ತಬಲಾ ಬಾರಿಸು
***********
ತಬಲವ ಬಾರಿಸೆ ನಾದವು ಹೊಮ್ಮಲು
ಕಿವಿಗದು ಇಂಪನು ನೀಡುತಿದೆ
ಬಾರೋ ಕಲಿಯುವ ತಬಲವ ಬಾರಿಸೆ
ದ್ವನಿಯು ಕೇಳಲು ಅನಿಸುತಿದೆ ll

ತಿಳಿದರೆ ಒಳ್ಳೇದು ರಾಗವ ತಾಳವ
ಇಲ್ಲದೆ ಇದ್ದರೆ ಸರಿ ಇರದು
ಗಾಯನ ಜೊತೆಯಲಿ ತಾಳವು ಬೆರೆತರೆ
ಕೇಳಲು ತುಂಬಾ ಸೊಗಸಿಹುದು ll

ಹಸಿವದು ಇದ್ದರು ಗೊಡವೆಯೆ ಇಲ್ಲದೆ
ಅವನನು ನೋಡುತ ಬಾರಿಸುವೆ
ವಿದ್ಯೆಯು ಯಾವುದಾದರು ಶ್ರದ್ಧೆಯು
ಮುಖ್ಯವು ಕಲಿಯಲು ಮನಸಿದುವೆ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ