ಕ್ಷಮಿಸಲಾರನು ಆ ದೇವಾ
ಶಿಕ್ಷಿಸದೆ ಬಿಡನು ಓ ಜೀವಾ
ಮನಸ್ಸಾರೆ ಮನ ಕೊಟ್ಟವಳು
ನಿನ್ನ ನಂಬಿ ಮನೆ ಬಿಟ್ಟವಳು
ಜೀವನ ಸಾಗರ ದಾಟಲು ಜೊತೆಯಾಗಿ ಬಂದವಳು
ನಿನ್ನೊಂದಿಗೆ ಏಳೇಳು ಜನ್ಮದ ಕನಸು ಕಂಡವಳು
ನಿನಗಾಗಿ, ನಿನ್ನ ಖುಷಿಗಾಗಿ ಜೀವನವನ್ನೇ ಮೂಡುಪಾಗಿಟ್ಟವಳು
ನೀನೇ ನನಗೇಲ್ಲಾ, ನೀ ಇಲ್ಲದ ಬಾಳು ಬೇಕಿಲ್ಲ ಎಂದವಳು
ಸಾವಿರಾರು ಕನಸು ಕಂಡವಳು
ನಿನ್ನ ಬಿಟ್ಟು ಬಾಳಲಾರೆ ಎಂದವಳು
ನಾನಾಲ್ಲವೇ ನಿನ್ನ ಪ್ರೀತಿಸಿ ಮೋಸ ಹೋದವಳಲ್ಲವೇ?????

ಕ್ಷಮಿಸಲಾರನು ಆ ದೇವಾ ನನ್ನನ್ನ
ನಿನ್ನ ನಂಬಿ ಹೆತ್ತು ಹೊತ್ತವರ ಬಿಟ್ಟೇ
ಸಾಕಿ ಸಲಹಿದವರ ಬಿಟ್ಟೇ
ನನ್ನನ್ನೇ ಜೀವ ಎಂದು ಪ್ರೀತಿಸಿದ ಹೆತ್ತವರ ಪ್ರೀತಿಗೆ ಕೊಡಲಿ ಇಟ್ಟೆ
ನಂಬಿದ್ದ ಸಂಬಂದಿಗಳಿಗೆ ಎಳ್ಳು ನೀರು ಬಿಟ್ಟೇ
ನೀ ನನ್ನ ಉಸಿರೆಂದು ನನ್ನ ದೇಹವನ್ನೇ ನಿನಗೆ ಕೊಟ್ಟೆ
ಓ ಜೀವವೇ ನೀನ್ಯಾಗೆ ನನಗೆ ಮೋಸದ ಆಣೆ ಇಟ್ಟೆ
ನೀನೊಂದು ಹೂವಿನಿಂದ ಹೂವಿಗೆ ಹಾರುವ ಚಿಟ್ಟೆ
ಓ ಮೋಸದ ಚಿಟ್ಟೆ ನಿನ್ನ ನಂಬಿ ನಾ ಕೆಟ್ಟೆ.

– ಸುಮಲತಾ