ಗಝಲ್
*****
ಸೂರ್ಯನು ಬೆಳಗಿದ ಭೂಮಿಯ ಚಂದದಿ ನೋಡು
ರವಿಯನು ಕಾಣುವೆ ಬೆಳಗಿನ ಜಾವದಿ ನೋಡು

ಬಾನಿನ ಎತ್ತರದಲ್ಲಿರುವನು ಚೆಲುವಾಗಿ ಕಾಣುವನೆ
ಸುಡುವನು ಹತ್ತಿರಕೆ ಹೋದರೆ ಭಾವದಿ ನೋಡು

ಕಂಡೆನು ಅವನನು ನಾನು ಸಂಜೆಯ ಸಮಯದಿ
ಸುಂದರವಾಗಿಹ ಬಣ್ಣವನು ಇಂದು ಬಾಣದಿ ನೋಡು

ಅನುದಿನ ಬರುವನು ಜಗವನು ಬೆಳಗಲು ಹಾತೊರೆದು
ಸರಿಸಮ ಆರಿಹರು ಬೆಂಕಿಯ ನೀನು ರೂಪದಿ ನೋಡು

ಬಂದರೆ ಭಾಸ್ಕರ ಉದಯವ ತೋರುತ ಇಳೆಗೆ
ನಿಂದರೆ ಸುಡುವುದು ದೇಹವು ಕಷ್ಟದಿ ನೋಡು

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ