ಅಮ್ಮ ಜಗದೀಶ್ವರಿ
************
ಭುವನೇಶ್ವರಿ ಅಮ್ಮ ಜಗದೀಶ್ವರಿ
ಕನ್ನಡ ನಾಡಿನ ರಾಜ ರಾಜೇಶ್ವರಿ
ಕಂಡೆನು ನಿನ್ನಯ ದಿವ್ಯ ರೂಪವ
ಶಿರಬಾಗಿ ನಮಿಸುವೆ ಸರ್ವೇಶ್ವರಿಯೆ ll

ತುoಗಾ ಭದ್ರೆಯೆ ಅಂಬಾ ಭವಾನಿ
ಆದಿಪರಾಶಕ್ತಿಯೆ ಶ್ರೀ ದೇವಿ ಜನನಿ
ಇಂಬನು ಕೊಡುವ ಕನ್ನಡಾoಬೆಯು
ಶಕ್ತಿಯ ನೀಡುವ ಭಾರತಾoಬೆಯು ll

ಅನಂತ ರೂಪಿಣಿ ದೇವೀ ಜಗನ್ಮಾತೆ
ವಿಶ್ವ ವಂದಿತೆ ಮಾತೆ ವಿಶ್ವ ನಾಯಕಿ
ದುಷ್ಟರ ಮರ್ದಿನೀ ಸಿಂಹವಾಹಿನಿ
ಶಿಷ್ಟರ ರಕ್ಷಣೆ ಗೈದ ಮಹಾ ಮಾತೆ ll

ಜಗವನು ಪೊರೆಯುವ ಶಂಕರಿಯೆ
ಕರುಣೆಯಲಿ ಸಲಹೆನ್ನಾ ಈಶ್ವರಿ
ಅಗಣಿತ ಮಹಿಮಳೆ ಜಗನ್ಮೋಹಿನಿ
ದೇವಮುನೀoದ್ರಾರ್ಚಿತೆ ಪರಮೇಶ್ವರಿಯೆ ll

✍️  ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ