Table of Contents

ಒಂದು ಅಡಿಕೆಯ ಕಥೆ

ಹಣ್ಣು ಹಣ್ಣಾದ ಒಬ್ಬ ಮುದುಕ ಎದುಸಿರು ಬಿಡುತ್ತಾ. ರಸ್ತೆಯಲ್ಲಿ  ನಡೆದು ನಡು ರಸ್ತೆಯಲ್ಲಿ ಬರುತ್ತಿದ್ದ. ಅಚಾನಕ್ಕಾಗಿ ಒಂದು ಕಾರಿಗೆ ಢಿಕ್ಕಿ ಹೊಡೆದು ನಿಂತ ಆ ಕಾರಿನ ಚಾಲಕ ತಕ್ಷಣ ಕಾರನ್ನು ನಿಯಂತ್ರಣಕ್ಕೆ ಬಂದು ಬ್ರೇಕ್ ಹಾಕಿದ್ದರಿಂದ, ಒಂದು ದೊಡ್ಡ’ ಅನಾಹುತ ತಪ್ಪಿತು. ಆ ಕಾರಿನ ಚಾಲಕ ಯಾಕೆ ಈ ಮುದುಕರು ರೋಡ್ ಮೇಲೆ ತಿರುಗಾಡಲು ಬರುತ್ತಾರೋ! ಎಂದು ಬೈದು ಮುಂದೆ ಹೋದ. ಅಲ್ಲೆ  ಪಕ್ಕದಲ್ಲಿದ್ದ ಆಂಗಡಿ ಮಾಲೀಕ ಆ ವಯಸ್ಸಾದ ವ್ಯಕ್ತಿಯನ್ನು ಕರೆದುಕೊಂಡು ಬಂದು ಯಾಕೆ ಯಜಮಾನರೆ ನೀವು ಈ ಉರಿ ಬಿಸಿಲಲ್ಲಿ  ಹೊರಗೆ ಬಂದ್ರಿ ಎಂದು ಕೇಳಿದ?. ಯಜಮಾನ್ರು ಒಂದು ದೊಡ್ಡ ಊಸಿರು ಬಿಡುತ್ತಾ ತನ್ನ ಜೀವನ ಕಥೆ ಹೇಳಲಾರಂಭಿಸಿದರು…….
ನಾನು ಶಿರಸಿಯ ಹತ್ತಿರದ ಹಳ್ಳಿಯವನು ನನಗೆ ಕವಳ ಹಾಕುವ(ಎಲೆ ಅಡಿಕೆ ತಿನ್ನುವ) ಅಭ್ಯಾಸ ಉಂಟು ಮಾರಾಯರೆ… ತಿನ್ನಲು ಅಡಿಕೆ ಖಾಲಿ ಆಗೋಯ್ತು ನಾನು ಅಡಿಕೆ ತರಲಿಕ್ಕೆ ಬಂದೆ ಎಂದು ಹೇಳಿತ್ತಾ.. ಒಂದು ಅಡಕೆಗೆ ಐದು ರೂಪಾಯಿ” ಆಗಿದೆ ಮಾರಾಯರೆ!. ಏನು ಮಾಡುವುದು. ಒಂದು ಕಾಲದಲ್ಲಿ ನಾನು ಒಬ್ಬ ಅಡಿಕೆ   ಬೆಳೆಗಾರ ( ಜಮೀನ್ದಾರ )ಹತ್ತು ಏಕ್ರೆ ತೋಟ ನನ್ನದು,, ನನ್ನ ಬಳಿ ಕೆಲಸಕ್ಕೆ ಬರುವ ಆಳುಗಳಿಗೆ ಕೈತುಂಬಾ ಅಡಿಕೆ ಕೊಡುತ್ತಿದ್ದೆ… ಈಗ ನನ್ನ ಪರಿಸ್ಥಿತಿ ಒಂದು ಅಡಿಕೆಯ ಬೆಲೆ ಹೇಳುವ ಹಾಗೆ ಆಗಿದೇ. ಮಾರಾಯ. ಎಂತ ಮಾಡೋ ಕಾತು.. ನನಗೆ ಒಬ್ಬನೇ ಒಬ್ಬ ಮಗ  ಅವನನ್ನು ಚೆನ್ನಾಗಿ ಓದಿಸಿ ಸಾಫ್ಟವೇರ್  ಇಂಜಿನಿಯರ್ ಮಾಡಿದೆ ಅವನು, ಬೆಂಗಳೂರಲ್ಲಿ ಒಳ್ಳೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಕೈತುಂಬಾ ಸಂಬಳ ಬರುತಿತ್ತು..
ಅದನ್ನು ನೋಡಿ ನಮ್ಮ ಅಕ್ಕ ಪಕ್ಕದ ಮನೆಯವರು  ಮತ್ತು ಗೆಳೆಯರು  ಆ ಹುಡುಗನಿಗೆ ಒಂದು ಮದುವೆ ಮಾಡಿ ಎಂದು ನನಗೆ ಹೇಳಿದರು.. ಆದರೆ ನನ್ನ ಮಗ ಇಷ್ಟು ಬೇಗ ಮದುವೆ ಆಗ್ತಿಲ್ಲೆ ಅಂದ್ರು ಕೇಳದೆ… ನಾನು ನನ್ನ ಹೆಂಡತಿಯ ಸೋದರ ಸಂಬಂಧಿ ಬಡವರ ಮಗಳನ್ನು ತಂದು ಮಧುವೆ  ಮಾಡಿದೇ ಮದುವೆ ಆದ ಹೊಸ್ತರಲಿ ಎಲ್ಲವು ಚೆನ್ನಾಗಿತ್ತು. ಕಾಲ ಕ್ರಮೇಣ ಮಗನಿಗೆ ಒಂದು ಮಗು ಆಯಿತು ನನ್ನ ಸೊಸೆನು ಕೂಡ ಒಂದು ಕಂಪನಿಯಲ್ಲಿ ಜಾಬ್ ಮಾಡುತ್ತಾ ಇದ್ದಳು. ಈಗ ಅವರಿಗೆ ಒಂದು ಸಮಸ್ಯೇ ಶುರುವಾಯಿತು  ಮಗುವನ್ನು ನೋಡಿಕೊಳ್ಳಲು.  ಯಾರು ಇರದ ಕಾರಣ ನನ್ನ ಮಗ ನನ್ನ ಹೆಂಡತಿಯನ್ನು ಆಯಿ ನೀನು ಸಹ ನಮ್ಮ ಜೊತೆಗೆ ಇರು ಆಯಿ,ಇಲ್ಲಿ ಹಳ್ಳಿಯಲ್ಲಿ  ಏನು ಮಾಡ್ತಿಯ. ನೀನು ಮತ್ತು ಅಪ್ಪನು ನಂಜೊತೆ ಬೆಂಗಳೂರಲ್ಲಿ ಇದ್ದುಬಿಡಿ ಬೆಂಗಳೂರುಗೆ ಬನ್ನಿ ಇಲ್ಲಿ ಆರಾಮಾಗಿ ಇರಬಹುದು ಎಂದು ಹೇಳಿದ…
ಮೊಮ್ಮಗನ ಆಟ ಪಾಠ ನೋಡುತ್ತಾ ನನ್ನ ಹೆಂಡತಿ ತುಂಬಾ ಖುಷಿಯಾಗಿ ಇರುವಾಗ ನನ್ನ ಸೊಸೆಯೂ ಅತ್ತೆ ನೀವು  ನಮ್ಮ ಜೊತೆಗೆ ಬೆಂಗಳೂರಿಗೆ ಬಂದು ನಮ್ಮ ಜೊತೆಗೆ ಇರಿ ಎಂದೂ ಪಾಲಿಸಿಮಾಡಿದಳು… ನನ್ನ ಹೆಂಡತಿಯೂ ಮೊಮ್ಮಗನ ಮೋಹಕ್ಕೆ ಮತ್ತು ನನ್ನ ಸೊಸೆಯ  ನಯವಾದ ಮಾತಿಗೆ ಮರುಳಾಗಿ ನನ್ನ ಬಳಿ ಬಂದು ನನಗೇ ಒತ್ತಾಯ ಪೂರ್ವಕವಾಗಿ ನಮ್ಮ ತೋಟ ಮನೆ ಆಸ್ತಿ ಎಲ್ಲವನ್ನು ಮಾರಿಸಿ ನನ್ನನ್ನು ಬೆಂಗ್ಳೂರಿಗೆ ಕರೆದುಕೊಂಡು ಹೋದಳು. ಹೋದ ನಾಲಕ್ಕು ವರ್ಷಗಳು ಚೆನ್ನಾಗಿ ಕಳೆದೆವು.. ಯಾವಾಗ ಮೊಮ್ಮಗ ಶಾಲೆಗೆ ಹೋಗಲು ಶುರು ಮಾಡಿದನೋ?. ಅವಾಗಿನಿಂದ  ನನ್ನ ಸೊಸೆ ಕಾಟ ಶುರು ಅಯ್ತು.
ನನ್ನ ಮಗ ಕಂಪನಿಯ ಕೆಲಸದ ಸಲುವಾಗಿ ಅಮೆರಿಕಕ್ಕೆ  ಹೋದ ನಂತರ’. ನನ್ನ ಸೊಸೆಯೂ ನಮ್ಮನ್ನು ತುಂಬಾ ತೊಂದರೆ ಕೊಡಲಿಕ್ಕೆ ಶುರು ಮಾಡಿದಳು.ನನ್ನ ಮಗನಿಗೆ ಹೇಳಿದರೆ ಅವನು ನೀವು ಸೊಸೆಯ ಜೊತೆ ಹೊಂದಿಕೊಂಡು ಹೋಗಬೇಕು  ಅಂತ ಹೇಳತೊಡಗಿದ… ಬರಬರುತ್ತಾ ನನ್ನ ಸೊಸೆಯ ಕಾಟ ಜಾಸ್ತಿಯಾಗತೊಡಗಿತು ನನ್ನ ತೋಟ ಆಸ್ತಿ ಮಾರಿದ ಎಲ್ಲ ದುಡ್ಡನ್ನು ತೆಗೆದುಕೊಂಡು ಆ ದುಡ್ಡಿನಲ್ಲಿ ನನ್ನ  ಮಗ ಹೊಸ ಮನೆ ಕಾರು ಎಲ್ಲಾ ತೆಗೆದುಕೊಂಡು ನನ್ನ ಕೈಯನ್ನು ಬರಿದು ಮಾಡಿದ… ಸೊಸೆಯ ಕಾಟ ತಡೆಯಲಾರದೆ ನಾನು ಮತ್ತು ನನ್ನ ಹೆಂಡತಿಯೂ ಊರಿಗೆ ವಾಪಸು ಹೋಗಲಾಗದೆ ನನ್ನ ಮಗನ ಮನೆಯಲ್ಲೂ ಇರಲಾಗದೆ ತುಂಬಾ ಕಷ್ಟಪಡುತ್ತಾ ಇರುವಾಗ…
ನಮ್ನ ಊರಿನವರೆ ಆದ ಗಣಪತಿ  ಹೆಗಡೆಯವರ ಮಗಳು ಅಳಿಯ ಕೂಡ ನಮ್ಮ ಏರಿಯಾದಲ್ಲಿ ಇದ್ದಿದ್ದರಿಂದ. ಗಣಪತಿ ಹೆಗಡೆಯವರು ಮಗಳ ಮನೆಗೆ ಬಂದವರು ನಮ್ಮ ಮನೆಗೆ ಕೂಡ ಬಂದಿದ್ದರು. ನಮ್ಮ ಊರಿನ ಸಹಕಾರ ಸಂಘದಲ್ಲಿ ಅವರ ಮಗ ಕೆಲಸಕ್ಕೆ ಇದ್ದ ಕಾರಣ. ನನ್ನ ಅಕೌಂಟ್ ನಲ್ಲಿ ಹಣ ಇರೋ ವಿಷಯ ಅವನಿಗೆ ಗೊತ್ತಿದ್ದರಿಂದ. ತನ್ನ ಅಪ್ಪನಿಗೆ ಬೆಂಗಳೂರಿಗೆ ಹೋದಾಗ ಅವರಿಗೆ ವಿಷಯವನ್ನು ತಿಳಿಸಿ. ಅಕೌಂಟನ್ನು ಕ್ಲೋಸ್ ಮಾಡಿಕೊಂಡು ಹೋಗಲು ಹೇಳಿ ಅಂತ ಹೇಳಿ ಕಳಿಸಿದ್ದನ್ನು. ನನಗೆ ಊರಿನಲ್ಲಿದ್ದಾಗ ಹಣದ ಅವಶ್ಯಕತೆ ಇಲ್ಲದಿದ್ದರಿಂದ ಆ ಹಣದ ಕುರಿತು ನಾನು ಮರೆತೇ ಹೋಗಿದ್ದೆ… ನನಗೆ ಗಣಪತಿ ಹೆಗಡೆಯವರು ವಿಷಯ ಮುಟ್ಟಿಸಿದ್ದರಿಂದ ವಿಷಯ ನೆನಪಾಯ್ತು  ನಾನು ನಮ್ಮ ಊರಿನ ಸಹಕಾರ ಸಂಘದಲ್ಲಿ ಅಲ್ಪ ಸ್ವಲ್ಪ ಹಣವನ್ನು ನಮ್ಮ  ಸಹಕಾರ ಸಂಘದ ಅಕೌಂಟಿನಲ್ಲಿ ನನ್ನ ಹೆಂಡತಿ ಮತ್ತೆ ಮಗನಿಗೆ   ಗೊತ್ತಿಲ್ಲದ ಹಾಗೆ ಇಟ್ಟಿದ್ದೆ. ಡಿಪಾಸಿಟ್ ಮತ್ತೆ ಶೇರ್  ಅಕೌಂಟ್ ಅಂತ ಬಡ್ಡಿ ಸೇರಿ, 15 ಲಕ್ಷದ ಮೇಲೆ ಹಣವಿತ್ತು… ಈ ವಿಷಯವನ್ನು ನನ್ನ ಹೆಂಡತಿಗೆ ತಿಳಿಸಿ. ನಾನು ಮತ್ತು ನನ್ನ ಹೆಂಡತಿ ಆ ರಾತ್ರಿ ಯೇ ಬೆಂಗಳೂರು  ಬಿಟ್ಟು ಬಂದು ನಮ್ಮ ಊರಿನ ಸಹಕಾರ ಸಂಘದಲ್ಲಿ ಜಮಾ ಇರುವ ಹಣವನು ತೆಗೆದುಕೊಂಡು, ಸ್ವಲ್ಪ ಹಣವನ್ನು ತಿಂಗಳ ತಿಂಗಳ ಬಡ್ಡಿ ಬರುವಂತೆ ಮಾಡಿ. ಮತ್ತು ಸ್ವಲ್ಪ ಹಣವನ್ನು ಕೈಯಲ್ಲಿಟ್ಟುಕೊಂಡು ಶಿರಸಿ ಯ ಸಮೀಪ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ ಇರುವ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದೇವೆ…
ನಮಗೆ ಆಗಿದ್ದು ಯಾರಿಗೂ ಆಗದಿರಲಿ. ನಿಮಗೂ ಸಹಾ ನಿಮ್ಮ ಭವಿಷ್ಯಧ ಬಗ್ಗೆ ಕಾಳಜಿ ಇರಲಿ ನಿಮ್ಮ ಮಕ್ಕಳು ನಿಮ್ಮ ಬಳಿ ದುಡ್ಡು ಇರುವ ತನಕ ನಿಮ್ಮನ್ನು ನೋಡಿಕೊಳ್ಳುತ್ತಾರೆ. ಅಷ್ಟೇ… ಅನ್ನುತ್ತಾ ವಿಷಾದ ನಗೆ ಬೀರುತ್ತಾ.. ಅಲ್ಲಿಂದ ಸವಕಾಶವಾಗಿ ತಮ್ಮ ಮನೆ ಅತ್ತ ಹೆಜ್ಜೆ ಹಾಕಿದರು… ನೀವು ಸಹ ಕೊನೆಗಾಲದಲ್ಲಿ ನೀವು ದುಡಿದ ಹಣವನ್ನು ಜೋಪಾನವಾಗಿ ನಿಮ್ಮ ಬಳಿ ಇಟ್ಟುಕೊಳ್ಳಿ) ಎಂದು ಹೇಳುತ್ತಾ. ಹೋದರು…..(ಕಲಿಯುಗದಲ್ಲಿ ಪಾಠ ವನ್ನು ಕಲಿತಾನೆ ಇರಬೇಕು, ಇದುವೇ ಕಲಿಯುಗದ ನಿಯಮ ದುಡ್ಡೇ ದೊಡ್ಡಪ್ಪ)
– ರಾಘವೇಂದ್ರ ಸಿಂತ್ರೆ
ರಾಜಕಮಲ್, ಶಿರಸಿ