ಸೈನಿಕನ ಮಗಳು

ವೀರ ಮರಣ ಹೊಂದಿದ ಸೈನಿಕನ ಮಗಳಿಗೆ ಶಾಲೆಯಲ್ಲಿ ಸ್ವಾಗತವನ್ನು ಕೋರಿ ವೀರಮರಣ ಹೊಂದಿದ ಸೈನಿಕನನ್ನು  ತುಂಬಾ ಕೊಂಡಾಡಿ ಹೆಮ್ಮೆಯಿಂದ ಭಾಷಣವನ್ನು ಮಾಡಿದರು.
ಸೈನಿಕನ ಮಗಳಿಗೆ ತನ್ನ ತಂದೆಯ ಬಗ್ಗೆ ಹೊಗಳಿದ ಭಾಷಣವನ್ನು ಕೇಳಿದಾಗ ತುಂಬಾ ಖುಷಿಯಾಯಿತು.

ಆದರೆ ಭಾಷಣ ಮುಗಿದ ಮೇಲೆ ಎಲ್ಲಾ ಶಾಲೆಯ ಮಕ್ಕಳ ಅಪ್ಪಂದಿರು ತಮ್ಮ ತಮ್ಮ ಮಕ್ಕಳನ್ನು ಕೈಹಿಡಿದುಕೊಂಡು ಹೋಗುವ ದೃಶ್ಯವನ್ನು ನೋಡಿದ ಸೈನಿಕನ ಮಗಳಿಗೆ.
ತನ್ನ ಅಪ್ಪನ ನೆನಪಾಗಿ ಕಣ್ಣೀರು ಹಾಕಿದ್ದು ಮಾತ್ರ ಕಟುಸತ್ಯ…

  • ರಾಘವೇಂದ್ರ ಸಿಂತ್ರೆ
    ರಾಜಕಮಲ್, ಶಿರಸಿ.