ಆದಿಮಹೇಶ್ವರಿ
**********
ಆದಿಮಹೇಶ್ವರಿ ಅನ್ನಪೂರ್ಣೇಶ್ವರಿ
ಆನಂದದಾಯಿನಿ ಅಭಯದಾಯಿನಿ
ಆನಿನ್ನಮೊಗದಲಿ ಮಂದಹಾಸವು
ತೋರೆನ್ನಯ ಬದುಕಲಿ ಸಂತೋಷವು ll

ಸಾವಿತ್ರಿಯೆ ಕರುಣದಿ ಕಾಪಾಡೆನ್ನನು
ಸಾವಿರ ಸಾವಿರ ವಂದನೆಯು ನಿನಗಮ್ಮ
ಸಾಕರಗೊಳಿಸು ಎನ್ನಯ ಬದುಕನ್ನ
ಆನಿನ್ನ ಪಾದಕೆ ಮಣಿದಿಹೆಯಮ್ಮ ll

ಅಂಬಿಕೆ ದುರ್ಗಾoಬಿಕೆ ಶಕ್ತಿ ಸ್ವರೂಪಿಣಿಯೆ
ನಂಬಿದೆ ನಿನ್ನನು ಬಂದೆನು ಸನ್ನಿಧಿಗೆ
ಭಕ್ತಿಯ ಅರ್ಚನೆ ನಿತ್ಯವು ಮಾಡುವೆ
ಶಕ್ತಿಯ ನೀಡಮ್ಮ ಮೂಕಾಂಬಿಕೆ ll

ಬ್ರಹ್ಮಾಂಡ ಜನನಿ ಹೇ ಶಂಕರಿಯೆ
ಬ್ರಹ್ಮಾಂಡವ ಸಲಹುವ ದುರ್ಗಾoಬಿಕೆ
ಶ್ರೀಚಕ್ರವಾಸಿನಿ ಆದಿಪರಾಶಕ್ತಿಯೆ
ಶ್ರೀದೇವಿ ದುರ್ಗೆಯೆ ಲಲಿತಾoಬಿಕೆ ll

    • ರಚನೆ: ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ