Table of Contents

ಶ್ಲೋಕ: ಶ್ರೀ ಕಂಠಪ್ಪಾಡಿ ಸುಬ್ರಹ್ಮಣ್ಯ ಸ್ವಾಮೀ

ಶಂಭು ಕುಮಾರ ಜಯ ಜಯ ತ್ರಿಜಗ ವಂದಿತನೆ ಶಂಕರ ತನಯ ವಿದ್ಯಾಧಿಪನ ಸೋದರನೆ ವೇದಾಧಿ ಪತಿಯೇ ವಂದೇ ಗುಹo ಶರಣo ಪ್ರಪದ್ಯೆ ವಂದೇ ಗುಹo ಶರಣo ಪ್ರಪದ್ಯೆ
ನಿನ್ನಯ ಪಾದಕೆ ಸಾಷ್ಟಾoಗ ವಂದನೆ ಭಕ್ತಿಯ ಗಾಯನವು ಸಮರ್ಪಣೆ ಕಾರ್ತಿಕೇಯನೆ ಸುಬ್ರಹ್ಮಣ್ಯನೆ.. ಆ.ಆ.ಆ.ಆ.

ಹಿಮಗಿರಿ ಒಡೆಯನ ಪ್ರಿಯ ಸುತನೆ
ಭಕ್ತಿಯಿಂದ ಕರೆದಾಗ ಬರುವ ಸ್ವಾಮಿಯೇ
ಪುಷ್ಪಾoಜಲಿ ಸಹಸ್ರ ನಾಮದ ಅರ್ಚನೆ
ಮನಸಿನ ನೋವನು ಕಳೆಯಲು ನಿನ್ನ ಪ್ರಾರ್ಥನೆ

ಭಾಗ್ಯ ಸೂಕ್ತ ಕುಂಕುಮಾರ್ಚನೆ ಹೂವಿನ
ಮಾಲೆಯು ನಿನಗೆ ಭಕ್ತಿಯ ಸಮರ್ಪಣೆ
ಬೇಡಿದ ವರವ ಕರುಣಿಪ ದೇವನ ಪಾದಕೆ
ನಾವು ಭಕ್ತಿಯಲಿ ಮಾಡುವ ವಂದನೆ

ನಿನ್ನ ಸನಿಹ ಗಣಪತಿ ಶಾಸ್ತಾರ ರಕ್ತೇಶ್ವರಿಯು
ನೆಲೆಸಿರುವ ಭವ್ಯ ದಿವ್ಯ ಶಕ್ತಿಯ ಕೇಂದ್ರವೂ
ಗರಿಕೆ ಮಾಲೆ ದೂರ್ವ ಹೋಮದಿಂ ಭಕ್ತರಿಗೆ
ಬರುವ ವಿಘ್ನವನು ದೂರ ಮಾಡು ದೇವನೆ

ಆಶ್ಲೇಷ ಬಲಿಯು ಕಾರ್ತಿಕ ಪೂಜೆಯು
ಸಕಲ ದೋಷ ಪರಿಹಾರ ನಿನ್ನಿಂದಲೆ
ಬರುವ ಕಷ್ಟ ದೂರ ಮಾಡು ಸ್ವಾಮಿಯೆ
ಕಂಠಪ್ಪಾಡಿಯ ಪುರವಾಸ ಕಾರ್ತಿಕೇಯನೆ

ರಚನೆ: ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ