ಗಣಪತಿ; ಶಾರದೆ; ಶಿವ; ಪಾರ್ವತಿ; ಶ್ರೀಕೃಷ್ಣ
******************************
ಮೋದದಿ ಕರೆಯುವೆ ಬಾಧೆಯ ಕಳೆಯೋ
ಆದರದಿಂದಲಿ ಗಜಮುಖನೆ
ಪಾದಕೆ ಎರಗುವೆ ಪಾದವ ನಂಬಿದೆ
ಆದಿಲಿ ಪೂಜಿಪೆ ಗಣಪತಿಯೆ ll

ಪಾಲಿಸು ಶಂಕರ ಲಾಲಿಸು ಮೃಡಹರ
ಆಲಿಸು ಎನ್ನಯ ನುಡಿಯನ್ನು
ಬಾಳಲಿ ನೊಂದೆನು ಬಾಳಿಸು ಶಿವಹರ
ತಾಳೆನು ಮನದಲಿ ನೋವನ್ನು ll

ಸಂಕಟ ಕಳೆಯುವೆ ವೆಂಕಟ ರಮಣನೆ
ಶಂಕರ ಮಿತ್ರನೇ ನೀ ಬಾರೊ
ಪಂಕಜ ನಾಭನೆ ಶಂಖವ ಪಿಡಿದಿಹೆ
ಶಂಕೆಯ ತೊರೆಯುವೆ ಮೈದೋರೊ ll

ಆರತಿ ಎತ್ತುವೆ ಭಾರತಿ ನಿನಗಿದೊ
ಪಾರ್ವತಿ ಎನ್ನನು ನೀ ಸಲಹು
ಶಾರದ ಮಾತೆಯೆ ಬಾರದೆ ಇರುವೆಯೆ
ತೋರಿಸು ಎನ್ನಲಿ ಕರುಣೆಯನು ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ