ಲಿ ವಿಹರಿಸುತ
ಆಧುನಿಕ ನವ ವಿದ್ಯಮಾನಗಳ ಸೃಷ್ಟಿಸುತ
ತಿಳಿಯದಾಗಿದೆ ಪ್ರಕೃತಿಯಲ್ಲಡಗಿದ ಪ್ರಹರಶಕ್ತಿ

ಭೂವೂಡಲೊಳಗೆ ರಾಸಾಯನಿಕ ಧ್ರವವರಗಿಸಿ
ಧರಣಿ ಕಣ ಕಣವು ವಿಷಯುಕ್ತ
ಜೀವಜಲವು ಕಸತ್ಯಾಜಗಳ ಮಲಿನತೆ
ತಂಗಾಳಿಗೂ ತತ್ವಾರ ಬರಪೂರ ಬಯಲು
ನಗರ ನಾವಿನ್ಯತೆಯ ಬೀಡು
ಹುಡುಕಲೆಲ್ಲಿದೆ ನಿರ್ಮಲ ಪರಿಸರ ಜಾಡು

ಮೊರೆ ಹೋಗಬೇಕಿದೆ ಮಾನವ
ಶತಕಗಳಿಂದಿನ ಸರಳ ಸಂಪನ್ನ ಬದುಕಿಗೆ
ಪ್ರಕೃತಿ ಸಹಯೋಗದ ಸಿರಿಸಂಪದಕೆ
ಪರಿಸರ ಜಾಗೃತಿಯ ರಸಚೇತನಕೆ

ಯಶೋಧ ರಾಮಕೃಷ್ಣ ಮೈಸೂರು