ಶಿವರಾತ್ರಿ ಮಹಾತ್ಮೆ ಬಾಜುಮನಿ ಆಂಟಿ
(ಹಾಸ್ಯ ಲೇಖನ)

ಬಾಜು ಮನಿ ಆಂಟಿ ತುಂಬಾ ಮಡಿ
ಶಿವರಾತ್ರಿ ಅಂದ್ರೆ ಉಪವಾಸ ಜೋರು
ಅಂಟಿಯ ಉಪವಾಸ ವ್ರತ ನೋಡಿ
ಎದುರು ಮನೆ ಆಂಟಿ ತಲೆ ತಿರುಗಿ ಬಿದ್ದಳು.

ಎದುರು ಮನೆ ಆಂಟಿ ಬಾಜು ಮನೆ ಅಂಟಿಗೆ
ಅಕ್ಕಾರ ಅಕ್ಕಾರ ನಾನು ಈ ಸಲ ಉಪವಾಸ
ಮಾಡಬೇಕು ಮಾಡಿನಿ,ನೀವು ಬಹಳ ವರ್ಷಗಳಿಂದ,,
ಉಪವಾಸ ಮಾಡ್ಕತ್ತೀರಿ ನನಗೆ ಸಲ್ಪ ಉಪವಾಸದ,,
ನೇಮ ಹೇಳಕೊಡ್ರಿ ಮತ್ತ್  ಅಂದಳು.
ಅದಕ್ಕೆ ಬಾಜು ಮನಿ ಆಂಟಿ ನೋಡ್ರಿ ಬಾಯಾರ್
ಈ ಉಪವಾಸ ಐತಿ ನೋಡ್ರಿ ತುಂಬಾ ಮಡಿ ಬೇಕ್ರಿ.

ನೀವು ತುಂಬಾ ನೇಮ ನಿಷ್ಠೆ  ಮಾಡಬೇಕು ಇಲ್ಲಾಂದ್ರೆ
ಆ ಶಿವ ಒಲಿಯಂಗಿಲ್ಲ. ಈಗ ನಾನು ಮಾಡೋದ ನೋಡಿ ,
ನೀವು ಹಂಗ ಮಾಡಬೇಕ ನೋಡ್ರಿ.

ಮುಂಜಾನೆ ಎದ್ದು ಜಳಕ ಮಾಡಿ ದೇವರಿಗೆ ದೀಪ ಹಚ್ಚರಿ
ಮತ್ತ್   ಒಂದು ತಟಕ್ ನೀರು ಕುಡಿಯಂಗಿಲ್ಲ ನೋಡ್ರಿ.
ಒಂದು ಚೊಂಬು ಹಾಲು ಕುಡಿದು ಮತ್ತ ಒಂದ್ ತಾಟ ಮೊಸರ್ ಅವಲಕ್ಕಿ ಮಾತ್ರ ತಿನ್ನಬೇಕು.

ರೊಟ್ಟಿ ಗಿಟ್ಟಿ ಮುಟ್ಟ ಬಾರದು ನೋಡ್ರಿ ಮತ್ತ್
ಮಧ್ಯಾಹ್ನ, ಎರಡು ಗಂಟೆ ಮೇಲೆ ಸಲ್ಪ ಮಾತ್ರ ಫಲಹಾರ,,
ಮಾಡಬೇಕ ನೋಡ್ರಿ .

ನಾಲಕ್ಕು ಸೇಬು ನಾಲಕ್ಕು ಚಿಕ್ಕು,, ನಾಕೆ ನಾಕು ಬಾಳೆಹಣ್ಣು ಮತ್ತು ಕುಡಿಯಾಕ  ನಾಕು ಮೂಸಂಬಿ ಜ್ಯೂಸು ಅಷ್ಟ್  ಮತ್ತೇನು ತಿನ್ನಬಾರದು ನೋಡ್ರಿ.

ಸಂಜ್ಜಿ ಮುಂದ ದೇವರಿಗೆ ದೀಪ ಹಚ್ಚಿ,
ಕಾಲ್ ಕೆಜಿ ಗೋಡಂಬಿ ಒಂದ ಸ್ವಲ್ಪ ಬಾದಾಮಿ ಮತ್ತು ಒಣದ್ರಾಕ್ಷಿ,, ಬಾದಾಮಿಯ ಹಾಲು ಒಂದೇ ಒಂದು ಚೊಂಬು ಮಾತ್ರ ಕುಡಿಬೇಕು ನೋಡ್ರಿ..
ಮತ್ತ್  ರಾತ್ರಿ ಮಟ ಉಪವಾಸ ಇರಬೇಕು ನೋಡ್ರಿ.

ಮತ್ತ್  ನಡಬರಕ ಏನು ತಿನ್ನಬೇಡ್ರಿ
ಆ ಶಿವ ಶಾಪ ಹಾಕತ್ತಾನು ನೋಡ್ರಿ  ಬಾಯಾರ್
ಅಂದಾಗ…

ಇದನ್ನು ಕೇಳಿದ ಎದುರು ಮನೆ ಆಂಟಿ ತಲೆ ತಿರುಗಿ ಬಿದ್ದಳು ಬಾಜುಮನಿ ಆಂಟಿ ಉಪವಾಸ ಮಹಾತ್ಮೆ,, ಕೇಳಿದ ನೀವೆಲ್ಲ ಹಂಗ ಉಪವಾಸ ಮಾಡಬೇಕ್ರಿ ನೋಡ್ರಿ ಮತ್ತ್ ಇಲ್ದಿದ್ರೆ ಆ ಶಿವ
ಒಲಿಯಂಗಿಲ್ರಿ,,😄😄😄😄.

ಎಲ್ಲರಿಗೂ ಶಿವರಾತ್ರಿಯ ಹಬ್ಬದ ಪ್ರೀತಿಯ ಶುಭಾಶಗಳೊಂದಿಗೆ.. ಬಾಜೂಮನಿ ಆಂಟಿ..
ನಿಮ್ಮ ಅಭಿಪ್ರಾಯ ತಿಳಿಸಿ.. ಪ್ರೀತಿಯ ಟಿಪ್ಪಣಿ ಬರೆಯಿರಿ..

– ರಾಘವೇಂದ್ರ ಸಿಂತ್ರೆ
ರಾಜಕಮಲ್ ಸಿರಸಿ……