ಹೆಣ್ಣು

ಹೆಣ್ಣು ಅಬಲೆಯಲ್ಲ
ಹೆಣ್ಣು ಈ ಜಾಗತಿಕದ ಜೈಕಾರ ಮೂರುತಿ
ಹೆಣ್ಣು ಕರುಣಾಸಾಗರದ ಜೀವಿ
ಹೆಣ್ಣು ಪ್ರಕೃತಿಯ ಸ್ವರೂಪ
ಹೆಣ್ಣು ಕ್ಷಮಾಧರಿತ್ರಿಯ ಕ್ಷಮಾಗುಣ
ಹೆಣ್ಣು ಬಾಳಿನ ಆಧಾರ
ಹೆಣ್ಣು ಯಶಸ್ಸಿನ ಶಕ್ತಿ
ಹೆಣ್ಣು ನಮ್ಮನ್ನು ಬಾಳಿಬೆಳಗುವ ಜ್ಯೋತಿ
ಹೆಣ್ಣು ಜನನ ನೀಡುವ ಅಧ್ಬುತ ಶಕ್ತಿ
ಹೆಣ್ಣು ಸಾಧಕ ಶಕ್ತಿಯು ಸಂಕೇತ
ಹೆಣ್ಣು ಪ್ರೀತಿ ಆಗರದ ಹೊನಲು
ಹೆಣ್ಣು ವಾತ್ಸಲ್ಯ ಸ್ವರೂಪಿಣಿಯಾಗಿ
ಜನ್ಮ ನೀಡುವ ಮಾತೆಯ ಮೇಲೆ
ಅನಾಚಾರ ಮಾಡಿದರೆ ಹೊಲಸು
ತಿನ್ನುವ. ಕುನ್ನಿಗಳಲ್ಲವೆ?
ಅಲ್ಪಬುಧ್ಧಿಗೆ ವಿರಾಮ ಹಾಕಿ
ತುಂಡು ಬಟ್ಟೆಯನು ನೋಡಿ ಆನಂದಪಡದೆ
ಹೆಗಲ ಮೇಲೆ ತೊಗಲಿನ ಚೀಲ ಜೋತಾಡುವಂತೆ
ಜೋಲಿಹೊಡೆಯುತ ಜೊಲ್ಲು ಸುರಿಸಿ
ನಮ್ಮೊಳಗೆ ಹರಿಯುವ ಕೆಂಪು ರಕ್ತವು
ಕರಕಲಾಗದಿರಲು ಜಾಗ್ರತೆ, ಓ ನನ್ನ ಬಂಧುಗಳೆ
ಹೆಣ್ಣು ನಮ್ಮಾಸ್ತಿ ಎಂಬುದ ಮರೆತು
ಕಾಳಸಂತೆಯ ವ್ಯಾಪಾರ ಸಲ್ಲದೆ
ಈ ಭೂ ಮಂಡಲದ ಎರಡೂ ಭವಿಗಳು
ಈ ಜಗದ ನಯನಗಳು ಎನ್ನುವ. ವೈಚಾರಿಕ
ಮನೋಗುಣವನ್ನ ನಮ್ಮ ತನುವಿನೊಳಗ
ಅರಿವು ಮೂಡಿಸಿ ಕೊಂಡರೆ
ಇದೇ ಅಲ್ಲವೇ ಸಾರ್ಥಕ ಬದುಕಿನ ದಾರಿ

ಹಾಚಿ ಇಟ್ಟಿಗಿ
ಸಾಹಿತ್ಯಿಕ ಮಾಂತ್ರಿಕ/ಆಧುನಿಕ ವಚನಕಾರ
ಹೂವಿನಹಡಗಲಿ ತಾಲೂಕು ವಿಜಯನಗರ